ಮೇಕೆದಾಟು ಯೋಜನೆ: ದೇವೆಗೌಡರು ಮಾತ್ರ ಧ್ವನಿ ಎತ್ತುತ್ತಾರೆ, 25 ಜನ ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ?
ರಾಮನಗರ, ಜನವರಿ, 30: ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು 100ಕ್ಕೂ ಹೆಚ್ವು ಕನ್ನಡ ಪರ ಸಂಘಟನೆಗಳ ಒಕ್ಕೂಟ ದೆಹಲಿ ಚಲೋಗೆ ಹಮ್ಮಿಕೊಂಡಿವೆ. ಈ ಮೂಲಕ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಮೇಕೆದಾಟು ಯೋಜನೆ ಅನುಷ್ಠಾನ ಮಾಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಹಾಗೆಯೇ ಈ ಬಗ್ಗೆ ಎಚ್.ಡಿ. ದೇವೆಗೌಡರು ಮಾತ್ರ ಧ್ವನಿ ಎತ್ತುತ್ತಿದ್ದಾರೆ. ಆದರೆ 25 ಜನ ಸಂಸದರು ಎಲ್ಲಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ಚಲೋ ಸಂಬಂಧ ನಗರದ ಹೊರ ವಲಯದ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮೇಕೆದಾಟು ಹೋರಾಟ ಸಮಿತಿ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ 100ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷರುಗಳು ನವದೆಹಲಿಗೆ ತೆರಳಿ ಫೆಬ್ರವರಿ 1 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ, ನಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಪ್ರಧಾನಮಂತ್ರಿ ಮಾಡಿದರೂ, ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ-ಸಿದ್ದರಾಮಯ್ಯ
ಈಗಾಗಲೇ ಮಾಜಿ ಪ್ರಧಾನಿಗಾಳಾದ ಎಚ್.ಡಿ.ದೇವೇಗೌಡರ ಮೂಲಕ ರಾಷ್ಟ್ರಪತಿಗಳ ಕಛೇರಿಗೆ ಮನವಿ ನೀಡಿದ್ದು, ಹೋರಾಟಗಾರರ ಭೇಟಿಗೆ ರಾಷ್ಟ್ರಪತಿಗಳ ಕಛೇರಿಯಿಂದ ಅನುಮತಿ ನೀಡಿದ್ದಾರೆ. ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಹೋರಾಟ ಮಾಡುತ್ತಿದ್ದಾರೆ. ಆದರೂ ಯೋಜನೆ ವಿಳಂಬವಾಗುತ್ತಿರುವುದನ್ನು ಅವರ ಗಮನಕ್ಕೆ ತರುತ್ತೇವೆ ಎಂದರು.

ತಮಿಳುನಾಡು ಸರ್ಕಾರದ ಜೊತೆ ಚರ್ಚಿಸಿ
ಇನ್ನು ಮೇದಾಟು ಹೋರಾಟ ಸಮಿತಿ ಸದಸ್ಯ ವಿ.ನರಸಿಂಹಮೂರ್ತಿ ಮಾತನಾಡಿ, ಮೇಕೆದಾಟು ಯೋಜನೆ ಜಾರಿಯಿಂದಾಗಿ ಈ ಭಾಗದ ಹಲವು ಜಿಲ್ಲೆಗಳು ಸೇರಿದಂತೆ ಬೆಂಗಳೂರು ಮಹಾನಗರಕ್ಕೆ ಅನುಕೂಲವಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ವಹಿಸಬೇಕು. ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ನಡೆಸಿ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು.

25 ಜನ ಸಂಸದರು ಏನು ಮಾಡುತ್ತಿದ್ದಾರೆ?
ತಮ್ಮ ಇಳಿ ವಯಸ್ಸಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಬ್ಬರು ಮಾತ್ರ ನವದೆಹಲಿಯಲ್ಲಿ ರಾಜ್ಯದ ಪರವಾದ ಧ್ವನಿ ಎತ್ತುತ್ತಾರೆ. ಆದರೆ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ. ಎಲ್ಲಾ ಬಿಜೆಪಿ ಸಂಸದರು ಪ್ರಧಾನಮಂತ್ರಿ ಮೋದಿ ಯವರ ಮೇಲೆ ಒತ್ತಡ ಏರಬೇಕು . ಕೇಂದ್ರ ಸರ್ಕಾರ ಎರಡು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿದರು

ಉಗ್ರ ಹೋರಾಟ ಕೈಗೊಳ್ಳುವ ಎಚ್ಚರಿಕೆ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಮೇಕೆದಾಟು ಯೋಜನೆ ಜಾರಿಯಾಗಬೇಕು. ಇಲ್ಲವಾದಲ್ಲಿ ಎಲ್ಲಾ ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಉಗ್ರ ಹೋರಾಟ ಕೈಗೊಳ್ಳುತ್ತೇವೆ. ಜೊತೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಕನ್ನಡ ಪರ ಹೋರಾಟಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

3-4 ದಶಕಗಳಿಂದಲೂ ಹೋರಾಟ
ನಂತರ ಮೇಕೆದಾಟು ಹೋರಾಟ ಸಮಿತಿ ಅಧ್ಯಕ್ಷ ಸು.ಚಿ.ನಿಲೇಶ್ ಗೌಡ ಮಾತನಾಡಿ, ಮೇಕೆದಾಟು ಹೊರಾಟ ನಿನ್ನೆ ಮೊನ್ನೆಯದಲ್ಲ. ಈ ನಾಡಿನ ಹಲವಾರು ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಹಾಗೂ ನಾಡಿನ ಚಿಂತಕರು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಸುಮಾರು 3-4 ದಶಕಗಳಿಂದಲೂ ಹೋರಾಟವನ್ನು ಮಾಡುತ್ತಾ ಬಂದಿವೆ. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಮ್ಮ ಹೊರಾಟಗಾರರ ಕೂಗಿಗೆ ಕಿವಿಕೊಡದೆ ಉದ್ದಟತನ ಪ್ರದರ್ಶಿಸುತ್ತಿವೆ ಎಂದು ಕಿಡಿಕಾರಿದರು.
ಬೆಂಗಳೂರು ನಗರ ಬೃಹದ್ದಾಕಾರವಾಗಿ ಬೆಳೆಯುವುತ್ತಿರುವುದರಿಂದ ಈಗಾಗಲೇ ಸುಮಾರು ಪ್ರತಿನಿತ್ಯ 800 ದಶಲಕ್ಷ ಲೀಟರ್ ಕುಡಿಯುವ ನೀರಿನ ಅವಶ್ಯಕತೆಯಿದೆ. 2030 ರೊಳಗೆ 1,500 ದಶಲಕ್ಷ ಲೀಟರ್ ಕುಡಿಯುವ ನೀರಿನ ಅವಶ್ಯಕತೆ ಬರುತ್ತದೆ. ಹಾಗಾಗಿ ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಈ ಕೂಡಲೇ ಮದ್ಯಪ್ರವೇಶಿಸಬೇಕಿದೆ. ತನ್ನ ಒಣ ರಾಜಕೀಯವನ್ನು ಬದಿಗೊತ್ತಿ ಮುಂದೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಆಹಾಕಾರ ಬರುವುದನ್ನ ತಪ್ಪಿಸಲೂ ಮುಂದಾಗಬೇಕು ಆಗ್ರಹಿಸಿದರು.











Click it and Unblock the Notifications