ರಾಮನಗರದಲ್ಲಿ ಹಾಡಹಗಲೇ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನ ಕೊಲೆ
ರಾಮನಗರ, ಫೆಬ್ರವರಿ 10: ಹಾಡಹಗಲಲ್ಲೇ ಗ್ರಾಮ ಪಂಚಾಯತಿ ಉಪಾಧ್ಯಕ್ಷನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಮನಗರದ ಜಾಲಮಂಗಲ ಬಳಿಯ ನಾಗರಕಲ್ಲು ಗ್ರಾಮದ ಬಳಿಯ ನಡೆದಿದೆ. ಜಾಲಮಂಗಲ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಶ್ರೀಧರ್ ಎಂಬುವವರೇ ಮಚ್ಚಿನೇಟಿಗೆ ಬಲಿಯಾದ ದುರ್ದೈವಿ.
ಇಂದು ಮಧ್ಯಾಹ್ನ 2:30 ರ ಸಮಯದಲ್ಲಿ ಜಾಲಮಂಗಲ ಗ್ರಾಮದಿಂದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ್, ರಾಮನಗರಕ್ಕೆ ಸ್ನೇಹಿತನೊಂದಿಗೆ ಬರುತ್ತಿದ್ದ ಸಮಯದಲ್ಲಿ ಇಂಡಿಕಾ ಕಾರಿನಲ್ಲಿ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಶ್ರೀಧರ್ ಮೇಲೆ ಲಾಂಗ್ ಬೀಸಿದ್ದಾರೆ.
ಅವರಿಂದ ತಪ್ಪಿಸಿಕೊಳ್ಳಲು ಓಡಿದ ಶ್ರೀಧರ್ ನನ್ನು ಬೆನ್ನಟ್ಟಿದ ದುಷ್ಕರ್ಮಿಗಳು ರೇಷ್ಮೆ ಹೊಲದಲ್ಲಿ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ರಾಜಕೀಯ ದ್ವೇಷ ಹಾಗೂ ಹಳೆ ದ್ವೇಷದಿಂದ ಶ್ರೀಧರ್ ಹತ್ಯೆಯಾಗಿದೆ ಎಂದು ಶಂಕಿಸಲಾಗಿದೆ. 2016 ರಲ್ಲಿ ತನ್ನದೇ ಗ್ರಾಮದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ದತ್ತಾತ್ರೇಯ ಎನ್ನುವರನ್ನು ಮಾವಿನ ತೋಟದಲ್ಲಿ ತನ್ನ 6 ಮಂದಿ ಸಹಚರರೊಂದಿಗೆ ಶ್ರೀಧರ್ ಭೀಕರವಾಗಿ ಹತ್ಯೆ ಮಾಡಿದ್ದನು.
ದತ್ತಾತ್ರೇಯನ ಹತ್ಯೆಯ ಪ್ರತೀಕಾರವಾಗಿ ಇಂದು ಶ್ರೀಧರ್ ನ ಹತ್ಯೆಯಾಗಿದೆ ಎನ್ನಲಾಗಿದೆ. ಹತ್ಯೆನಡೆದ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೋಲೀಸರ ಬೇಟಿ ನೀಡಿ, ಸ್ಥಳಕ್ಕೆ ಶ್ವಾನದಳ ಕರೆಸಿ ತನಿಖೆ ಕೈಗೊಂಡಿದ್ದಾರೆ.












Click it and Unblock the Notifications