ರೈತನ ಕನಸಿಗೆ ತಣ್ಣೀರೆರಚಿದ ಗಜಪಡೆ: ಟೊಮೆಟೊ ಬೆಳೆ ನೆಲಸಮ ಮಾಡಿದ ಕಾಡಾನೆ

ರಾಮನಗರ, ಆಗಸ್ಟ್‌ 23: ಟೊಮೆಟೊ ಹಣ್ಣಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ. ಜಮೀನಲ್ಲಿ ಬಂಪರ್ ಬೆಳೆ. ಕಳೆದ ಕೆಲ ವರ್ಷಗಳಿದ್ದ ಸಂಕಷ್ಟದಿಂದ ಹೊರಬಂದು ಈ ಬಾರಿಯಾದರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತನ ಕನಸಿಗೆ ರಾತ್ರಿ ಕಳೆದು ಬೆಳಕು ಹರಿಯುವಷ್ಟರಲ್ಲಿ ಕಾಡಾನೆಗಳು ತಣ್ಣೀರೆರಚಿವೆ.

ಟೊಮೆಟೊ ಬೆಳೆದ ಜಮೀನಿಗೆ ನುಗ್ಗಿದ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆಯನ್ನು ನಾಶಪಡಿಸಿರುವ ಘಟನೆ ಬೆಂಬೆನಾಡು ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗ್ರಾಮದಲ್ಲಿ ನಡೆದಿದೆ.

elephants-destroyed-tomato-crop

ಸಂಕಲಗೆರೆ ಗ್ರಾಮದ ನಾಗಣ್ಣ ಎನ್ನುವವರು ಗ್ರಾಮದ ಹೊರವಲಯದಲ್ಲಿರುವ ತಮ್ಮ ಮೂರು ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆದಿದ್ದರು. ಈಗಾಗಲೇ ಒಂದು ಬಾರಿ ಕಟಾವು ಮಾಡಿ ಮಾರಾಟ ಮಾಡಿದ್ದರು. ಇದೀಗ, ಮತ್ತೆ ಕಟಾವಿಗೆ ಸಿದ್ಧವಾಗಿದ್ದ ಟೊಮೆಟೊ ಬೆಳೆ ಮೇಲೆ ದಾಳಿ ಮಾಡಿದ ಗಜಪಡೆ ಸಂಪೂರ್ಣ ನಾಶ ಮಾಡಿವೆ.

ಕಳೆದ 15 ವರ್ಷಗಳಿಂದ ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆ ದಾಳಿ ಸಾಮಾನ್ಯವಾಗಿದ್ದರೂ, ಈ ಭಾಗದಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ ಇದೇ ಮೊದಲು ಎನ್ನಬಹುದಾಗಿದೆ. ಈ ಹಿಂದೆ ಒಂದು ಬಾರಿ ಈ ಭಾಗದಲ್ಲಿ ಕಾಡಾನೆಗಳು ಪ್ರತ್ಯಕ್ಷಗೊಂಡಿದ್ದವು. ಆದರೆ, ಯಾವುದೇ ಬೆಳೆಹಾನಿ ಮಾಡಿರಲಿಲ್ಲ. ಆದರೆ ಮಂಗಳವಾರ ರಾತ್ರಿ ಜಮೀನಿನ ಮೇಲೆ ದಾಳಿ ಮಾಡಿರುವ ಕಾಡಾನೆಗಳು ಅರ್ಧದಷ್ಟು ಬೆಳೆಯನ್ನು ನಾಶಪಡಿಸಿವೆ. ಇದರಿಂದ ರೈತ ನಾಗಣ್ಣ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

elephants-destroyed-tomato-crop

ಇನ್ನು ಕಾಡಾನೆ ದಾಳಿಗೆ ನಾಶವಾದ ಬೆಳೆಗೆ ಸರ್ಕಾರ ಪರಿಹಾರ ಕೊಡುತ್ತದೆ ಆದರೆ ಮಾರುಕಟ್ಟೆಯ ಧಾರಣೆಯಷ್ಟು ಬೆಳೆ ನಾಶ ಪರಿಹಾರವನ್ನು ಸರ್ಕಾರ ನೀಡುವುದು ಕನಸಿನ ಮಾತಾಗಿದೆ. ಹೀಗಾಗಿ ಕಾಡಾನೆ ದಾಳಿಯಿಂದ ನೆಲಸಮಗೊಂಡಿರುವ ಬೆಳೆಗೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಕಲಗೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಟ್ಟಣದ ಅಂಚಿಗೆ ಬಂದ ಕಾಡಾನೆ ಹಿಂಡು

ರಾಮನಗರ ಜಿಲ್ಲೆಯಲ್ಲಿ ಕಳೆದ 15 -20 ವರ್ಷಗಳಿಂದ ಕಾಡಾನೆಗಳು ಹಾಗೂ ಮಾನವರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಈ ಹಿಂದೆ ಕಾಡಾನೆಗಳು ಕಾಡಂಚಿನ ಗ್ರಾಮಗಳು ಹಾಗೂ ಜಮೀನುಗಳ ಮೇಲೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿದ್ದವು. ಕಳೆದ ರಾತ್ರಿ ಸಂಕಲಗೆರೆ ಗ್ರಾಮದ ಜಮೀನಗಳಲ್ಲಿ ದಾಂಗುಡಿಯಿಟ್ಟು ಅಪಾರ ಬೆಳೆ ನಾಶ ಮಾಡಿದ ಕಾಡಾನೆಗಳ ಹಿಂಡು ಬೆಳಗಿನ ಜಾವಕ್ಕೆ ಪಟ್ಟಣದ ಅಪ್ಪಗೆರೆ ಗ್ರಾಮದ ಬಳಿ ಕೆರೆಯಲ್ಲಿ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಚನ್ನಪಟ್ಟಣದ ಅಪ್ಪಗೆರೆ ಬಡಾವಣೆಯ ಪಕ್ಷದ ಅರಸ ಕಟ್ಟೆಯ ನೀರಿನಲ್ಲಿ ಐದು ಕಾಡಾನೆಗಳ ಹಿಂಡು ಜಲಕ್ರೀಡೆಯಾಡುತ್ತಿರುವ ದೃಶ್ಯ ಬೆಳಗಿನಜಾವಾ ವಾಕಿಂಗ್ ಮಾಡುತ್ತಿದ್ದ ಜನರು ಗಮನಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಜನರನ್ನು ನಿಯಂತ್ರಿಸುತ್ತಿದ್ದು, ಇಂದು ಸಂಜೆಯವರೆಗೆ ಕಾಡಾನೆಗಳನ್ನು ಕೆರೆಯ ಅಂಗಳದಲ್ಲೇ ಹೊರ ಬಾರದಂತೆ ತಡೆದು ಸಂಜೆ ಜನರ ಸಂಚಾರ ಕಡಿಮೆಯಾದ ನಂತರ ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+