Saundatti Yellamma Constituency: ಬಿಜೆಪಿ ಹ್ಯಾಟ್ರಿಕ್ ಮುಂದುರಿಯುತ್ತಾ, ಬಿಜೆಪಿ-ಕಾಂಗ್ರೆಸ್ ಟಿಕೆಟ್ ಯಾರಿಗೆ?
ಬೆಂಗಳೂರು, ಮಾರ್ಚ್ 26: ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರವು ಬೆಳಗಾವಿ ಲೋಕಸಭಾ ಕ್ಷೇತ್ರವೊಂದರ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.
ಸವದತ್ತಿಯನ್ನು ಸೌಂದತ್ತಿ ಅಂತಲೂ ಕರೆಯಲಾಗುತ್ತಿದ್ದು, ಇತ್ತೀಚೆಗೆ ಅಂದರೆ 2008ರಲ್ಲಿ ವಿಧಾನಸಭಾ ಕ್ಷೇತ್ರ ವಿಂಗಡಣೆಯಾದಾಗ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಅಲ್ಲಿಂದ ಈವರೆಗೆ ಮೂರು ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. ಇದೇ ಕ್ಷೇತ್ರದಲ್ಲಿ ನಾಲ್ಕನೇ ವಿಧಾನಸಭಾ ಚುನಾವಣೆ 2023ರ ಮೇ ತಿಂಗಳಲ್ಲಿ ಜರುಗಲಿದೆ.

ಈ ಕ್ಷೇತ್ರದಲ್ಲಿ ಪ್ರಮುಖ ಆಕರ್ಷಣೆ, ಹೆಚ್ಚು ಪ್ರಸಿದ್ಧಿ ಪಡೆದದ್ದು 'ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ'. ನಿತ್ಯ ಸಾವಿರಾರು ಭಕ್ತರು ಹಾಗೂ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಇದು ಸವತ್ತಿಯಿಂದ ಐದು ಕಿಲೋ ಮೀಟರ್ ದೂರದಲ್ಲಿದೆ. ಪ್ರಮುಖ ಯಾತ್ರಾ ಸ್ಥಳವೂ ಹೌದು.
ಈ ದೇವಸ್ಥಾನ ಪ್ರಾಚೀನ ಕಾಲದ್ದು, ಹೆಣ್ಣುಮಕ್ಕಳನ್ನು ದೇವಸ್ಥಾನಕ್ಕೆ ಅರ್ಪಿಸುವ ದೇವದಾಸಿ ಪದ್ಧತಿಗೆ ಸಂಬಂಧಿಸಿದ್ದು. ಈ ದೇವಾಲಯದ ಸ್ಥಳದಿಂದ ಸ್ವಲ್ಪ ದೂರು ಮಲಪ್ರಭಾ ನದಿ ಕಾಣಬಹುದಾಗಿದೆ. ಈ ಧಾರ್ಮಿಕ ಕ್ಷೇತ್ರ ಸೇರಿದಂತೆ ಇಡಿ ಇನ್ನಷ್ಟು ಅಭಿವೃದ್ಧಿ ಕಾಣಬೇಕು ಎಂಬುದು ಇಲ್ಲಿನವರು ಆಶಯವಾಗಿದೆ.
ರಾಜಕೀಯ ಇತಿಹಾಸ
ಬಿಜೆಪಿಯ ಆನಂದ್ ಚಂದ್ರಶೇಖರ್ ಮಾಮನಿ (ವಿಶ್ವನಾಥ್ ಮಾಮನಿ) 2018 ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 62ಸಾವಿರ ಮತಗಳಿಂದ ಗೆದ್ದಿದ್ದರು. ಆನಂದ್ ಅವರ ತಂದೆ ಚಂದ್ರಶೇಖರ ಮಾಮನಿ ಅವರು 1994 ರಲ್ಲಿ ಪರಸಗಡದಿಂದ ಜನತಾ ದಳದ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದವರು. ಅವರ ಪುತ್ರ ಆನಂದ್ ಮಾಮನಿ ಅವರು ಮಾರ್ಚ್ 2020 ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಉಪಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದರು.

