CP Yogeshwar: 'ಸಿಪಿ ಯೋಗೇಶ್ವರ್ ಮಗಳಿಗೆ ಬಳಸಬಾರದ ಪದ ಬಳಸಿ ಪ್ರಾಣಿಗಿಂತಲೂ ಕಡೆಯಾಗಿ ನೋಡಿದ್ದಾರೆ' ನಿಶಾ ಗಂಭೀರ ಆರೋಪ

ಸಿ.ಪಿ ಯೋಗೇಶ್ವರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಅಲ್ಲದೆ ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆದಿದ್ದಾರೆ. ಹೀಗಿರುವಾಗ ಮಗಳು ನಿಶಾ ಸಿ.ಪಿ ಯೋಗೇಶ್ವರ್ ಅವರ ವಿರುದ್ಧ ವಿಡಿಯೋಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಬೆಳವಣಿಗೆ ಸಿ.ಪಿ ಯೋಗೇಶ್ವರ್ ಗೆಲುವಿಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ.

ಹೌದು.. ಕಳೆದ ದಿನವಷ್ಟೇ ಸಿ.ಪಿ ಯೋಗೇಶ್ವರ್ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್‌ ಪಕ್ಷಕ್ಕೆ ಜೈ ಎಂದಿದ್ದರು. ಸಿಪಿವೈ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಂತೆ ರಾತ್ರಿಯೇ ಹೈಕಮಾಂಡ್ ಅವರಿಗೆ ಚನ್ನಪಟ್ಟಣದಿಂದ ಸ್ಪರ್ಧಿಸಲು ಟಿಕೆಟ್ ಖಾತರಿಪಡಿಸಿದೆ. ಅಲ್ಲಿಗೆ ಎಲ್ಲವೂ ಸರಿ ಹೋಯ್ತು ಎನ್ನುವಷ್ಟರಲ್ಲಿ ಸಿಪಿವೈ ವಿರುದ್ಧ ಅವರ ಮಗಳು ನಿಶಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ನಿಶಾ ಫೇಸ್‌ಬುಕ್ ವಿಡಿಯೋದಲ್ಲಿ ಹೇಳಿರುವುದೇನು?

Nisha Yogeshwar has made serious allegations against CP Yogeshwar

ಸಿ.ಪಿ ಯೋಗೇಶ್ವರ್ ಅವರಿಂದ ಅವಮಾನ

'ಸಿಪಿ ಯೋಗೇಶ್ವರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋದಾಗ ನನಗೆ ಕೇವಲ ಹತ್ತು ವರ್ಷ ವಯಸ್ಸು. ನನಗೀಗ 36 ವರ್ಷ ವಯಸ್ಸಾಗಿದೆ. ಮೂವತ್ತು ವರ್ಷ ಅವರ ಬಗ್ಗೆ ನಾನು ಏನೂ ಕೂಡ ಮಾತನಾಡಿಲ್ಲ. 1999 ಅಲ್ಲಿ ಅವರು ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದರು. ಇಲ್ಲಿವರೆಗೂ ಅವರು 8 ಎಲೆಕ್ಸನ್‌ ಅಲ್ಲಿ ನಿಂತಿದ್ದಾರೆ. ಈ 25 ವರ್ಷ ನಾನು ಎಲ್ಲಿದ್ದೆ. ನನ್ನ ಪ್ರಯತ್ನ ಏನಿತ್ತು? ನಿಮ್ಮ ಮುಂದೆ ಈ ವಿಷಯಗಳನ್ನು ಹಂಚಿಕೊಂಡಿದ್ನಾ? ಎಲ್ಲರೂ ಹೇಳ್ತಾರೆ ಫ್ಯಾಮಿಲಿ ವಿಚಾರ ಫ್ಯಾಮಿಲಿಯಲ್ಲೇ ಇರಬೇಕು ಅಂತ. ಅಂಥವರಿಗೆ ನಾನು ಕೆಲ ಪ್ರಶ್ನೆಗಳನ್ನು ಕೇಳ್ತೇನೆ' ಎಂದು ನಿಶಾ ವಿಡಿಯೋದಲ್ಲಿ ಕೇಳಿದ್ದಾರೆ.

ಮಗಳಿಗೆ ಬಳಸಬಾರದ ಪದ ನನಗೆ ಅವರು ಬಳಸಿದ್ದಾರೆ....

