ಚನ್ನಪಟ್ಟಣಕ್ಕೆ ಸಚಿವ ಯೋಗೇಶ್ವರ್ ಆಗಮನ; ಅದ್ದೂರಿ ಸ್ವಾಗತ

ರಾಮನಗರ, ಜನವರಿ 18: ನೂರಾರು ಬೈಕ್‌ಗಳ ಜಾಥಾ, ಜೆಸಿಬಿಗಳ ಮೇಲಿನಿಂದ ಪುಷ್ಪಾರ್ಚನೆ, ಸಂಚಾರ ದಟ್ಟಣೆ, ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಅಂಬ್ಯುಲೆನ್ಸ್, ಪರದಾಡಿದ ವಾಹನ ಸವಾರರು. ಇವೆಲ್ಲವೂ ಚನ್ನಪಟ್ಟಣದಲ್ಲಿ ಸೋಮವಾರ ಕಂಡು ಬಂದ ದೃಶ್ಯಗಳು.

ಚನ್ನಪಟ್ಟಣದ ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ್ ಸೋಮವಾರ ಚನ್ನಪಟ್ಟಣಕ್ಕೆ ಭೇಟಿ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದ ಬಳಿಕ ಮೊದಲ ಬಾರಿ ಅವರು ಆಗಮಿಸಿದ್ದರು.

ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸಿ. ಪಿ. ಯೋಗೇಶ್ವರ್ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ದೇವಾಲಯದಿಂದ ಅಭಿಮಾನಿಗಳು ನೂರಾರು ಬೈಕ್‌ಗಳ ಜಾಥಾ ಮೂಲಕ ಅವರನ್ನು ಮೆರಣವಣಿಗೆ ಮೂಲಕ ಕರೆದುಕೊಂಡು ಹೋದರು.

Minister CP Yogeshwar Road Show, Temple Visit In Chennapatna

ಮಾಧ್ಯಮಗಳ ಜೊತೆ ಮಾತನಾಡಿದ ಸಿ. ಪಿ. ಯೋಗೇಶ್ವರ್, "ನಾನು ಇದೀಗ ಖಾತೆ ರಹಿತವಾಗಿ ಬಂದಿದ್ದೇನೆ. ಖಾತೆ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಮುಖ್ಯಮಂತ್ರಿಗಳು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ" ಎಂದರು.

"ಮುಂದಿನ ದಿನಗಳಲ್ಲಿ ಬೇರೆ ವಿಚಾರಗಳ ಬಗ್ಗೆ ಮಾತನಾಡುತ್ತೇನೆ. ಅಭಿಮಾನಿಗಳು ನನಗೆ ಅದ್ದೂರಿ ಸ್ವಾಗತ ಕೋರುವ ಮೂಲಕ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ" ಎಂದು ಸಿ. ಪಿ. ಯೋಗೇಶ್ವರ್ ಹೇಳಿದರು.

ಸಂಚಾರ ದಟ್ಟಣೆ; ಸಿ. ಪಿ. ಯೋಗೇಶ್ವರ್ ಮೆರವಣಿಗೆ ಹಿನ್ನಲೆಯಲ್ಲಿ ಕೆಂಗಲ್ ದೇವಾಲಯದಿಂದ ಚನ್ನಪಟ್ಟಣದ ತನಕ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿತ್ತು.

ರಾಮನಗರದ ರಸ್ತೆಯಲ್ಲಿ ಅಂಬ್ಯುಲೆನ್ಸ್ ಸಿಲುಕಿಕೊಂಡು ಚಾಲಕ ಹರಸಾಹಸ ಪಡಬೇಕಾಯಿತು. ಬೆಂಗಳೂರು-ಮೈಸೂರು ಹೆದ್ದಾರಿಯ ಶೆರ್ವಾ ಹೋಟೆಲ್ ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು.

ಹೆದ್ದಾರಿಯಲ್ಲಿ ಸಚಿವ ಸಿ. ಪಿ. ಯೋಗೀಶ್ವರ್ ಮೆರವಣಿಗೆ ಹಿನ್ನಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕೆಂಗಲ್ ದೇವಾಲಯದಿಂದ ಚನ್ನಪಟ್ಟಣದ ತನಕ ಏಕಮುಖ ಸಂಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+