Ron Elections: ರೋಣ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ
ರೋಣ, ಮಾರ್ಚ್ 24: ಗದಗ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ. ರೋಣ ಸುಡುಬಿಸಿಲಿನ ಬಯಲು ಭೂಮಿ. ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಜನಪದೀಯ ಸಿರಿ-ಸಂಪ್ರದಾಯದ ಸೀಮೆಯಾಗಿವೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು ಕ್ಷೇತ್ರ ಚಿತ್ರಣ ಇಲ್ಲಿದೆ.
ರೋಣ ಗದಗ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಪ್ಪು ಮಣ್ಣಿನಿಂದ ಸಮೃದ್ಧವಾದ ಈ ತಾಲ್ಲೂಕಿನಲ್ಲಿ ಸಂಕರಣ ಹತ್ತಿ ಪ್ರಮುಖ ಬೆಳೆಯಾಗಿದೆ. ರೋಣ ತಾಲುಕಿನನ ಕೊಡೀಕೊಪ್ಪ ಗ್ರಾಮದ ವೀರಪ್ಪಜ್ಜ ಶಿವಯೋಗಿಗಳ ಮಠವಿದೆ. ಪ್ರಾಚೀನ ಕಾಲದಲ್ಲಿ ಈ ಪಟ್ಟಣವನ್ನು ದ್ರೋಣಪುರ ಎಂದು ಕರೆಯಲಾಗುತ್ತಿತ್ತು. ದೇವಾಲಯಗಳನ್ನು ಪ್ರಾಚೀನ ವಾಸ್ತುಶಿಲ್ಪಿ ಮತ್ತು ಯೋಧ-ಪುರೋಹಿತ ದ್ರೋಣಾಚಾರ್ಯರು ನಿರ್ಮಿಸಿದ್ದಾರೆಂದು ನಂಬಲಾಗಿದೆ.

ಭೀಮಸೇನ್ ಜೋಶಿಯವರು ತಮ್ಮ ತಾಯಿಯ ಮನೆಯಾದ ರೋಣದಲ್ಲಿ ಜನಿಸಿದರು. ಅಲ್ಲದೆ ರೋಣದಲ್ಲಿ ಗಿರಡ್ಡಿ ಗೋವಿಂದರಾಜ್, ಆರ್.ಸಿ.ಹಿರೇಮಠ (ಕನ್ನಡ ವಿದ್ವಾಂಸ), ರಾಜಶೇಖರ್ ಭೂಸನೂರಮಠ, ಬಿ.ವಿ.ಮಲ್ಲಾಪುರ (ಕನ್ನಡ ವಿದ್ವಾಂಸ) ಮತ್ತು ಆಲೂರು ವೆಂಕಟರಾವ್ ಅವರು ಕೂಡ ರೋಣ ತಾಲೂಕಿನಲ್ಲಿ ಜನಿಸಿದವರಾಗಿದ್ದಾರೆ.
ರೋಣ ಕ್ಷೇತ್ರವು ಹಲವಾರು ಐತಿಹಾಸಿಕ ಪ್ರದೇಶಗಳ ತಾಣವಾಗಿದೆ. ಇಲ್ಲಿ ಸದ್ಗುರು ಸಿದ್ಧಾರೂಢ ಸ್ವಾಮಿ ದೇವಸ್ಥಾನ, ಅನಂತಶಯನ ದೇವಸ್ಥಾನ, ಅನಂತಶಯನ ದೇವಸ್ಥಾನದ ಬಳಿ ಈಶ್ವರ ದೇವಸ್ಥಾನ, ಈಶ್ವರ ದೇವಸ್ಥಾನ, ಈಶ್ವರನಗರದಲ್ಲಿರುವ ಕಲ್ಲ ಗುಡಿ (ಕಲ್ಲಿನ ದೇವಸ್ಥಾನ), ಲೋಕನಾಥ ದೇವಾಲಯ, ಮಲ್ಲಿಕಾರ್ಜುನ ದೇವಸ್ಥಾನ, ಪಾರ್ಶ್ವನಾಥ ಜೈನ ದೇವಾಲಯ, ಸೋಮಲಿಂಗೇಶ್ವರ ದೇವಸ್ಥಾನ ಇದೆ. ಇಲ್ಲಿನ ಶ್ರೀ ವೀರಭದ್ರೇಶ್ವರ ದೇವಸ್ಥಾನವು ರೋಣದ ಪ್ರಮುಖ ದೇಗುಲವಾಗಿದೆ. ಇಲ್ಲಿ ಗಜೇಂದ್ರಗಡ ರಸ್ತೆಯಲ್ಲಿರುವ ಶಿವಾನಂದ ಮಠದಲ್ಲಿ ವಾರ್ಷಿಕ ರಥೋತ್ಸವವು ಮೇ ತಿಂಗಳಲ್ಲಿ ನಡೆಯುತ್ತದೆ.