ಕುಟುಂಬವನ್ನು ಯಾರು ಅರ್ಥ ಮಾಡಿಕೊಳ್ತಾರೋ, ನನ್ನ ಕುಟುಂಬ ಅಂತ ಅವರ ಮನಸ್ಸಲ್ಲಿ ಜಾಗ ಇರುತ್ತಲ್ಲ ಅಂತವರು ತಮ್ಮ ಸಮಸ್ಯೆಗಳನ್ನು ಮನೆಯಲ್ಲೇ ಬಗೆಹರಿಸಿಕೊಳ್ತಾರೆ. ನನಗೂ ಆ ಕುಟುಂಬ ಬೇಕಾಗಿತ್ತು. ಹೀಗಾಗಿ 25 ವರ್ಷ ನಾನು ಅದೇ ಪ್ರಯತ್ನ ಮಾಡಿದೆ. ಸುಮ್ನೆ ನಾನು ಆಚೆ ಬಂದು ಕುಳಿತಿಲ್ಲ. ನನಗೆ ಯಾವ ಪಬ್ಲಿಸಿಟಿ ಕೂಡ ಬೇಡ.

Nisha Yogeshwar has made serious allegations against CP Yogeshwar

ನಾನು ನನ್ನ ತಂದೆಯ ಬಾಯಿಂದ ಕೇಳಬಾರದ ಮಾತು ಕೇಳಿದ್ದೇನೆ. ನೀವೆಲ್ಲಾ ನಿಮ್ಮ ಮಗಳನ್ನು ಪುಟ್ಟ, ಚಿನ್ನು, ಕಂದಾ ಅಂತೆಲ್ಲಾ ಕರಿತಿರಾ... ಆದರೆ ನನಗೆ ಜೀವನ ಪೂರ್ತಿ ಸಿಕ್ಕಿದ್ದು ಕೆಟ್ಟ ಬೈಗುಳ... ಆ ಮಾತುಗಳನ್ನ ನಾನು ಹೇಳಲಿಕ್ಕೆ ಆಗಲ್ಲ. ಆ ಪದಗಳನ್ನು ನಾನು ಉಪಯೋಗಿಸಲು ಇಲ್ಲಿ ಆಗಲ್ಲ. ಆದರೆ ಒಬ್ಬ ಮಗಳಿಗೆ ಯಾವ ಪದಗಳನ್ನು ಉಪಯೋಗಿಸಬಾರದೋ ಅದನ್ನ ನನಗೆ ನನ್ನ ತಂದೆ ಸಿಪಿ ಯೋಗೇಶ್ವರ್ ಉಪಯೋಗಿಸಿದ್ದಾರೆ ಎಂದು ನಿಶಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಚುನಾವಣೆ ವೇಳೆ ತಂದೆ ಪರ ಪ್ರಚಾರ ಮಾಡಿದರೂ ನಮಗೆ ಅವಮಾನವೇ ಆಗಿದ್ದು...

2023ಯಲ್ಲಿ ನಮ್ಮ ರಾಜ್ಯದಲ್ಲಿ ಎಲೆಕ್ಸನ್ ನಡೆಯಿತು. ಆ ಚುನಾವಣೆ ಸಂದರ್ಭದಲ್ಲೂ ನಾನು ನನ್ನ ತಂದೆ ಜೊತೆಗೇ ಇದ್ದೆ. ನಾನು ಆಚೆ ಬಂದು ಕುಟುಂಬದ ಬಗ್ಗೆ ಮಾತನಾಡಿರಲಿಲ್ಲ. ಆ ಚುನಾವಣೆಯಲ್ಲಿ ನನ್ನ ತಮ್ಮ (ಸಹೋದರ) ಚನ್ನಪಟ್ಟಣ ಪ್ರಚಾರಕ್ಕೆ ಹೋಗಿದ್ದ. ಆಗ ಅವನಿಗೆ ತುಂಬಾ ತೊಂದರೆಗಳನ್ನು ಸಿಪಿ ಯೋಗೇಶ್ವರ್ ಅವರು ಕೊಟ್ಟರು. ಅವಮಾನ ಮಾಡ್ತಾರೆ. ಇದರಿಂದಾಗಿ ನನ್ನ ತಾಯಿ ಅಲ್ಲಿಗೆ ಹೋದರು.

