ರಾಮನಗರ : ಕೊಂಡ ಹಾಯುವಾಗ ಬಿದ್ದು ಅರ್ಚಕರಿಗೆ ಗಾಯ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಏಪ್ರಿಲ್ 11 : ಕೊಂಡ ಹಾಯ್ಯುವಾಗ ಆಕಸ್ಮಿಕವಾಗಿ ಬಿದ್ದು ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅರ್ಚಕರನ್ನು ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಗ್ರಾಮದಲ್ಲಿ ಬುಧವಾರ ಮುಂಜಾನೆ ಈ ಘಟನೆ ನಡೆದಿದೆ. ಅರ್ಚಕ ರವಿ ಅವರು ಗಾಯಗೊಂಡವರು. ರವಿ ಅವರ ಸಹೋದರ ಅಪಘಾತದಲ್ಲಿ ಗಾಯಗೊಂಡಿದ್ದ ಕಾರಣ ರವಿ ಅವರು ಕೊಂಡ ಹಾಯಲು ಅರ್ಚಕರಾಗಿ ಬಂದಿದ್ದರು.

ಸಾತನೂರಲ್ಲಿ ಮಾರಮ್ಮನ ಕೊಂಡಕ್ಕೆ ಬಿದ್ದು ಆರ್ಚಕ ಗಂಭೀರ ಗಾಯ

ಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವರ ಹಬ್ಬದಲ್ಲಿ ಮುಂಜಾನೆ ಕೊಂಡ ಹಾಯುವಾಗ ಈ ಘಟನೆ ನಡೆಸಿದೆ. ಅರ್ಚಕ ರವಿ ಅವರ ಕೈ ಮತ್ತು ಕಾಲು ತೀವ್ರವಾಗಿ ಸುಟ್ಟು ಹೋಗಿವೆ.

Priest seriously injured after fell into Maramma Konda

ರವಿ ಅವರಿಗೆ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ರಾಮದಲ್ಲಿ ಹಲವು ವರ್ಷಗಳಿಂದ ಕೊಂಡ ಮತ್ತು ಜಾತ್ರಾಮಹೋತ್ಸವ ಯಾವುದೇ ವಿಘ್ನಗಳಿಲ್ಲದೆ ನಡೆಯುತ್ತಿತ್ತು.

ಇದೇ ಮೊದಲ ಬಾರಿಗೆ ರವಿ ಅವರು ಕೊಂಡ ಹಾಯುವಾಗ ಈ ಘಟನೆ ನಡೆದಿದೆ. ಪ್ರತಿ ವರ್ಷ ಗಾಯಾಳು ರವಿಯ ಸಹೋದರ ಕುಮಾರ್ ಮಾರಮ್ಮನ ಕೊಂಡ ಹಾಯುತ್ತಿದ್ದರು. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಅವರು ಗಾಯಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Priest Ravi seriously injured after fell into Marammana Konda. The incident took place on April 11 early morning at the Uyyamballi village of Kanakapura taluk in Ramanagara district.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