ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್‌ನಲ್ಲಿ ಒಬ್ಬ ಪ್ರಯಾಣಿಕರಿಗೆ ಎರಡು ಸೀಟ್; ಡಬಲ್ ಚಾರ್ಜ್!

|
Google Oneindia Kannada News

ರಾಂಚಿ, ಸಪ್ಟೆಂಬರ್.03: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಬಸ್ ಗಳಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಜಾರ್ಖಂಡ್ ನಲ್ಲಿ ಜಾರಿಗೊಳಿಸಿದ ನಿಯಮಗಳೇ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುವಂತಿವೆ.

Recommended Video

Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Oneindia Kannada

ಒಬ್ಬ ಪ್ರಯಾಣಿಕನಿಗೆ ಒಂದು ಟಿಕೆಟ್ ಕೊಳ್ಳಲು ಈ ಮೊದಲು 350 ರೂಪಾಯಿ ಪಾವತಿಸಬೇಕಿತ್ತು. ಇದೀಗ ಅದೇ ಟಿಕೆಟ್ ಪಾವತಿಸುವುದಕ್ಕೆ 700 ರೂಪಾಯಿ ಪಾವತಿ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ ಎಂದು ತಿಳಿದು ಬಂದಿದೆ.

ಕೊರೊನಾವೈರಸ್ ಸೋಂಕಿತರಿಗಿಂತ ಜ್ವರ, ಕೆಮ್ಮು ಇಲ್ಲದವರೇ ಡೇಂಜರ್!ಕೊರೊನಾವೈರಸ್ ಸೋಂಕಿತರಿಗಿಂತ ಜ್ವರ, ಕೆಮ್ಮು ಇಲ್ಲದವರೇ ಡೇಂಜರ್!

ಜಾರ್ಖಂಡ್ ನ ಬಸ್ ಗಳಲ್ಲಿ ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳಲು ಒಂದೊಂದು ಸೀಟ್ ಗಳನ್ನು ಖಾಲಿ ಬಿಡಲಾಗುತ್ತಿದೆ. ಒಬ್ಬ ಪ್ರಯಾಣಿಕರಿಗೆ ಎರಡು ಆಸನಗಳನ್ನು ನೀಡಲಾಗುತ್ತಿದ್ದು, ಎರಡೂ ಸೀಟಿನ ಟಿಕೆಟ್ ದರವನ್ನು ಒಬ್ಬ ಪ್ರಯಾಣಿಕರಿಂದಲೇ ವಸೂಲಿ ಮಾಡಲಾಗುತ್ತಿದೆ.

Amid Covid-19, Jharkhand Buses Seat One Person In Two Seats, charge Double Fare

"ಒಬ್ಬ ಪ್ರಯಾಣಿಕರಿಗೆ ಎರಡು ಸೀಟ್ ಕೊಡಲಾಗುತ್ತಿದೆ":

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ ಪ್ರಯಾಣಿಕರಿಂದ ಡಬಲ್ ಹಣ ವಸೂಲಿ ಮಾಡುತ್ತಿಲ್ಲ ಎಂದು ಟ್ರಾವೆಲ್ ಏಜೆಂಟ್ ವೀರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ. ಒಂದು ಬಸ್ ನಲ್ಲಿ ಒಬ್ಬ ಪ್ರಯಾಣಿಕರಿಗೆ ಎರಡು ಸೀಟ್ ಗಳನ್ನು ನೀಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಮತ್ತೊಂದು ಸೀಟ್ ನ್ನು ಖಾಲಿ ಬಿಟ್ಟಿರಲಾಗುತ್ತದೆ. ಈ ಹಿನ್ನೆಲೆ ಎರಡು ಸೀಟ್ ಲೆಕ್ಕದಲ್ಲಿ ಟಿಕೆಟ್ ದರವನ್ನು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿನಿಂದ ಪಾರಾಗುವುದಕ್ಕೆ ಸರ್ಕಾರವು ಹೊರಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಹೀಗಾಗಿ ಹೆಚ್ಚಿನ ದರವನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ವೀರ್ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

250 ರೂ. ಟಿಕೆಟ್ ದರ 500 ರೂ.ಗೆ ಜಂಪ್:

ಭಾರತ ಲಾಕ್ ಡೌನ್ ಗೂ ಮೊದಲು 250 ರೂಪಾಯಿಗಳಿದ್ದ ಬಸ್ ಟಿಕೆಟ್ ದರ ಇದ್ದಕ್ಕಿದ್ದಂತೆ 500 ರೂಪಾಯಿಗೆ ಏರಿಕೆಯಾಗಿದೆ. ಮೊದಲೇ ವ್ಯಾಪಾರ ವಹಿವಾಟು ಇಲ್ಲದೇ ಪರದಾಡುತ್ತಿರುವ ಜನರು ಈ ಹೊರೆಯನ್ನು ಹೇಗೆ ತಾನೇ ಸಹಿಸಿಕೊಳ್ಳುವುದಕ್ಕೆ ಸಾಧ್ಯ ಎಂದು ಪ್ರಯಾಣಿಕ ಎಂ.ಪಿ. ಸಿಂಗ್ ಪ್ರಶ್ನೆ ಮಾಡಿದ್ದಾರೆ.

English summary
Amid Covid-19, Jharkhand Buses Seat One Person In Two Seats, charge Double Fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X