ಚನ್ನಪಟ್ಟಣದಲ್ಲಿ ನಮ್ಮದು ಒಂದು ಮನೆ ಇದೆ. ಅಲ್ಲಿ ನನ್ನ ಮಲತಾಯಿ ಶೀಲಾ ಹಾಗೂ ಅವರ ಮಗ ಧ್ಯಾನ್ ಇಬ್ಬರು ಸೇರಿ, ಆ ಮನೆಯಲ್ಲಿ ಇದ್ದ ನಮ್ಮ ಸಾಮಾನುಗಳನ್ನು ತೆಗೆದು ಹೊರ ಹಾಕಿದರು. ಮನೆಯಲ್ಲಿ ಇದ್ದ ವಿಷಯವನ್ನು ಬೀದಿಗೆ ತಂದಿದ್ದು ಯಾರು? ಅಲ್ಲಿವರೆಗೂ ನನಗೆ ಎಷ್ಟೇ ಕಷ್ಟ ಬಂದರೂ ತೋರಿಸಿಕೊಳ್ಳದೇ... ನಮ್ಮ ಸಮಸ್ಯೆಗಳನ್ನು ಬದಿಗಿಟ್ಟು... ಅವರು ಗೆಲ್ಲಬೇಕು.. ಅವರು ತುಂಬಾ ಒಳ್ಳೆ ತಂದೆ ಅಂತ ಜನರ ಮುಂದೆ ಬಂದು ಅವರ ಪರ ಪ್ರಚಾರ ಮಾಡಿದೆ.

ಮನೆ ಮನೆಗೆ ತೆರಳಿ ಪ್ರಚಾರ ಮಾಡ್ವಿ. ಒಂದು ತಿಂಗಳು ನಾನು ಪ್ರಚಾರ ಮಾಡಿದೆ. ಆದರೂ ನನ್ನ ತಂದೆ ನನ್ನನ್ನು ಒಂದು ತಿಂಗಳು ಮಾತನಾಡಿಸಲಿಲ್ಲ. ಎರಡನೇ ಮದುವೆ ಮಾಡಿಕೊಂಡು ಇರುವಾಗ ಆ ವಿಚಾರವನ್ನು ನಾವು ಮುಚ್ಚಿಟ್ಟಿದ್ವಿ. ನೀವು ಯಾಕೆ ತಮ್ಮ ಹಾಗೂ ತಾಯಿಯನ್ನು ಹೊರಹಾಕಿ ಅದನ್ನು ಬೀದಿಗೆ ಯಾಕೆ ತಂದ್ರಿ? ಆಗಲೂ ನಾವು ಏನೂ ಕೂಡ ಮಾತನಾಡಿಲ್ಲ.

ನನ್ನೊಂದಿಗೆ ಪ್ರಾಣಿಗಿಂತ ಕೆಟ್ಟದಾಗಿ ನಡೆದುಕೊಂಡರು ಸಿಪಿ ಯೋಗೇಶ್ವರ್- ನಿಶಾ

ತುಂಬಾ ಜನ ಮಕ್ಕಳು ತಂದೆಯಂದಿರು ಈ ವಿಡಿಯೋ ನೋಡ್ತಾ ಇರಬಹುದು. ನೀವು ನಿಮ್ಮ ತಂದೆಯನ್ನು ಮಾತನಾಡಲು ಎಷ್ಟು ದಿನ ಕಾಯುತ್ತೀರಾ? ನಾನು ನನ್ನ ತಂದೆಯೊಂದಿಗೆ ಮಾತನಾಡಲು ತಿಂಗಳು ಕಟ್ಟಲೆ ಕಾಯಬೇಕು.

ವರ್ಷಕ್ಕೆ ಮೂರು ಸಲ ಅವರು ನನ್ನ ಹೇಗಿದಿಯಮ್ಮ ಅಂತ ಕೇಳಿದರೆ ಹೆಚ್ಚು. ಹೀಗಾಗಿ ಒಂದು ದಿನ ನಾನು ಅವರ ಮನೆಗೆ ಮಾತನಾಡಲು ಹೋದೆ. ಯಾಕೆ ನನ್ನ ಫೋನ್ ಎತ್ತುತ್ತಿಲ್ಲ. ಯಾಕೆ ಮಾತನಾಡುತ್ತಿಲ್ಲ ಅಂತ ಕೇಳೋಕೆ ನಾನು ಅವರ ಮನೆಗೆ ಹೋದೆ. ನಾನು ಅಲ್ಲಿಗೆ ಹೋಗಿದ್ದು ಕಾರಣ ಇಷ್ಟೇ ನನ್ನ ತಾಯಿ ಹಾಗೂ ತಮ್ಮನಿಗೆ ಅವಮಾನ ಯಾಕಾಯ್ತು ಅಂತ ಕೇಳೋಕೆ. ಆಗ ನನ್ನೊಂದಿಗೆ ಒಂದು ಪ್ರಾಣಿಗಿಂತ ಕೆಟ್ಟದಾಗಿ ನಡೆದುಕೊಂಡರು ಸಿಪಿ ಯೋಗೇಶ್ವರ್. ನನ್ನ ಕೆನ್ನೆಗೆ ಸುಮಾರು 25 ಸಲ ಹೊಡೆದರು. ಆ ನಂತರ ನನ್ನ ಮನೆಯಿಂದ ಬೀದಿಗೆ ಹಾಕಿದ್ದು ಅವರು.

