ಮಕ್ಕಳಲ್ಲಿ ಸಾಮೂಹಿಕ ಚರ್ಮ ಸಮಸ್ಯೆ; ಹಾಸ್ಟೆಲ್ ವಾರ್ಡನ್ ಅಮಾನತಿಗೆ ಆದೇಶ

ರಾಮನಗರ, ಸೆಪ್ಟೆಂಬರ್ 3: ಸ್ವಚ್ಛತೆ ಕೊರತೆಯಿಂದಾಗಿ ಮಕ್ಕಳಲ್ಲಿ ಸಾಮೂಹಿಕವಾಗಿ ಚರ್ಮ ಸಮಸ್ಯೆ ಕಾಣಿಸಿಕೊಂಡು ಈಚೆಗೆ ಸುದ್ದಿಯಾಗಿದ್ದ ರಾಮನಗರದ ಕೈಲಾಂಚ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಅನ್ನು ಅಮಾನತುಗೊಳಿಸಲಾಗಿದೆ.

ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಚರ್ಮರೋಗ ತಗುಲಿದ್ದು, ವಸತಿ ಶಾಲೆಯಲ್ಲಿನ ಅಶುದ್ಧತೆಯೇ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಹಾಸ್ಟೆಲ್ ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದರು. ಎಲ್ಲ ವ್ಯವಸ್ಥೆ ನೀಡುವ ಭರವಸೆಯನ್ನೂ ನೀಡಿದ್ದರು.

ಈ ವಿದ್ಯಮಾನಗಳಿಗೆ ಹಾಸ್ಟೆಲ್ ವಾರ್ಡನ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅವರ ಕರ್ತವ್ಯ. ಆದರೆ ಆ ಕರ್ತವ್ಯಕ್ಕೆ ಲೋಪ ಎಸಗಲಾಗಿದೆ ಎಂದು ಹಾಸ್ಟೆಲ್ ವಾರ್ಡನ್ ಅಮಾನತ್ತಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಆದೇಶಿಸಿದ್ದಾರೆ.

Mass Skin Problem In Hostel Children Warden Suspension

"ಅಧಿಕಾರಿಗಳ ನಿರ್ಲ್ಯಕ್ಷದಿಂದಾಗಿ ಮಕ್ಕಳಿಗೆ ಚರ್ಮ ರೋಗ ಬಂದಿದೆ. ಬಡ ಮಕ್ಕಳಿಗೆ ಎಲ್ಲ ಸೌಲಭ್ಯ ನೀಡಬೇಕೆಂಬುದು ಸರ್ಕಾರದ ಆಶಯ. ಆದರೆ ಅಧಿಕಾರಿಗಳು ಈ ಆಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಒಬ್ಬ ಅಧಿಕಾರಿಗೆ ಬಿಸಿ‌ ಮುಟ್ಟಿಸಿದರೆ ಇನ್ನುಳಿದ ಅಧಿಕಾರಿಗಳಿಗೆ ಬುದ್ಧಿ ಬರುತ್ತದೆ" ಎಂದು ಹೇಳಿ ಅಮಾನತುಗೊಳಿಸಲು ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+