2008 ರಿಂದಲೂ ಇಲ್ಲಿ ಬಿಜೆಪಿಯೇ ಸಾರ್ವಭೌಮ ವಾಗಿದೆ. ಅಂದಿನಿಂದಲೂ ಸಾಕಷ್ಟು ಮತಗಳ ಅಂತರದಿಂದ ಗೆಲುವುದ ಸಾಧಿಸುತ್ತಾ ಬಂದಿದೆ. ಕ್ಷೇತ್ರದ ಕೈವಶಕ್ಕೆಂದು ಕಾಂಗ್ರೆಸ್ ಪ್ರಯತ್ನಿಸುತ್ತಲೇ ಇದೆ. ಆದರೆ ಒಮ್ಮೆಯು ಕೈ ನಾಯಕರ ಪ್ರಯತ್ನ ಫಲ ನೀಡಿಲ್ಲ ಎಂದು ತಿಳಿದು ಬಂದಿದೆ.
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಆನಂದ ಮಾಮನಿ | 62,480 | ಆನಂದ ಚೋಪ್ರ | 56,189 |
| 2013 | ಆನಂದ ಮಾಮನಿ | 46,434 | ರವೀಂದ್ರ ಬಿ.ಯಲಿಗರ್ | 30,392 |
| 2008 | ಆನಂದ ಮಾಮನಿ | 48,255 | ಸಿದ್ದರಾಮಪ್ಪ ಕೌಜಲಗಿ | 43,678 |
ಪ್ರತಿ ಸಲ ವಿಧಾನಸಭಾ ಚುನಾವಣೆ ಎದುರಾದಾಗಲು ಕಾಂಗ್ರೆಸ್ ಪಕ್ಷವು ಹೊಸ ಹೊಸ ತಂತ್ರವನ್ನು ಪ್ರಯೋಗಿಸಿದೆ. ಪ್ರತಿ ಚುನಾವಣೆಯಲ್ಲೂ ತನ್ನ ಅಭ್ಯರ್ಥಿಗಳನ್ನು ಪಕ್ಷ ಪುನರಾವರ್ತಿಸಿಲ್ಲ. ಈವರೆಗಿನ ಮೂರು ಚುನಾವಣೆಯಲ್ಲಿ ಸೋತರು ಪ್ರತಿ ಬಾರಿಯು ಬೇರೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಸಿದರೂ ಅದೃಷ್ಟ ತನ್ನದಾಗಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಅದೇ ರೀತಿ ಈ ಭಾರಿಯು ಹೊಸ ಮತ್ತು ಪ್ರಬಲ ನಾಯಕರ ಹುಡುಕಾಟದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗಿದೆ. ಈ ಕಾರಣದಿಂದಲೇ ಏನೋ ಶನಿವಾರ ಮಾರ್ಚ್ 25ರಂದ ಕಾಂಗ್ರೆಸ್ ಹೊರಡಿಸಿದ 124 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಸವದತ್ತಿ ಯಲಮ್ಮ ಕ್ಷೇತ್ರದ ಹೆಸರು ಇಲ್ಲ. ಎರಡನೇ ಪಟ್ಟಿಯಲ್ಲಿ ಮುಂಚೂಣಿ ನಾಯಕರನ್ನು ಚುನಾವಣಾ ಅಖಾಡಕ್ಕಿಳಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಅದೃಷ್ಟ ಪರೀಕ್ಷೆ ಇಳಿಯಲಿದೆ.

ಹ್ಯಾಟ್ರಿಕ್ ಶಾಸಕ ಮಾಮನಿ ನಿಧನ: ಪಕ್ಷಕ್ಕೆ ಸಂಕಷ್ಟ
ತೀವ್ರ ಅನಾರೋಗ್ಯ ಕಾರಣದಿಂದ ಬಿಜೆಪಿ ನಾಯಕ ಆನಂದ ಮಾಮನಿ ಅವರು 2022ರ ಅಕ್ಟೋಬರ್‌ನಲ್ಲಿ ನಿಧನರಾದರು. ಬಿಜೆಪಿಗೆ ಪಕ್ಷಕ್ಕೆ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾದರು. ಅವರ ಈ ಶ್ರಮದಿಂದಲೇ ಸತತವಾಗಿ ಮೂರು ಭಾರಿ ಶಾಸಕರಾಗಿದ್ದರು.
