ರಾಮನಗರದ ಶ್ರೀರಂಗನಾಥಸ್ವಾಮಿ ದೇಗುಲದ ಹುಂಡಿಯಲ್ಲಿ 27 ಲಕ್ಷ ಸಂಗ್ರಹ

ಮಾಗಡಿ, ಆಗಸ್ಟ್ 2: ಶ್ರೀರಂಗನಾಥಸ್ವಾಮಿ ದೇವಾಲಯದ ಹುಂಡಿಯಲ್ಲಿ ಈ ಬಾರಿ ವಿದೇಶಿ ಕರೆನ್ಸಿಗಳು, ಅಮಾನ್ಯಗೊಂಡ ನೋಟುಗಳೂ ದೊರೆತಿವೆ. ಹುಂಡಿಯಲ್ಲಿ 27 ಲಕ್ಷಕ್ಕೂ ಅಧಿಕ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಅಮಾನ್ಯಗೊಂಡ 500 ರೂ ಮುಖಬೆಲೆಯ 10 ಹಾಗೂ 1000 ರೂ. ಮುಖ ಬೆಲೆಯ 3 ನೋಟುಗಳ ಒಟ್ಟು 8 ಸಾವಿರ ರೂಪಾಯಿ ನೋಟುಗಳು ದೊರಕಿವೆ. ಇದರ ಜೊತೆಗೆ ಅಮೇರಿಕಾ, ಇಂಗ್ಲೆಂಡ್, ಬ್ಯಾಂಕಾಕ್, ಯುಎಇ ಸೇರಿದಂತೆ ವಿದೇಶಿ ಕರೆನ್ಸಿಗಳು ದೊರಕಿರುವುದಾಗಿ ಮುಜರಾಯಿ ಇಲಾಖೆಯ ಕಾರ್ಯನಿವಾಹಕ ಅಧಿಕಾರಿ ರಘು ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಆ ಸಮಯದಲ್ಲಿ 27.87.160 ರೂ. ಸಂಗ್ರಹವಾಗಿತ್ತು. ಈ ಬಾರಿ 27,31,180 ರೂಪಾಯಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಹಣ ಹೊರತುಪಡಿಸಿ ಚಿನ್ನದ ಮಾಂಗಲ್ಯ ಹಾಗೂ ಬೆಳ್ಳಿಯ ತೊಟ್ಟಿಲುಗಳು ಸಿಕ್ಕಿವೆ.

Sriranganatha Temple Of Ramanagar Hundi Collection

ಬೆಳೆಯೋ ರಂಗ: ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಬೆಳೆಯೋ ರಂಗನ ವಿಗ್ರಹವಿದ್ದು, ಮಕ್ಕಳಾಗದವರು ಭಕ್ತಿಯಿಂದ ಬೆಳ್ಳಿಯ ತೊಟ್ಟಿಲು ಸಲ್ಲಿಸುತ್ತೇನೆ ಎಂದು ಹರಿಸಿಕೊಂಡರೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆ ಇರುವ ಹಿನ್ನೆಲೆಯಲ್ಲಿ ಈ ಬಾರಿ ಬಹಳಷ್ಟು ಬೆಳ್ಳಿಯ ತೊಟ್ಟಿಲುಗಳು ಹಾಗೂ 8 ಚಿನ್ನದ ಮಾಂಗಲ್ಯ ಸಂಗ್ರಹವಾಗಿವೆ.

ತಹಶೀಲ್ದಾರ್ ರಮೇಶ್ ಹಾಗೂ ಮುಜರಾಯಿ ಇಲಾಖೆ ಚಂದ್ರಶೇಖರ್ ರವರ ನೇತೃತ್ವದಲ್ಲಿ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ದೊರೆತ ಹಣ, ವಿದೇಶಿ ಕರೆನ್ಸಿ, ಬೆಳ್ಳಿ ತೊಟ್ಟಿಲುಗಳು ಮತ್ತು ಚಿನ್ನದ ತಾಳಿಗಳನ್ನು ಎಸ್ ಬಿಐ ಖಾತೆಗೆ ಜಮಾ ಮಾಡಲಾಗಿದೆ ಎಂದು ರಘು ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+