ಡಿಸಿಎಂ ಎದುರು ಹೋರಾಟ ನಡೆಸಿದ ಟೊಯೋಟಾ ಕಾರ್ಮಿಕರು
ರಾಮನಗರ, ಜನವರಿ 08: ಬಿಡದಿ ಟೊಯೋಟಾ ಘಟಕದ ಕಾರ್ಮಿಕರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸಾಗುವ ದಾರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು.
ಟೊಯೋಟಾ ಕಾರ್ಮಿಕರು ನೆಡೆಸುತ್ತಿರುವ ಹೋರಾಟ 61ನೇ ದಿನಕ್ಕೆ ಕಾಲಿಟ್ಟಿದೆ. ಬಿಕ್ಕಟ್ಟು ಪರಿಹರಿಸದ ಸರ್ಕಾರ ನಡೆ ಖಂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಶುಕ್ರವಾರ ಕಾರ್ಮಿಕರು ಡಿಸಿಎಂ ಸಂಚಾರ ಮಾಡುತ್ತಿದ್ದ ರಸ್ತೆಯ ಎರಡು ಬದಿಯಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ತಿಕ್ಕಾಟ 61ನೇ ದಿನಕ್ಕೆ ಕಾಲಿಟ್ಟಿದೆ. ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಮಧ್ಯ ಪ್ರವೇಶ ಮಾಡದಿರುವುದನ್ನು ಖಂಡಿಸಿ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು, ಕೈಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ್ ರಾಮನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದರು. ಉಪಮುಖ್ಯಮಂತ್ರಿಗಳು ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಆದಿಚುಂಚನಗಿರಿ ಮಠದ ಮುಂಭಾಗದ ಹೆದ್ದಾರಿಯಲ್ಲಿ ನೂರಾರು ಕಾರ್ಮಿಕರು ಕಪ್ಪು ಬಟ್ಟೆ ಕಣ್ಣಿಗೆ ಕಟ್ಟಿಕೊಂಡು ರಸ್ತೆಯ ಬದಿ ನಿಂತು ಆಕ್ರೋಶ ಹೊರಹಾಕಿದರು.
ಟೊಯೋಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ಅವೈಜ್ಞಾನಿಕ ಕೆಲಸದ ವಿಧಾನಗಳಿಗೆ ಸರ್ಕಾರ ಏಕಪಕ್ಷೀಯ ಬೆಂಬಲ ನೀಡುತ್ತಾ, ಕಾರ್ಮಿಕರ ಕೂಗಿನ ಕಡೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದರು.

ಟೊಯೋಟಾ ಕಾರ್ಮಿಕರು, ಕಂಪನಿಯ ನಿರಂಕುಶ ಧೋರಣೆಗಳ ವಿರುದ್ಧ ಸ್ವಾಭಿಮಾನಿ ಹೋರಾಟದ ಅಂಗವಾಗಿ ಕಾರ್ಮಿಕರು ಹಮ್ಮಿಕೊಂಡಿರುವ ಹೋರಾಟವೂ 61ನೇ ದಿನಕ್ಕೆ ಕಾಲಿಟ್ಟಿದೆ ನಮ್ಮ ಸಮಸ್ಯೆ ಇತ್ಯರ್ಥವಾಗುವ ವರೆಗೆ ನಮ್ಮ ಹೋರಾಟ ಮುಂದು ವರೆಯುತ್ತದೆ ಎಂದು ಕಾರ್ಮಿಕ ಮುಖಂಡರು ತಿಳಿಸಿದರು.
ರಾಮನಗರದ ಬಿಡದಿ ಟೊಯೋಟಾ ಘಟಕದ ಕಾರ್ಮಿಕರು ಶುಕ್ರವಾರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರ ನಡೆ ಖಂಡಿಸುವ ಭಿತ್ತಿಪತ್ರಗಳನ್ನು ಹಿಡಿದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಸಂಚಾರ ಮಾಡುತ್ತಿದ್ದ ರಸ್ತೆಯ ಎರಡು ಬದಿಯಲ್ಲಿ ನಿಂತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.#Ramanagara #Bidadi #Toyota #Protest @drashwathcn pic.twitter.com/rVY7LNMUEO
— oneindiakannada (@OneindiaKannada) January 8, 2021











Click it and Unblock the Notifications