Jharkhand Election Live: ಜಾರ್ಖಂಡ್ 5ನೇ ಹಂತದ ಮತದಾನ ಅಪ್ಡೇಟ್ಸ್

ರಾಂಚಿ, ಡಿಸೆಂಬರ್ 19: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಐದನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಶುಕ್ರವಾರ(ಡಿ. 20) ರಂದು ನಡೆಯುತ್ತಿದೆ. ಕೊನೆ ಹಂತದ ಮತದಾನ ಪ್ರಕ್ರಿಯೆಯ ಸಂಪೂರ್ಣ ಅಪ್ಡೇಟ್ಸ್ ಇಲ್ಲಿದೆ.

ಜಾರ್ಖಂಡ್ ನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಮತದಾನ ನಿಗದಿಯಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

Jharkhand Assembly Elections 5th Phase Voting Live Updates

Dec 20, 2019, 3:28 pm IST

ಐದು ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಅಂತ್ಯಗೊಂಡಿದೆ. ಇನ್ನು ಉಳಿದ ಕ್ಷೇತ್ರಗಳಲ್ಲಿ ಸಂಜೆ ದು ಗಂಟೆಯವರೆಗೂ ಮುಂದುವರಿಯಲಿದೆ.
Dec 20, 2019, 2:07 pm IST

ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ 49.01ರಷ್ಟು ಮತದಾನ ನಡೆದಿದೆ.
Dec 20, 2019, 12:14 pm IST

11 ಗಂಟೆ ವೇಳೆಗೆ ಶೇ 28.24ರಷ್ಟು ಮತದಾನ ನಡೆದಿದೆ. 40 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
Dec 20, 2019, 10:11 am IST

ಬೆಳಿಗ್ಗೆ 9 ಗಂಟೆ ವೇಳೆಗೆ 16 ವಿಧಾನಸಭೆ ಕ್ಷೇತ್ರಗಳಲ್ಲಿ ಶೇ 12.01ರಷ್ಟು ಮತದಾನ ನಡೆದಿರುವುದು ವರದಿಯಾಗಿದೆ.
Dec 20, 2019, 8:29 am IST

16 ಕ್ಷೇತ್ರಗಳಿಗೆ ಐದನೇ ಹಾಗೂ ಕೊನೆಯ ಹಂತದಲ್ಲಿ ಚುನಾವಣೆ ನಡೆಯುತ್ತಿದೆ . ಇಬ್ಬರು ಸಚಿವರು, ಮಾಜಿ ಮುಖ್ಯಮಂತ್ರಿ ಸೇರಿದಂತೆ 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Dec 20, 2019, 8:27 am IST

ಬೆಳಿಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಿದ್ದು, ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ
Dec 20, 2019, 12:28 am IST

5ನೇ ಹಂತದಲ್ಲಿ 6 ಜಿಲ್ಲೆಗಳ 16 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಡುಮ್ಕಾ, ಜಮತಾರಾ ಹಾಗೂ ದೇವಘರ್ ಪ್ರಮುಖ ಕ್ಷೇತ್ರಗಳಾಗಿವೆ.
Dec 20, 2019, 12:27 am IST

ಜಾರ್ಖಂಡ್​​ನಲ್ಲಿ ನವೆಂಬರ್​​ 1ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ.
Dec 20, 2019, 12:26 am IST

ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿತರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.
Dec 20, 2019, 12:25 am IST

81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದಾರೆ. 5ನೇ ಹಂತದ ಕ್ಷೇತ್ರಗಳ ಅಂಕಿ ಅಂಶ ಹಾಗೂ ಮತದಾನ ಪ್ರಕ್ರಿಯೆ ಅಪ್ಡೇಟ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+