• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾರ್ಖಂಡ್ ನಲ್ಲಿ 'ಕೈ' ಮೇಲೆ ಮಾಡುತ್ತಾರಾ ಈ ಪ್ರಚಾರಕರು?

|
Google Oneindia Kannada News

ರಾಂಚಿ, ನವೆಂಬರ್.14: ಎಲೆಕ್ಷನ್ ಎಂದ ಮೇಲೆ ಸ್ಟಾರ್ ಪ್ರಚಾರಕರು ಬೇಕೇ ಬೇಕು. ಪ್ರಸಿದ್ಧ ನಾಯಕರನ್ನೇ ಮುಂದಿಟ್ಟುಕೊಂಡು ಅಭ್ಯರ್ಥಿಗಳು ತಮಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡುತ್ತಾರೆ. ಅವರ ಮುಖ ನೋಡಿಕೊಂಡು ಜನರೂ ಕೂಡಾ ಅಭ್ಯರ್ಥಿಗಳ ಪರ ವೋಟ್ ಹಾಕುವ ಸಾಧ್ಯತೆಗಳೂ ಇರುತ್ತವೆ.

ಬಿಜೆಪಿ ಎಂದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಫಸ್ಟ್ ಸ್ಟಾರ್ ಕ್ಯಾಂಪೇನರ್. ಅವರ ಮುಖವನ್ನೇ ನೋಡಿಕೊಂಡು ಬಿಜೆಪಿಗರು ಮತ ಕೇಳುತ್ತಾರೆ. ಉಳಿದಂತೆ ಬಿಜೆಪಿ ಚಾಣಕ್ಯನ ಆಟವರೂ ಕೆಲವು ರಾಜ್ಯಗಳಲ್ಲಿ ವರ್ಕೌಟ್ ಆಗುತ್ತದೆ.

ಜಾರ್ಖಂಡ್ ವಿಧಾನಸಭೆಗಾಗಿ ಬಿಜೆಪಿ ರಣತಂತ್ರ, 52 ಅಭ್ಯರ್ಥಿಗಳ ಪಟ್ಟಿ ಪ್ರಕಟಜಾರ್ಖಂಡ್ ವಿಧಾನಸಭೆಗಾಗಿ ಬಿಜೆಪಿ ರಣತಂತ್ರ, 52 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಇದು ಬಿಜೆಪಿ ಕಥೆಯಾದರೆ, ಕಾಂಗ್ರೆಸ್ ನಲ್ಲೂ ಸ್ಟಾರ್ ಪ್ರಚಾರಕರ ದೊಡ್ಡ ದಂಡೇ ಇದೆ. ಅವರ ಮುಖವನ್ನು ನೋಡಿಕೊಂಡೇ ಮತದಾರರು ವೋಟ್ ಮಾಡುತ್ತಾರೆ. ಒಮ್ಮೊಮ್ಮೆ ರಾಷ್ಟ್ರೀಯ ನಾಯಕರನ್ನು ನೋಡಿಕೊಂಡು, ತಮ್ಮ ಕ್ಷೇತ್ರದಲ್ಲಿ ಗೊತ್ತಿಲ್ಲದ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ ಉದಾಹರಣೆಗಳೂ ಇವೆ. ಈಗ ಇಷ್ಟೆಲ್ಲ ಪೀಡಿಕೆ ಹಾಕುವುದಕ್ಕೆ ಕಾರಣವರೇ ಜಾರ್ಖಂಡ್ ವಿಧಾನಸಭಾ ಚುನಾವಣೆ.

ಐದು ಹಂತಗಳಲ್ಲಿ ಮತದಾನ ಪ್ರಕ್ರಿಯೆ

ಐದು ಹಂತಗಳಲ್ಲಿ ಮತದಾನ ಪ್ರಕ್ರಿಯೆ

ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ನವೆಂಬರ್.30 ರಿಂದ ಡಿಸೆಂಬರ್.20ರವರೆಗೂ ಐದು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್.23ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಈಗಿರುವ ಸರ್ಕಾರದ ಅವಧಿ ಡಿಸೆಂಬರ್.27ಕ್ಕೆ ಮುಕ್ತಾಯಗೊಳ್ಳಲಿದೆ.