ಇನ್ನೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಎಚ್.ವಿ. ಕೌಜಲಗಿ, ಎಸ್.ಬಿ. ಪದಕಿ, ವೆಂಕರಡ್ಡಿ ಎಸ್. ತಿಮ್ಮರಡ್ಡಿ, ಕೆ.ಎಚ್. ವೀರಭದ್ರಪ್ಪ, ಜಿ.ಕೆ. ಟಕ್ಕೇದ, ಆರ್.ವಿ. ಪಾಟೀಲ, ಸಿ.ಎಂ. ಮಾಮನಿ, ಎಸ್.ಎಸ್. ಕೌಜಲಗಿ, ವಿಶ್ವನಾಥ ಕೆ. ಮಾಮನಿ ಇವರೆಲ್ಲ ಚುನಾವಣೆ ಎದುರಿಸಿದ್ದ ಘಟಾನುಘಟಿಗಳು. ಅವರೆಲ್ಲರ ಪೈಕಿ ಸತತವಾಗಿ ಗೆದಿದ್ದು ಈ ಆನಂದ ಮಾಮನಿಯವರು.
ಇಂತಹ ಮಹಾನಾಯಕನಿಂದ ಬಿಜೆಪಿಗೆ ತುಂಬಲಾರದ ನಷ್ಟ ಉಂಟಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತುಸು ಸಂಕಷ್ಟ ಎದುರಾಗುವ ಸಾಧ್ಯತೆಯು ಇದೆ. ಈ ವೇಳೆ ಕಾಂಗ್ರೆಸ್ ತೀವ್ರ ಪೈಪೋಟ ಒಡ್ಡಲು ಸಜ್ಜಾಗಿದ್ದರೆ, ಇತ್ತ ಬಿಜೆಪಿ ಅನುಕಂಪ, ಮಾಮನಿ ಅವರು ಹೆಸರಿನ ಮೇಲೆ ಮತದಾರರ ಒಲೈಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
ಯುವಕರಿಗೆ ಟಿಕೆಟ್
ಕ್ಷೇತ್ರದಲ್ಲಿ ನಿಮ್ಮೆಲ್ಲರ ಅಭಿಲಾಷಯದಂತೆ ಬಿಜೆಪಿ ನಡೆದುಕೊಳ್ಳಲಿದೆ. ಈ ಬಾರಿ ಯುವಕರಿಗೆ ಪಕ್ಷದಿಂದ ಟಿಕೆಟ್ ಸಿಗಲಿದೆ. ಪ್ರತಿ ಸಲದಂತೆ ಈ ಸಲವು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎನ್ನುವ ಮೂಲಕ ಬಿಎಸ್ ಯಡಿಯೂರಪ್ಪ ಅವರು ಹೊಸಬರಿಗೆ ಟಿಕೆಟ್ ಎನ್ನುವ ಸುಳಿವು ನೀಡಿದ್ದರು. ಇತ್ತ ಕಾಂಗ್ರೆಸ್ ನಿಂದ ವರುಣಾ, ಕೋಲಾರ, ಬಾದಾಮಿಯಿಂದ ಸದ್ಯ ಸ್ಪರ್ಧಿಸುವ ಚಿಂತನೆಯಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೊಮ್ಮೆ ಸವದತ್ತಿ ಯಲಮ್ಮ ಕ್ಷೇತ್ರದ ಮೇಲೂ ಕಣ್ಣಿಟ್ಟದ್ದರು. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಹ ಕಣ್ಣಿಟ್ಟಿದ್ದರು. ಸದ್ಯ ಬದಲಾವಣೆ ಬೆಳವಣಿಗೆ ನೋಡಿದರೆ ಈ ಇಬ್ಬರು ಬಿಟ್ಟುಬೇರೆಯವರಿಗೆ ಪಕ್ಷ ಮಣೆ ಹಾಕುವ ಸಾಧ್ಯತೆ ಇದೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Vijay Thalapathi: ಟಿವಿಕೆ ಸಂಸ್ಥಾಪಕ, ನಟ ವಿಜಯ್ ದಳಪತಿ ವಿರುದ್ಧ ಪ್ರಕರಣ ದಾಖಲು -
Thalapathy Vijay Assets: ನಾಮಪತ್ರ ಸಲ್ಲಿಸಿದ ವಿಜಯ್, ಇವರ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ












Click it and Unblock the Notifications