Get Updates
Get notified of breaking news, exclusive insights, and must-see stories!

ತಲೆ ಮೇಲೆ 'ಟಗರು' ಎಂದು ಕೆತ್ತಿಸಿಕೊಂಡಿದ್ದಾನೆ ಈ ಅಭಿಮಾನಿ

ರಾಮನಗರ, ಫೆಬ್ರವರಿ. 26: ತಮ್ಮ ಮೆಚ್ಚಿನ ನಾಯಕನ ಚಿತ್ರ ಬಿಡುಗಡೆ ಆದರೆ ಕಟೌಟ್ ಹಾಕುವುದು, ಮೆಚ್ಚಿನ ಹೀರೊನ ಚಿತ್ರ ಇರುವ ಟಿ ಶರ್ಟ್ ಧರಿಸುವುದು, ಅವರಂತೆ ಬಟ್ಟೆ ಹಾಕುವುದು ಮಾಮೂಲು ಆದರೆ ಇಲ್ಲೊಬ್ಬ ಮೆಚ್ಚಿನ ತಾರೆಯ ಚಿತ್ರದ ಹೆಸರನ್ನು ತಲೆ ಮೇಲೆ ಕೆತ್ತಿಸಿಕೊಂಡಿದ್ದಾನೆ.

ಶಿವರಾಜ್‌ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ನಿವಾಸಿ ಕುಮಾರ್ ಕಳೆದ ಶುಕ್ರವಾರ ಬಿಡುಗಡೆ ಆದ ಶಿವರಾಜಕುಮಾರ್ ಅಭಿನಯದ 'ಟಗರು' ಹೆಸರನ್ನು ತಲೆಯ ಮೇಲೆ ಕೆತ್ತಿಸಿಕೊಂಡಿದ್ದಾನೆ. ಅಂದರೆ 'ಟಗರು' ಎಂದು ಕಟಿಂಗ್ ಮಾಡಿಸಿಕೊಂಡಿದ್ದಾನೆ.

ಈತ ಟಗರು ಚಿತ್ರಕ್ಕಾಗಿ ತನ್ನ ತಲೆಯ ಹಿಂಭಾಗ ಸ್ಪೆಷಲ್ ಹೇರ್ ಕಟ್ ಮೂಲಕ ಟಗರು ಎಂದು ಬರೆಸಿಕೊಂಡು ಅಭಿಮಾನ ಮೆರೆದಿದ್ದಾನೆ. ಈ ಕುಮಾರ್ ಹಿಂದಿನಿಂದಲ್ಲೂ ಶಿವರಾಜ್ ಕುಮರ್ ಅವರ ಎಲ್ಲ ಚಿತ್ರಗಳನ್ನ ಮೊದಲ ಪ್ರದರ್ಶನವನ್ನೇ ನೋಡಿ ಖುಷಿ ಪಡುತ್ತಾನೆ ಅಲ್ಲದೇ ಥೀಯಟರ್‌ಗಳ ಮುಂದೆ ಕಟೌಟ್ ಕಟ್ಟುವುದು ಹೂವಿನ ಹಾರ ಹಾಕುವುದು ಹಾಗೂ ಪಟಾಕಿ ಸಿಡಿಸಿ ಸಿಹಿ ಹಂಚುವುದನ್ನೂ ಈತ ತಪ್ಪಿಸುವುದಿಲ್ಲ.

Shivaraj Kumar fan gets a special hair design

ರಾಜ್ ಕುಮಾರ್ ಕುಟುಂಬದ ಅಪ್ಪಟ ಅಭಿಮಾನಿಯಾಗಿರುವ ಕುಮಾರ್ ತನ್ನ ಗಾಡಿಯ ಮೇಲೆ ರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ಶಿವರಾಜ್‌ ಕುಮಾರ್ ಅವರ ಚಿತ್ರಗಳನ್ನು ಹಾಕಿಸಿಕೊಂಡಿದ್ದಾರೆ. ಆದರೆ ಇವರಿಗೆ ಶಿವರಾಜ್ ಕುಮಾರ್ ಅವರ ಮೇಲೆ ಸ್ವಲ್ಪ ಹೆಚ್ಚಿನ ಅಭಿಮಾನ.

Shivaraj Kumar fan gets a special hair design

ಇನ್ನು ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಧನಂಜಯ ( ಡಾಲಿ) ಶಿವರಾಜ್ ಕುಮಾರ್ ( ಟಗರು ಶಿವ) ರವರರಿಗೆ ಪಾತ್ರದ ಸಂಭಾಷಣೆ ಯಲ್ಲಿ ಕೀಳುಮಟ್ಟದ ಪದ ಪ್ರಯೋಗ ಮಾಡಿರುವುದು ಕೆಲವು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಡಾ.ರಾಜ್ ಕುಟುಂಬದ ಯಾರೊಬ್ಬರ ಚಿತ್ರದಲ್ಲೂ ಕೆಟ್ಟ ಸಂಭಾಷಣೆ ಪ್ರಯೋಗ ಇದುವರೆಗೂ ಮಾಡಿಲ್ಲ ಆದ್ದರಿಂದ ಈ ಚಿತ್ರದ ಪಾತ್ರದಲ್ಲಿ ಖಳನಾಯಕ ಶಿವರಾಜ್ ಕುಮಾರ್ ಗೆ ಮಾಡಿರುವ ಅಶ್ಲೀಶ ಪದಪ್ರಯೋಗವನ್ನು ತೆಗೆಯಬೇಕೆಂದು ಚನ್ನಪಟ್ಟಣದ ಶಿವರಾಜ್ ಕುಮಾರ್ ಅಭಿಮಾನಿಗಳು ಇದೇ ವೇಳೆ ಒತ್ತಾಯಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+