ರಾಮನಗರ: ಮತ್ತೆ 3 ಆರೋಪಿಗಳಲ್ಲಿ ಕೊರಾನಾ ಸೋಂಕು ಪತ್ತೆ
ರಾಮನಗರ, ಏಪ್ರಿಲ್ 24: ಬೆಂಗಳೂರಿನ ಪಾದರಾಯನಪುರದಲ್ಲಿ ಹಲ್ಲೆ ಮಾಡಿದ್ದ 119 ಆರೋಪಿಗಳ ಪೈಕಿ ನಿನ್ನೆ ಇಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಆದರೆ ಇಂದು ಮತ್ತೆ 3 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಆರೋಪಿಗಳಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದ್ದು, ಒಟ್ಟು 5 ಮಂದಿಗೆ ಕೊರೊನಾ ವೈರಸ್ ಪತ್ತೆಯಾದಂತಾಗಿದೆ. ಪಾದರಾಯನಪುರದಲ್ಲಿ ಹಲ್ಲೆ ಮಾಡಿದವರನ್ನು 2 ದಿನಗಳ ಹಿಂದೆ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆ ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ.
ಆರೋಪಿ ಕೈದಿಗಳನ್ನು ಕೆಎಸ್ಆರ್ಟಿಸಿ ಬಸ್ ನಲ್ಲಿ ಸ್ಥಳಾಂತರ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೆಎಸ್ಆರ್ಟಿಸಿ ಸಿಬ್ಬಂದಿಯಿಂದ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ರಾಮನಗರ ಜೈಲಿನಿಂದ ಬೆಂಗಳೂರಿನ ಹಜ್ ಭವನಕ್ಕೆ ಕರೆತಂದು ಕ್ವಾರಂಟೈನ್ ಮಾಡಲಾಗುತ್ತೆ ಎಂದು ತಿಳಿದುಬಂದಿದೆ.

ಬಸ್ ಚಾಲಕನ ಸೀಟ್ ಹಿಂಭಾಗದಲ್ಲಿ ಸಿಬ್ಬಂದಿಗಳು ಹಗ್ಗಕಟ್ಟಿದ್ದಾರೆ. ಆರೋಪಿಗಳು ಚಾಲಕನ ಬಳಿ ಬಾರಬಾರದು ಎಂದು ಹಗ್ಗ ಕಟ್ಟಲಾಗಿದೆ. ಆರೋಪಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವ ಸಿಬ್ಬಂದಿಗೆ ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್ ನೀಡಲಾಗಿದೆ.
ಕೆಲವೇ ನಿಮಿಷದಲ್ಲಿ ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತದೆ. 7 ಕೆಎಸ್ಆರ್ಟಿಸಿ ಬಸ್ ಗಳ ಮೂಲಕ ಬೆಂಗಳೂರಿಗೆ ಆರೋಪಿಗಳನ್ನು ಶಿಫ್ಟ್ ಮಾಡುತ್ತಿದ್ದಾರೆ. ಬಸ್ ನಲ್ಲಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.
119 ಜನ ಆರೋಪಿಗಳನ್ನು ಸ್ಥಳಾಂತರ ಆಗಲಿದ್ದಾರೆ. ಒಂದು ಬಸ್ ನಲ್ಲಿ 17 ಜನ ಆರೋಪಿಗಳ ಹತ್ತಿಸಲಾಗುತ್ತಿದೆ. ಭದ್ರತೆಗೆಂದು ಒಂದು ಬಸ್ ನಲ್ಲಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗುತ್ತಿದೆ.












Click it and Unblock the Notifications