ಜಾರ್ಖಂಡ್‌ನಲ್ಲಿ ಸುಧಾರಿತ ಬಾಂಬ್ ಸ್ಫೋಟ 11 ಮಂದಿಗೆ ಗಾಯ

ರಾಂಚಿ, ಮೇ 28: ಜಾರ್ಖಂಡ್‌ನಲ್ಲಿ ನಕ್ಸಲರು ಸುಧಾರಿತ ಬಾಂಬ್ ಸ್ಫೋಟಗೊಳಿಸಿದ ಕಾರಣ 11 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಕುಚೈ ಪ್ರದೇಶದ ಸರೈಕೆಲ್ಲಾದಲ್ಲಿ ನೆಲಬಾಂಬ್​ ಸ್ಫೋಟಿಸಿದ್ದಾರೆ. ಈ ದಾಳಿಯಲ್ಲಿ 209 ಕೋಬ್ರಾ ತಂಡದ 8 ಯೋಧರು ಮತ್ತು ಜಾರ್ಖಂಡ್​ ಪೊಲೀಸ್​ನ ಮೂವರು ಸಿಬ್ಬಂದಿ ಸೇರಿ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ.

ಜಾರ್ಖಂಡ್​ನಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿಯನ್ನು ವೈಮಾನಿಕ ಅಂಬುಲೆನ್ಸ್​ ಮೂಲಕ ರಾಂಚಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿ ನಕ್ಸಲರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

IED blast in Saraikella leaves 11 security personnel injured

ಭದ್ರತಾಪಡೆಯ 209 ಕೋಬ್ರಾ ಪಡೆ ಮತ್ತು ಜಾರ್ಖಂಡ್​ ಪೊಲೀಸರು ಜಂಟಿಯಾಗಿ ಮಂಗಳವಾರ ಮುಂಜಾನೆ ವಿಶೇಷ ಕಾರ್ಯಾಚರಣೆ ನಡೆಸಿದ್ದರು.

ಬೆಳಗಿನ ಜಾವ 4.53ರಲ್ಲಿ ಸರೈಕೆಲಾ ಪ್ರದೇಶಕ್ಕೆ ತಲುಪಿದಾಗ ನಕ್ಸಲರು ನೆಲದಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಬಾಂಬ್ ಸಿಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+