ರಾಮನಗರ; ತಿಂಗಳ ಅಂತ್ಯದವರೆಗೆ ಸ್ವಯಂ ಲಾಕ್ ಡೌನ್ ಗೆ ವರ್ತಕರ ನಿರ್ಧಾರ

ರಾಮನಗರ, ಜೂನ್ 23: ರಾಜ್ಯದಲ್ಲಿ ಕೊರೊನಾ ರಣಕೇಕೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಎರಡು ತಾಲ್ಲೂಕುಗಳು ಸ್ವಯಂ ಲಾಕ್ ಡೌನ್ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಪಟ್ಟಣದ ವರ್ತಕರು ಸಭೆ ಸೇರಿ ಜೂನ್ 30ರವರೆಗೆ ಎಲ್ಲಾ ವಹಿವಾಟು ನಿಲ್ಲಿಸಿ ಲಾಕ್ ಡೌನ್ ಮಾಡಲು ನಿರ್ಣಯ ಕೈಗೊಂಡಿದ್ದಾರೆ.

ನಗರದ ಎಂಜಿ ರಸ್ತೆಯಲ್ಲಿರುವ ಕನ್ನಿಕಾ ಮಹಲ್ ನಲ್ಲಿ ಸಭೆ ನಡೆಸಿದ ಪಟ್ಟಣದ ವರ್ತಕರು, ಕೊರೊನಾ ವೈರಸ್ ತಡೆಗಟ್ಟಲು ನಾಳೆಯಿಂದ 6 ದಿನಗಳ ಕಾಲ ಸ್ವಯಂ ಪ್ರೇರಿತ ಲಾಕ್ ಡೌನ್ ಮಾಡುವ ಘೋಷಣೆ ಮಾಡಿದರು. ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಅಂಗಡಿಗಳು ತೆರೆಯಲಿವೆ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ.

Ramanagar Merchants Decided To Close Shops Till This Month End

ಜಿಲ್ಲೆಯ ಎರಡು ಪಟ್ಟಣಗಳಾದ ಕನಕಪುರ ಮತ್ತು ಮಾಗಡಿ ಪಟ್ಟಣಗಳು ಯಶಸ್ವಿಯಾಗಿ ಸ್ವಯಂ ಲಾಕ್ ಡೌನ್ ಮಾಡಿದ್ದಾರೆ. ಸಭೆಯಲ್ಲಿ ಎಲ್ಲಾ ವ್ಯಾಪಾರಸ್ಥರು ಸ್ವಯಂ ಲಾಕ್ ಡೌನ್ ನಿರ್ಧಾರಕ್ಕೆ ಒಮ್ಮತ ವ್ಯಕ್ತಪಡಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಶತಕದ ಅಂಚಿನಲ್ಲಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಕಳವಳ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+