ರೋಣ ಮತ್ತು ಗಜೇಂದ್ರಗಡ ಸುಡುಬಿಸಿಲಿನ ಬಯಲು ಭೂಮಿ. ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಜನಪದೀಯ ಸಿರಿ-ಸಂಪ್ರದಾಯದ ಸೀಮೆಯಾಗಿವೆ. ಸರಕಾರಿ ಕಡತಗಳಲ್ಲೇ ಹಿಂದುಳಿದ ಪ್ರದೇಶವೆಂದು ದಾಖಲಾಗಿರುವ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಅಪಾರ ಸಮಸ್ಯೆಗಳು ಇವೆ. ರಸ್ತೆ ಕುಡಿಯುವ ನೀರು, ಉದ್ಯೋಗ ಇವೆ ಮೊದಲಾದವು ಜನರು ಇನ್ನೂ ಮೂಲಭೂತ ಅವಶ್ಯಕತೆಗಳಿಗೆ ಹಾಹಾಕಾರ ಇದ್ದೇ ಇದೆ.
ರಾಜಕೀಯ ಮತ್ತು ಜಾತಿ ಪ್ರತಿಷ್ಠೆದಲ್ಲಿ ರೋಣ ಕ್ಷೇತ್ರ ಹಿಂದುಳಿದಿಲ್ಲ. ಲಿಂಗಾಯತ ಏಕಸ್ವಾಮ್ಯವಿರುವ ಕ್ಷೇತ್ರದಲ್ಲಿ ರಾಜಕೀಯ-ಸಾಮಾಜಿಕ ವ್ಯವಸ್ಥೆ ಮಡುಗಟ್ಟಿರುವ ರೋಣ ಲಿಂಗಾಯತೇತರರಿಗೆ ಸಿಕ್ಕ ಸ್ಥಾನಮಾನ ಕಡಿಮೆಯೇ. 1957ರ ಮೊದಲ ಚುನಾವಣೆಯಿಂದ ಎಲ್ಲ ಪಕ್ಷಗಳೂ ಲಿಂಗಾಯತರಿಗೆ ಟಿಕೆಟ್ ಕೊಡುತ್ತಾ ಬಂದಿವೆ. ರಾಜಕೀಯ ಪ್ರಜ್ಞೆಯ ವಿಧಾನಸಭಾ ಕ್ಷೇತ್ರವೆಂದು ಪರಿಗಣಿತವಾಗಿರುವ ರೋಣದಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲದ ಹೋರಾಟವಿದೆ. ಎರಡೂ ಕಡೆ ಜಿದ್ದಿಗೆ ಬಿದ್ದು ಹೋರಾಡುವ ಪಕ್ಷ ನಿಷ್ಠ, ನಾಯಕ ನಿಷ್ಠ ಕಾರ್ಯಕರ್ತರ ದೊಡ್ಡ ಪಡೆಯೇ ಇಲ್ಲಿ ಇದೆ.

ಬಿಜೆಪಿಯ ಮಾಜಿ ಮಂತ್ರಿ ಕಳಕಪ್ಪ ಬಂಡಿ
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಮಂತ್ರಿ ಕಳಕಪ್ಪ ಬಂಡಿ ಇದ್ದಾರೆ. ಸದ್ಯ ಇವರ ಬಗ್ಗೆ ಕ್ಷೇತ್ರದಲ್ಲಿ ಅಸಮಾಧಾನ ಬುಸುಗುಡುತ್ತಿದೆ. ಯಡಿಯೂರಪ್ಪರಂಥ ದೊಡ್ಡ ನಾಯಕರ ಕೆಂಗಣ್ಣಿಗೆ ತುತ್ತಾಗಿರುವ ಕಳಕಪ್ಪ ಬಂಡಿಗೆ ಬಿಜೆಪಿ ಈ ಬಾರಿ ಟಿಕೆಟ್ ಸಿಗಲಾರದೆಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಕೆಲವು ದಿನದ ಹಿಂದೆ ಗದಗಿಗೆ ಬಂದಿದ್ದ ಯಡಿಯೂರಪ್ಪ ಬಂಡಿ ಬೇಡವೆಂದು ಜನ ಹೇಳುತ್ತಿದ್ದಾರೆ ಎಂದಿದ್ದರು.
