ಸರ್ಕಾರದ ಈ ಪ್ಯಾಕೇಜ್ ಗಳೆಲ್ಲ ಬೋಗಸ್; ಸಿದ್ದರಾಮಯ್ಯ

ರಾಮನಗರ, ಮೇ 23: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನ ವಿರೋಧಿ‌ ಸರ್ಕಾರಗಳು ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Recommended Video

      ದೇವಸ್ಥಾನದ ಅರ್ಚಕರಿಗೆ ಸರ್ಕಾರ ಎಷ್ಟು ಹಣ ಕೊಡ್ತಿದೆ | Srinivas poojari | Oneindia Kannada

      ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ಯಾಕೇಜ್ ಗಳು ಬೋಗಸ್ ಪ್ಯಾಕೇಜ್ ಗಳಾಗಿವೆ. ದೇಶ ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ದುಡ್ಡು ಇರಬೇಕು. ಆದರೆ ಈ ಸರ್ಕಾರಗಳು ಸುಳ್ಳು ಹೇಳಿಕೊಂಡು ಜನರನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.

      ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಮುಸ್ಲಿಮರಿಗೆ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಮಾಗಡಿಯ ಕುದೂರು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈ ಸಂದರ್ಭ ಮಾತನಾಡಿದ ಅವರು, "ಮೋದಿ ಪ್ರಧಾನ ಮಂತ್ರಿ ಆದಾಗಿನಿಂದಲೂ ಸಾಕಷ್ಟು ಸುಳ್ಳು ಹೇಳಿದ್ದಾರೆ. ಸರ್ಕಾರಗಳು ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡುವ ಮೂಲಕ ಆರ್ಥಿಕವಾಗಿ ಬಡವರನ್ನು ಸದೃಢಗೊಳಿಸಬೇಕಿತ್ತು. ಆದರೆ ಎರಡೂ ಸರ್ಕಾರಗಳು ಜನರಿಗೆ ಸುಳ್ಳು ಭರವಸೆ ನೀಡುತ್ತಿವೆ" ಎಂದು ದೂರಿದರು.

      Former CM Siddaramaiah In Ramanagar Condemns Government Policies In Lockdown

      "ಸದ್ಯಕ್ಕೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಲಾಕ್ ಡೌನ್ ಸಡಿಲಿಕೆ ಮಾಡಿದ್ದಾರೆ ಅಷ್ಟೆ. ಸರ್ಕಾರಕ್ಕೆ ನಾವೇ ಮೂರ್ನಾಲ್ಕು ಬಾರಿ ಹೋಗಿ ಮನವಿ ಮಾಡಿದ್ದೇವೆ. ಆದರೆ ಈ ಸರ್ಕಾರ ಬೇಜವಾಬ್ದಾರಿ ಹಾಗೂ ಜನವಿರೋಧಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಮಾಜಿ ಮಂತ್ರಿ ಜಮೀರ್ ಹಾಗೂ ಮಾಜಿ ಶಾಸಕರಾದ ಚಲುವರಾಯಸ್ವಾಮಿ ಮತ್ತು ಬಾಲಕೃಷ್ಣ ರವರು ಇದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+