ಕಾಂಗ್ರೆಸ್ ರಿಲೀಸ್ ಮಾಡಿದೆ ಪಟ್ಟಿ

ಕಾಂಗ್ರೆಸ್ ರಿಲೀಸ್ ಮಾಡಿದೆ ಪಟ್ಟಿ

81 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ತಂತ್ರ ಹೆಣೆದಿದೆ. ಕೈ ಪಕ್ಷದ ಅಭ್ಯರ್ಥಿಗಳ ಪರ ಅಖಾಡಕ್ಕೆ ಧುಮುಕಲು ಕಾಂಗ್ರೆಸ್ ಕಲಿಗಳ ಪಟ್ಟಿ ರೆಡಿಯಾಗಿದೆ. ಇಂದು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ನಿಂದ 3ನೇ ಪಟ್ಟಿ ಬಿಡುಗಡೆಜಾರ್ಖಂಡ್ ಚುನಾವಣೆ: ಕಾಂಗ್ರೆಸ್ ನಿಂದ 3ನೇ ಪಟ್ಟಿ ಬಿಡುಗಡೆ

ಕಾಂಗ್ರೆಸ್ ಲಿಸ್ಟ್ ನಲ್ಲಿ ಇವೋದ್ಯಾರು ಗೊತ್ತಾ?

ಕಾಂಗ್ರೆಸ್ ಲಿಸ್ಟ್ ನಲ್ಲಿ ಇವೋದ್ಯಾರು ಗೊತ್ತಾ?

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಅಧೀರ್ ರಂಜನ್ ಚೌದ್ರಿ, ಗುಲಾಮ್ ನಬಿ ಆಜಾದ್, ಅಶೋಕ್ ಗೆಹ್ಲೋಟ್, ರಣ್ ದೀಪ್ ಸಿಂಗ್ ಸರ್ಜೇವಾಲಾ, ಸಲೀಂ ಅಹ್ಮದ್, ಕೇಶವ್ ಮಹ್ತೋ, ರಾಜೇಶ್ ಠಾಕೂರ್, ಸಂಜಯ್ ಲಾಲ್ ಪಾಸ್ವಾನ್, ರವೀಂದರ್ ಸಿಂಗ್ ಸೇರಿದಂತೆ ಒಟ್ಟು 40 ಮಂದಿ ಕಾಂಗ್ರೆಸ್ ನಾಯಕರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಾಗಿದೆ.

81 ರ ಪೈಕಿ 31ರಲ್ಲಿ ಕಾಂಗ್ರೆಸ್ ಕಲಿಗಳು!

81 ರ ಪೈಕಿ 31ರಲ್ಲಿ ಕಾಂಗ್ರೆಸ್ ಕಲಿಗಳು!

ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೆ ಎರಡು ಬಾರಿ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು. ಕಳೆದ ನವೆಂಬರ್.11ರಂದು ಕಾಂಗ್ರೆಸ್ 19 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ರಿಲೀಸ್ ಮಾಡಿತ್ತು.

ಜಾರ್ಖಂಡ್ ವಿಧಾನಸಭಾ ಚುನಾವಣೆ ಘೋಷಣೆ, ಡಿ. 23ಕ್ಕೆ ಫಲಿತಾಂಶಜಾರ್ಖಂಡ್ ವಿಧಾನಸಭಾ ಚುನಾವಣೆ ಘೋಷಣೆ, ಡಿ. 23ಕ್ಕೆ ಫಲಿತಾಂಶ

ಕೇಸರಿ ಪಡೆಯ 52 ಅಭ್ಯರ್ಥಿಗಳ ಪಟ್ಟಿ ರಿಲೀಸ್

ಕೇಸರಿ ಪಡೆಯ 52 ಅಭ್ಯರ್ಥಿಗಳ ಪಟ್ಟಿ ರಿಲೀಸ್

ಜಾರ್ಖಂಡ್ ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಲ್ಲಿನ ಸ್ಥಳೀಯ ಪಕ್ಷ ಎಜೆಎಸ್ ಯು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದೆ. ಕಳೆದ ನವೆಂಬರ್.10ರಂದು ಅಂದರೆ ಬಾನುವಾರವಷ್ಟೇ ಬಿಜೆಪಿ 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇನ್ನು, ಉಳಿದಂತೆ ಆರ್ ಜೆಡಿ 7 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಜೆಎಂಎಂ ಪಕ್ಷವೂ 43 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲಿದೆ.

English summary
Jharkhand Assembly Poll: 40 Star Campaigners In National Party. Congress Release The List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X