Shahapur Constituency: ಬಿಜೆಪಿಯಲ್ಲಿ ಟಿಕೆಟ್ ಗೊಂದಲ- ಕಾಂಗ್ರೆಸ್ ಹಾದಿ ಸಲೀಸು?
ಯಾದಗಿರಿ, ಮಾರ್ಚ್ 25: ಶಹಾಪುರ ವಿಧಾನಸಭಾ ಕ್ಷೇತ್ರವು ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಒಂದಾಗಿದೆ. ಇದು ರಾಯಚೂರು ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಇದು ಯಾದಗಿರಿ ಜಿಲ್ಲೆಯಲ್ಲಿ ಬರುತ್ತದೆ. ಈ ಕ್ಷೇತ್ರವು 1951 ರಲ್ಲೇ ಅಸ್ತಿತ್ವಕ್ಕೆ ಬಂದಿದೆ.
ಇದು ಸಾಮಾನ್ಯ ವರ್ಗದ ವಿಧಾನಸಭಾ ಕ್ಷೇತ್ರವಾಗಿದೆ. ಇದು ಯಾದಗಿರಿ ಜಿಲ್ಲೆಯಲ್ಲಿದೆ ಮತ್ತು ರಾಯಚೂರು ಲೋಕಸಭೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಎಸ್‌ಸಿ ಮತದಾರರು ಸರಿ ಸುಮಾರು 53,063 ರಷ್ಟಿದ್ದಾರೆ. ಜನಗಣತಿಯ ಪ್ರಕಾರ ಶೇ 23.16 ರಷ್ಟಾಗಿದೆ.
ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಎಸ್‌ಟಿ ಮತದಾರರು ಸರಿ ಸುಮಾರು 24,722 ರಷ್ಟಿದ್ದಾರೆ, ಜನಗಣತಿಯ ಪ್ರಕಾರ ಶೇ 10.79 ರಷ್ಟಿದೆ.
ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸರಿ ಸುಮಾರು 39,637 ಆಗಿದ್ದು, ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 17.3 ರಷ್ಟಿದೆ.

ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮೀಣ ಮತದಾರರು ಸರಿ ಸುಮಾರು 173,075 ಆಗಿದ್ದು, ಜನಗಣತಿಯ ಪ್ರಕಾರ ಶೇ 75.54 ರಷ್ಟಿದೆ.
ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ನಗರ ಮತದಾರರು ಸರಿ ಸುಮಾರು 56,042 ರಷ್ಟಿದ್ದಾರೆ. ಜನಗಣತಿಯ ಪ್ರಕಾರ ಶೇ 24.46 ಆಗಿದೆ.
2019 ರ ಲೋಕಸಭೆಯ ಚುನಾವಣೆಯಂತೆ ಶಹಾಪುರ ವಿಧಾನಸಭೆಯ ಒಟ್ಟು ಮತದಾರರು ಸಂಖ್ಯೆ 229117 ರಷ್ಟಿದೆ.
2019 ರ ಲೋಕಸಭೆಯ ಚುನಾವಣೆಯಂತೆ ಶಹಾಪುರ ವಿಧಾನಸಭೆಯ ಮತಗಟ್ಟೆಗಳ ಸಂಖ್ಯೆ 265 ರಷ್ಟಿದೆ.
2019 ರ ಲೋಕಸಭೆಯ ಚುನಾವಣೆಯಲ್ಲಿ ಶಹಾಪುರ ವಿಧಾನಸಭೆಯ ಮತದಾರರ ಮತದಾನ ಶೇ 58.15 ರಷ್ಟಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಶಹಾಪುರ ವಿಧಾನಸಭೆಯ ಮತದಾರರ ಮತದಾನ ಶೇ 69.34 ರಷ್ಟಿದೆ.
ಶಹಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕರು
2018 ರ ವಿಧಾನಸಭಾ ಚುನಾವಣೆ : ಕಾಂಗ್ರೆಸ್‌ನಿಂದ ಶರಣಬಸಪ್ಪ ಗೌಡ ದರ್ಶನಾಪುರ
2013 ರ ವಿಧಾನಸಭಾ ಚುನಾವಣೆ: ಕೆಜೆಪಿಯಿಂದ ಗುರು ಪಾಟೀಲ್ ಶಿರವಾಳ
2008 ರ ವಿಧಾನಸಭಾ ಚುನಾವಣೆ : ಕಾಂಗ್ರೆಸ್‌ನಿಂದ ಶರಣಬಸಪ್ಪ ದರ್ಶನಾಪುರ
ಕಳೆದ 6 ಪ್ರಮುಖ ಚುನಾವಣೆಗಳಲ್ಲಿ ಬಿಜೆಪಿ 2 ಬಾರಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 3 ಬಾರಿ ಮತ್ತು ಕೆಜೆಪಿ 1 ಬಾರಿ ಮುನ್ನಡೆ ಸಾಧಿಸಿದೆ.
ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕೆಪಿಸಿಸಿಗೆ ಇವರೊಬ್ಬರೇ ಅರ್ಜಿ ಸಲ್ಲಿಸಿದ್ದು, ಇವರಿಗೆ ಟಿಕೆಟ್ ಖಚಿತವಾಗಿದೆ. ಹೀಗಾಗಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಯಾವುದೇ ಗೊಂದಲವಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಗ್ಗೆ ಭಾರೀ ಗೊಂದಲವಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಗುರು ಪಾಟೀಲ್ ಅವರು ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಬಿಜೆಪಿ ಯುವ ಮುಖಂಡ ಅಮಿನರೆಡ್ಡಿ ಯಾಳಗಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ ಡಾ.ಚಂದ್ರಶೇಖರ ಸುಬೇದಾರ, ಡಾ.ವೀರಭದ್ರಪ್ಪಗೌಡ ಹೊಸಮನಿ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವುದು ಬಾರೀ ಗೊಂದಲಕ್ಕೆ ಕಾರಣವಾಗಿದೆ. ಯುವ ಮುಖಂಡ ಅಮಿನ ರೆಡ್ಡಿ ಬಿಜೆಪಿ ತೊರೆದಿರುವುದರಿಂದ ಜೆಡಿಎಸ್ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.












Click it and Unblock the Notifications