ಜುಲೈ 31ರಂದು ವಿಶ್ವದ ಎತ್ತರದ ಪಂಚ ಲೋಹದ ಚಾಮುಂಡೇಶ್ವರಿ ಪ್ರತಿಮೆಗೆ ಮಹಾಮಸ್ತಾಭಿಷೇಕ
ರಾಮನಗರ, ಜುಲೈ 27: ಬೊಂಬೆ ನಗರಿ ಚನ್ನಪಟ್ಟಣ ಎಂದರೆ ನೆನಪಿಗೆ ಬರುವುದು ವಿಶ್ವ ವಿಖ್ಯಾತ ಮರದ ಅಟಿಕೆಗಳು ಹಾಗೂ ಗೌಡಗೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಸುಮಾರು 68 ಅಡಿ ಎತ್ತರದ , ವಿಶ್ವದ ಅತೀ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ. ಇದು ನಾಡಿನ ಜನತೆಯನ್ನಯ ತನ್ನತ್ತ ಸೆಳೆಯುತ್ತಿದೆ. ಅಲ್ಲದೇ ಈಗಾಗಲೇ ಅದರ ಖ್ಯಾತಿ ದೇಶದ ಇತರ ಭಾಗಗಳಿಗೆ ವ್ಯಾಪಿಸಿದೆ.
ಜಗತ್ತಿನ ಮೂದಲ ಪಂಚಲೋಹ ವಿಗ್ರಹ ಎಂಬ ಖ್ಯಾತಿ ಪಡೆದಿರುವ 68 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹಕ್ಕೆ ಇದೇ ಪ್ರಪ್ರಥಮ ಭಾರಿಗೆ ಜುಲೈ 31 ಭಾನುವಾರ ಮಹಾಮಸ್ತಾಭಿಷೇಕ ನಡೆಸಲು ದೇವಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಅದರಲ್ಲೂ ಶ್ರವಣಬೆಳಗೊಳ ಬಾಹುಬಲಿ ಮೂರ್ತಿಗೆ ಮಾಡುವ ಮಹಾಮಸ್ತಾಭಿಷೇಕ ಬಿಟ್ಟರೆ ಪಂಚಲೋಹ ವಿಗ್ರಹಕ್ಕೆ ನಡೆಯುತ್ತಿರುವ ಮೊದಲ ಮಹಾಮಸ್ತಾಭಿಷೇಕ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಇದೇ ಜುಲೈ 31 ರಂದು ಮಹಾಮಸ್ತಾಭಿಷೇಕ ನಡೆಸಲು ಶ್ರೀ ಕ್ಷೇತ್ರದಲ್ಲಿ ಸಕಲ ಸಿದ್ದತೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ಈ ಐತಿಹಾಸಿಕ ಕ್ಷಣಕ್ಕೆ ನಾಡಿನ ಹಲವು ರಾಜಕೀಯ ನೇತಾರರು, ಸಿನಿಮಾರಂಗದ ದಿಗ್ಗಜರು, ನಾಡಿನ ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಕೂಡ ಬಾಗಿಯಾಗಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯ್, ಕ್ಷೇತ್ರದ ಶಾಸಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಹಾಗೂ ಚಲನಚಿತ್ರರಂಗದ ನಟ ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರ ಭಾಗವಹಿಸಲಿದ್ದು, ಐತಿಹಾಸಿಕ ಮಹಾಮಸ್ತಾಭಿಷೇಕ ಕಾರ್ಯಕ್ರಮಕ್ಕೆ ನಾಡಿನ ಲಕ್ಷಾಂತರ ಬಂದಿ ಸಾಕ್ಷಿಯಾಗಲಿದ್ದಾರೆ.

ಮೊದಲ ಬಾರಿಗೆ ಮಹಾಮಸ್ತಾಭಿಷೇಕ
ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಗೆ ಇಡೀ ಜಗತ್ತೇ ತಲ್ಲಣಿಸಿತ್ತು. ಪ್ರಸ್ತುತ ತಾಯಿ ಆಶೀರ್ವಾದದಿಂದ ಕೊರೊನಾ ಕೊಂಚ ತಗ್ಗಿದೆ. ಮುಂದೆ ಯಾವುದೇ ಆತಂಕಗಳು ಎದುರಾಗದೆ ನಾಡಿನ ಜನರು ಸುಬೀಕ್ಷೆಯಾಗಿ ಜೀವನ ನಡೆಸಲಿ ಎಂಬ ಲೋಕ ಕಲ್ಯಾಣಕ್ಕಾಗಿ ತಾಯಿಗೆ ಮಹಾಮಸ್ತಾಭಿಷೇಕ ಹಮ್ಮಿಕೊಂಡಿದ್ದೇವೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಮಲ್ಲೇಶ್ ತಿಳಿಸಿದ್ದಾರೆ.
ಸುಮಾರು 45 ಬಗೆಯ, 37247 ಕೆಜಿ ಪ್ರಮಾಣದ ದ್ರವ್ಯಗಳಿಂದ ಚಾಮುಂಡೇಶ್ವರಿ ದೇವಿಯ 68 ಅಡಿ ಎತ್ರದ ಪಂಚಲೋಹ ವಿಗ್ರಹಕ್ಕೆ ಮಹಾಮಸ್ತಾಭಿಷೇಕ ಮಾಡಲಾಗುವುದು. ಜುಲೈ 31 ಭಾನುವಾರ ಬೆಳಿಗ್ಗೆ ಸುಮಾರು 10:30ರ ಒಳಗೆ ಪ್ರಾರಂಭವಾಗುವ ಈ ಮಹಾಮಸ್ತಾಭಿಷೇಕ, ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಇದು ಪ್ರಥಮ ಭಾರಿಯ ಮಹಾಮಸ್ತಾಭಿಷೇಕ. ಇನ್ನೂ ಮುಂದೆ ಮೂರು ವರ್ಷ ಅಥವಾ ಐದು ವರ್ಷಗಳಿಗೊಮ್ಮೆ ತಾಯಿ ಚಾಮುಂಡೇಶ್ವರಿ ಮಹಾಮಸ್ತಾಭಿಷೇಕ ಮಾಡಲಾಗುವುದು ಎಂದು ಧರ್ಮದರ್ಶಿ ತಿಳಿಸಿದರು.

