ರಾಮನಗರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಖಚಿತ
Recommended Video

ರಾಮನಗರ, ಮೇ 22: ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುತ್ತಾರಾ? ಈ ಸುದ್ದಿ ಬಹುತೇಕ ಖಚಿತವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿಯೋಜಿತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಎರಡೂ ಕ್ಷೇತ್ರಗಳಿಂದ ಜಯಸಾಧಿಸಿದ್ದರು.
ಎರಡರಲ್ಲಿ ಒಂದು ಕ್ಷೇತ್ರವನ್ನಷ್ಟೇ ಇಟ್ಟುಕೊಳ್ಳಬೇಕಾಗಿದ್ದರಿಂದ ಅವರು ಚನ್ನಪಟ್ಟಣವನ್ನು ತಮ್ಮ್ ತೆಕ್ಕೆಯಲ್ಲಿಯೇ ಇರಿಸಿಕೊಂದು ರಾಮನಗರವನ್ನು ಬಿಟ್ಟುಕೊಟ್ಟರು. ಇದೀಗ ಈಕ್ಷೇತ್ರದಿಂದ ಗೆಲ್ಲುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಿದೆ. ಈಗಾಗಲೇ ರಾಮನಗರ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಉತ್ತಮ ಜನಪ್ರಿಯತೆ ಹೊಂದಿರುವ ಎಚ್ ಡಿ ಕೆ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನೇ, ಜೆಡಿಎಸ್ ಪಕ್ಷ ತನ್ನ ರಾಮನಗರ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಗಳು ನಿಚ್ಛಳವಾಗಿವೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ ಪಿ ಯೋಗೇಶ್ವರ್ ಅತ್ಯಂತ ಪ್ರಬಲ ಅಭ್ಯರ್ಥಿ. ಕುಮಾರಸ್ವಾಮಿಯವರಲ್ಲದೆ ಬೇರೆ ಯಾರೇ ಅವರ ವಿರುದ್ಧ ಸ್ಪರ್ಧಿಸಿದ್ದರೂ ಗೆಲ್ಲುವ ಸಾಧ್ಯತೆಗಳು ತೀರಾ ಕಡಿಮೆ ಇದ್ದವು. ಆದ್ದರಿಂದಲೇ ಈಗಲೂ ಚನ್ನಪಟ್ಟಣ ಕ್ಷೇತ್ರವನ್ನೇ ತಮ್ಮ ಬಳಿ ಇರಿಸಿಕೊಂಡು ರಾಮನಗರವನ್ನು ಬಿಟ್ಟುಕೊಟ್ಟಿದ್ದಾರೆ ಕುಮಾರಸ್ವಾಮಿ.












Click it and Unblock the Notifications