ಗುರುಪಾದಗೌಡ ಸಂಗನಗೌಡ ಪಾಟೀಲ ಸೋಲು
ರೋಣ ಕ್ಷೇತ್ರದಲ್ಲಿ 2018ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಗುರುಪಾದಗೌಡ ಸಂಗನಗೌಡ ಪಾಟೀಲ 7,334 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಈಗ 2023ರಲ್ಲಿ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅವರೂ ಪ್ರಬಲ ಪ್ರಚಾರ ಆರಂಭಿಸಿದ್ದಾರೆ. ಕಳಕಪ್ಪ ಬಂಡಿ ಅವರ ಅವರ ವಿರುದ್ಧ ಬಿಜೆಪಿ ನಾಯಕರಲ್ಲಿ ಅಸಮಾಧಾನ ಇದೆ. ಅವರು ಕಾನೂನುಬಾಹಿರ ಮರಳುಗಾರಿಕೆ ಬಂದ್ ಮಾಡಲು ಬಂದ ಅಧಿಕಾರಿಗೆ ಶಾಸಕರು ಆವಾಜ್ ಹಾಕಿ ಹಿಮ್ಮೆಟ್ಟಿಸಿದ್ದರು. ಈ ಘಟನೆ ಬಗ್ಗೆ ಜಿಲ್ಲಾ ಮಂತ್ರಿ ಸಿ.ಸಿ.ಪಾಟೀಲ್ ಮತ್ತು ಶಾಸಕ ಬಂಡಿ ಕೆಡಿಪಿ ಮೀಟಿಂಗ್‌ನಲ್ಲಿ ಬಹಿರಂಗವಾಗಿ ಬೈದಾಡಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು. ಹೀಗಾಗಿ ಬಂಡಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ.
Ron Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಕಳಕಪ್ಪ ಬಂಡಿ(ಬಿಜೆಪಿ) | 83735 | ಗುರುಪಾದಗೌಡ ಪಾಟೀಲ್ (ಕಾಂಗ್ರೆಸ್) | 76,401 |
| 2013 | ಗುರುಪಾದಗೌಡ ಪಾಟೀಲ (ಕಾಂಗ್ರೆಸ್) | 74,593 | ಕಳಕಪ್ಪ ಬಂಡಿ(ಬಿಜೆಪಿ) | 56,026 |
| 208 | ಕಾಳಪ್ಪ ಬಂಡಿ (ಬಿಜೆಪಿ) | 50,145 | ಗುರುಪಾದಗೌಡ ಪಾಟೀಲ (ಕಾಂಗ್ರೆಸ್) | 48,315 |
ದಲಿತರ ಮನೆ ಮುಂದೆ ಕೊಳಚೆ ನೀರು
ಶಾಸಕರ ಅಳಿಯ ಶಿವರಾಮ ದೇಸಾಯಿ ಬಾಳಗೋಡು ಎಂಬ ಹಳ್ಳಿಯ ದಲಿತರ ಮನೆ ಮುಂದೆ ಕೊಳಚೆ ನೀರು ನಿಲ್ಲುವಂತೆ ಮಾಡಿ ಕಾಡಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಮಠಾಧೀಶರಿಗೂ ಶಾಸಕರ ಬಗ್ಗೆ ಸದಭಿಪ್ರಾಯವಿಲ್ಲ. ಹೀಗಾಗಿ ಶಾಸಕ ಬಂಡಿಯನ್ನು ಹೊರಗಿಟ್ಟೇ ರೋಣದಲ್ಲಿ ಜಯಮೃತ್ಯುಂಜಯ ಸ್ವಾಮಿ ಪಂಚಮಸಾಲಿ ಸಮಾವೇಶ ನಡೆಸಿದ್ದರು. ಹೀಗಾಗಿ ಬಂಡಿ ಬದಲಿಗೆ ಮುಂಡರಗಿ ಭಾಗದ ಹೇಮಗಿರಿ ಶಾವಿನಾಳ್, ಕುರುಬ ಸಮುದಾಯದ ರವಿ ದಂಡಿನ್, ಎಮ್ಮೆಲ್ಸಿ ಎಸ್.ವಿ.ಸಂಕನೂರ್ ಸಂಬಂಧಿ ಅಂದಪ್ಪ ಸಂಕನೂರ್ ಹೆಸರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಜಿ.ಎಸ್.ಪಾಟೀಲ್ ಅವರಿಗೆ ಟಿಕೆಟ್ ಪೈಪೋಟಿ ಇಲ್ಲ
ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಟಿಕೆಟ್ ಪೈಪೋಟಿ ಇಲ್ಲ. ಬಾಗಲಕೋಟೆಯ ಮಾಜಿ ಸಂಸದ ಆರ್.ಎಸ್.ಪಾಟೀಲ್, ಕರ್ನಾಟಕ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಸಹೋದರರಾದ ಜಿ.ಎಸ್.ಪಾಟೀಲ್ ಕುಟುಂಬಕ್ಕೆ ರೋಣ ವಿಧಾನಸಭಾ ರಾಜಕಾರಣದಲ್ಲಿ ಉತ್ತಮವಾದ ವರ್ಚಸ್ಸಿದೆ. ಅಲ್ಲದೆ ಸೌಮ್ಯ ಸ್ವಭಾವದ ಪಾಟೀಲ್ ಜನರನ್ನು ಹಚ್ಚಿಕೊಳ್ಳುತ್ತಾರೆ. ಬಿಜೆಪಿ ಶಾಸಕ ಕಳಕಪ್ಪ ಬಂಡಿಗೆ ಹೋಲಿಸಿದರೆ ಉತ್ತಮ ಅಭ್ಯರ್ಥಿ ಎಂಬ ಅನಿಸಿಕೆ ಕ್ಷೇತ್ರದಲ್ಲಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications