• search
 • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಂಚಿಯಲ್ಲಿ ಏರ್ ಏಷ್ಯಾ ವಿಮಾನ ತುರ್ತು ಭೂ ಸ್ಪರ್ಶ, ತಪ್ಪಿದ ಅವಘಡ

|
Google Oneindia Kannada News

ರಾಂಚಿ, ಆಗಸ್ಟ್ 8: ಜಾರ್ಖಂಡ್‌ನ ರಾಂಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಏಷ್ಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ತುರ್ತು ಭೂಸ್ಪರ್ಶವಾಗಿದೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರು ಎಲ್ಲರೂ ಸೇಫ್ ಆಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

   Kerala Flight crash ದುರಂತದಲ್ಲಿದ್ದ 40 ಮಂದಿಗೆ Corona | Oneindia Kannada

   ಟೇಕಾಫ್ ಆದ ವೇಳೆ ವಿಮಾನಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಹೀಗಾಗಿ, ವಿಮಾನ ಕೂಡಲೇ ಭೂ ಸ್ಪರ್ಶ ಮಾಡಬೇಕಾಯಿತು. ನಂತರ ಸಮಸ್ಯೆ ಸರಿಪಡಿಸಿ ಪರಿಶೀಲಿಸಿ ನಂತರ ವಿಮಾನ ಮತ್ತೆ ಹಾರಾಟ ಮಾಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

   ವಿಮಾನ ಭೂ ಸ್ಪರ್ಶ ಆಗಿರುವುದನ್ನು ಖುದ್ದು ರಾಂಚಿ ಏರ್‌ಪೋರ್ಟ್ ನಿರ್ದೇಶಕ ವಿನೋದ್ ಶರ್ಮಾ ಖಚಿತಪಡಿಸಿದ್ದು, ಸ್ವತಃ ತಾವೇ ಪರಿಶೀಲನೆ ನಡೆಸಿರುವುದಾಗಿ ಹೇಳಿದ್ದಾರೆ.

   ವಿಮಾನ ದುರಂತ: ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಕೇರಳವಿಮಾನ ದುರಂತ: ಮೃತಪಟ್ಟ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ಕೇರಳ

   ಶುಕ್ರವಾರ ರಾತ್ರಿ ದುಬೈನಿಂದ ಕೇರಳ ಕೋಳಿಕ್ಕೋಡ್ ಏರ್‌ಪೋರ್ಟ್ಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೆ ಒಳಗಾಗಿದೆ. ಈ ದುರ್ಘಟನೆಯಲ್ಲಿ 18 ಜನರು ಮೃತಪಟ್ಟಿದ್ದಾರೆ.

   ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ದುಬೈನಲ್ಲಿ ಸಿಲುಕೊಂಡಿದ್ದ 184 ಪ್ರಯಾಣಿಕರು ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿನ್ನೆ ಕೇರಳಕ್ಕೆ ಆಗಮಿಸುತ್ತಿದ್ದರು.

   English summary
   Mumbai bound Air Asia flight (i5-632) aborted take-off at Ranchi Airport due to a bird-hit. All passengers are safe: Airport official.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X