ಸಿಪಿ ಯೋಗೇಶ್ವರ್ ಅವರಂತ ತಂದೆ ಯಾರಿಗೂ ಬೇಡ...

ನೀವೆಲ್ಲಾ 'ಕುಟುಂಬದ ವಿಷಯ ಕುಟುಂಬದಲ್ಲೇ ಬಗೆಹರಿಸಿಕೊಳ್ಳಿ ಅಂತ ಹೇಳ್ತೀರಲ್ವಾ? ಹೇಗೆ ಬಗೆಹರಿಸಿಕೊಳ್ಳಲಿ? ನೀವೆಲ್ಲಾ ಬನ್ನಿ 50-100 ಇರಲಿ ಪರವಾಗಿಲ್ಲ. ಬನ್ನಿ ಅವರ ಜೊತೆ ಮಾತನಾಡಿ. ಅವರನ್ನು ಕೂಡಿಸಿ. ಶುರುವಿನಿಂದ ಮಾತನಾಡೋಣ. ಪಬ್ಲಿಕ್ ಮುಂದೆ ಮಾತನಾಡುವುದು ಅಷ್ಟು ಸುಲಭ ಅಲ್ಲ.

ನಾನು ಅಷ್ಟೊಂದು ನೊಂದಿರುವುದಕ್ಕೆ ಇವತ್ತು ಬಂದಿರೋದು. ಇಂತಹ ತಂದೆ ಯಾರಿಗೂ ಬೇಡ. ನನಗೂ ಬೇಡ. ಆದರೆ ನನ್ನ ಬಳಿ ಯಾವ ದಾರಿ ಇಲ್ಲ. ನನ್ನ ತಂದೆ ತುಂಬಾ ಪವರ್ ಫುಲ್ ವ್ಯಕ್ತಿ. ನಾನು ಮೀಡಿಯಾದಲ್ಲಿ ಮಾತನಾಡಬಾರದು ಅಂತ ಅಲ್ಲಿಂದಲೂ ನನ್ನ ಬ್ಲಾಕ್ ಮಾಡಿದರೆ. ನಾನು ಎಲ್ಲೋಗ್ಲಿ. ನನ್ನ ಆ ಮಟ್ಟಕ್ಕೆ ತಳ್ಳದೇ ಹೋಗಿದ್ರೆ ನಾನು ಮಾತನಾಡ್ತಾಯಿದ್ನಾ? ಎಲ್ಲರೂ ಹೇಳ್ತಾರೆ ಇದು ಕುಟುಂಬದ ವಿಷಯ ಅಂತಾ..

ಪಾಂಡವರು ಹಸ್ತಿನಾಪುರಕ್ಕೆ ಹೋದಾಗ ಅವರಿಗೆ ಅವಮಾನ ಮಾಡಲಾಗುತ್ತದೆ. ರಾಜ್ಯದಿಂದ ಬೀದಿಗೆ ಹಾಕ್ತಾರಾ. ಹಾಗಾದರೆ ಕೃಷ್ಣಪರಮಾತ್ಮ ಯಾಕೆ ಪಾಂಡವರ ಸಹಾಯಕ್ಕೆ ನಿಲ್ತಾನೆ. ಇದು ಮನೆ ವಿಷಯ ಅಲ್ವಾ..? ಹಾಗಾದರೆ ಇದು ಧರ್ಮದ ವಿಷಯನಾ? ಸತ್ಯದ ವಿಷಯನಾ? ಇದು ನನ್ನ ಪ್ರಶ್ನೆ. ನನ್ನ ಪ್ರಶ್ನೆಗೆ ನೀವು ಉತ್ತರ ಕೊಡಿ. ಆ ಉತ್ತರದಿಂದ ನನ್ನ ಮನಸ್ಸಿಗೆ ಶಾಂತಿ ಸಿಗಬಹುದು ಎಂದು ನಿಶಾ ವಿಡಿಯೋವನ್ನು ಮತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+