ಎಎನ್ಐ ತಂಡದಿಂದ ಮುಂದುವರೆದ ಶಂಕಿತ ಉಗ್ರ ಮುನೀರ್ ವಿಚಾರಣೆ

ರಾಮನಗರ, ಆಗಸ್ಟ್.07: ರಾಮನಗರದಲ್ಲಿ ಸೋಮವಾರ ಸಿಕ್ಕಿಬಿದ್ದ ಉಗ್ರ ಮುನಿರ್ ನ ವಿಚಾರಣೆ ಇವತ್ತೂ ಮುಂದುವರೆದಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರ ಮುನಿರ್ ವಿಚಾರಣೆ ನಡೆಯುತ್ತಿದ್ದು, ಇತ್ತ ರಾಮನಗರದಲ್ಲಿ ಎ.ಎನ್.ಐ ತಂಡ ಮುನಿರ್ ಪತ್ನಿ ಹಾಗೂ ಆಕೆಯ ಅಣ್ಣ, ಅತ್ತಿಗೆಗಾಗಿ ತೀವ್ರ ಹುಡುಕಾಟ ನಡೆಸಿದೆ.

ಆಗಸ್ಟ್ 5ರ ರಾತ್ರಿ ರಾಮನಗರದ ಟ್ರೂಪ್ ಲೈನ್ ರಸ್ತೆಯಲ್ಲಿನ ಒಂದು ಮನೆಯಲ್ಲಿ ಶಂಕಿತ ಉಗ್ರ ಮುನಿರ್ ಶೇಕ್ ಎಂಬಾತನ್ನು ಎ.ಎನ್.ಐ ಹಾಗೂ ಐ.ಬಿ ಅಧಿಕಾರಿಗಳು ಬಂಧಿಸಿ, ಆತನ ಮನೆಯಲ್ಲಿದ್ದ ಒಂದು ಲ್ಯಾಪ್‌ಟಾಪ್ ಹಾಗೂ ಜಿಲೆಟಿನ್ ಪುಡಿ ಸೇರಿದಂತೆ ಹಲವು ದೇಗುಲಗಳ ಚಿತ್ರ, ಪ್ರವಾಸಿ ತಾಣ, ಮಸೀದಿಗಳ ಚಿತ್ರಗಳು, ಮ್ಯಾಪ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಉಗ್ರ ಮುನಿರ್ ಬಂಧನದ ನಂತರ ಆತನನ್ನು ಬೆಂಗಳೂರಿನ ರಹಸ್ಯ ಸ್ಥಳದಲ್ಲಿ ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ವೇಳೆ ಉಗ್ರ ಮುನಿರ್ ಸಾಕಷ್ಟು ಸ್ಫೋಟಕ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ. "ನನ್ನ ಬಳಿ ಮತ್ತೊಂದು ಲ್ಯಾಪ್‌ಟಾಪ್ ಇದೆ ಅದು ರಾಮನಗರದ ಮನೆಯಲ್ಲಿಯೇ ನನ್ನ ಪತ್ನಿ ಬಳಿ ಇದೆ" ಎಂದು ಹೇಳಿದ್ದಾನೆ.

Suspected Terrorist Muneer is being investigated in Bangalore

ಮುನಿರ್ ಮತ್ತೊಂದು ಲ್ಯಾಪ್‌ಟಾಪ್ ವಿಷಯ ಬಾಯಿ ಬಿಡುತ್ತಿದ್ದಂತೆ ನಿನ್ನೆ ರಾತ್ರಿ ಎ.ಎನ್.ಐ ತಂಡ ಮತ್ತೆ ರಾಮನಗರಕ್ಕೆ ಬಂದು ಮುನಿರ್ ಇದ್ದ ಮನೆಯನ್ನು ಜಾಲಾಡಿದೆ. ಆದರೆ ಲ್ಯಾಪ್‌ಟಾಪ್ ಮಾತ್ರ ಸಿಕ್ಕಿಲ್ಲ. ಲ್ಯಾಪ್‌ಟಾಪ್ ಜತೆಗೆ ಮುನಿರ್ ಪತ್ನಿ ಶಜಿದ್ ಬಿಬಿ ಹಾಗೂ ಆಕೆಯ ಅಣ್ಣ, ಅತ್ತಿಗೆ ಪರಾರಿಯಾಗಿದ್ದಾರೆ.

ಮುನಿರ್ ಬಂಧನದ ವೇಳೆ ಪತ್ನಿ ಶಜಿದ್ ಬಿಬಿ ಹಾಗೂ ಮಕ್ಕಳು ಜೊತೆಯಲ್ಲೆ ಇದ್ದರು. ಆದರೆ ಇದೀಗ ಮುನಿರ್ ಪತ್ನಿ ಬಿಬಿ ಮಕ್ಕಳು ಕಾಣೆಯಾಗಿದ್ದಾರೆ. ಇವರ ಪತ್ತೆಗಾಗಿ ಎ.ಎನ್.ಐ ಹಾಗೂ ಐ.ಬಿ ಅಧಿಕಾರಿಗಳ ತಂಡ ರಾಮನಗರ ತುಂಬೆಲ್ಲಾ ಜಾಲಾಡಿದೆ. ಆದರೆ ಯಾವ ಸುಳಿವು ಸಿಗದ ಹಿನ್ನಲೆಯಲ್ಲಿ ಬೆಂಗಳೂರಿಗೆ ಮತ್ತೆ ವಾಪಸ್ಸಾಗಿದೆ.

ಒಟ್ಟಾರೆ ಸ್ವಾತಂತ್ರ ದಿನ ಹತ್ತಿರವಿರುವ ದಿನದಲ್ಲಿ ಉಗ್ರ ಬಂಧನಕ್ಕೆ ಒಳಗಾಗಿರುವುದು ಸಾಕಷ್ಟು ಆತಂಕವನ್ನು ಉಂಟುಮಾಡಿದೆ. ಇನ್ನು ಕೆಲ ಉಗ್ರರರು ರಾಮನಗರದಲ್ಲಿ ಇದ್ದಾರೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+