ಮಹಾಮಸ್ತಾಭಿಷೇಕ ಮಾಡಲು ನಾಗಸಾಧು ಆದೇಶ
2011ರಲ್ಲಿ ಗೌಡಗೆರೆ ಕ್ಷೇತ್ರಕ್ಕೆ ಬೇಟಿ ನೀಡಿದ ಅಘೋರಿ ನಾಗ ಸಾಧುಗಳು, ಕ್ಷೇತ್ರದಲ್ಲಿ ತಾಯಿ ಚಾಮುಂಡೇಶ್ವರಿ ತಾಯಿ ಪಂಚಲೋಹದ ವಿಗ್ರಹ ಸ್ಥಾಪನೆ ಮಾಡುವಂತೆ ಸೂಚನೆ ನೀಡಿದ್ದರು. ಅಲ್ಲದೇ ಅಘೋರಿ ಸಾಧುಗಳು ಪ್ರತಿಮೆ ನಿರ್ಮಾಣದ ನಂತರ ತಾಯಿ ಮಹಾಮಸ್ತಾಭಿಷೇಕ ಮಾಡಬೇಕು ಎಂದು ಅಂದೇ ಆದೇಶ ಮಾಡಿದ್ದರು. ಹಾಗಾಗಿ ಅಘೋರಿ ಸಾಧುಗಳ ಆದೇಶದಂತೆ ಮಹಾಮಸ್ತಾಭಿಷೇಕ ಹಮ್ಮಿಕೊಂಡಿದ್ದೇವೆ ಎಂದು ಮಲ್ಲೇಶ್ ಹೇಳಿದರು.

ಮಹಾಮಸ್ತಾಭಿಷೇಕದಲ್ಲಿ 5 ಕೆಜಿ ಕಾಶ್ಮಿರಿ ಕೇಸರಿ ಬಳಕೆ
ಐತಿಹಾಸಿಕ ಮಹಾಮಸ್ತಾಭಿಷೇಕದಲ್ಲಿ 5 ಕೆಜಿ ಅಪರೂಪದ ಕಾಶ್ಮಿರಿ ಕೇಸರಿ ಬಳಸುತ್ತಿದ್ದೇವೆ. ಅಲ್ಲದೇ ಚಿನ್ನದ ನೀರು, ಬೆಳ್ಳಿಯ ನೀರು, ಮುತ್ತಿನ ನೀರು, ಪಂಚಗವ್ಯ ಸೇರಿದಂತೆ ದೇಶದ ಹಲವು ಪುಣ್ಯ ನದಿಗಳ ಜಲವನ್ನು ತಾಯಿಯ ಮಹಾಮಸ್ತಾಭಿಷೇಕದಲ್ಲಿ ಬಳಸುತ್ತಿದ್ದೇವೆ. ಅಂದು ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಜನರು ಯಾವುದೇ ಧರ್ಮ ಭೇದವಿಲ್ಲದೆ, ಯಾವುದೇ ಜಾತಿ ಜನಾಂಗದ ತಾರತಮ್ಯವಿಲ್ಲದೆ ಎಲ್ಲರು ಸ್ವತಃ ತಾವುಗಳೇ 68 ಅಡಿ ಎತ್ತರದ ತಾಯಿ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಿದ್ದೇವೆ ಎಂದು ಮಾಹಿತಿ ನೀಡಿದರು.

68 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹದ ವಿಶೇಷತೆ
ಅತೀ ಎತ್ತರದಲ್ಲಿ ಜಗತ್ತಿನಲ್ಲೇ ಪ್ರಥಮ ವಿಗ್ರಹ ಎನ್ನಲಾಗಿರುವ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಪಂಚಲೋಹ ವಿಗ್ರಹ, ಸುಮಾರು 35 ಸಾವಿರ ಕೆ.ಜಿ ತೂಕದ ಚಿನ್ನ, ಬೆಳ್ಳಿ, ಇತ್ತಾಳೆ, ಕಂಚು, ತಾಮ್ರ ಸೇರಿದಂತೆ ಪಂಚಲೋಹಗಳಿಂದ ತಯಾರಾಗಿದೆ. ಈ ವಿಗ್ರಹವನ್ನು ಮುಸ್ಲಿಂ ಕಲಾವಿದನ ಸಾರಥ್ಯದಲ್ಲಿ ನಿರ್ಮಾಣಗೊಂಡಿದೆ ಎಂಬುದು ಪ್ರತಿಮೆಯ ವಿಷೇಷಗಳಲ್ಲೂಂದು.
ನೆಲಮಟ್ಟದಿಂದ 68 ಅಡಿ ಎತ್ತರವಿದ್ದು, ಹದಿನೆಂಟು ಭುಜಗಳಲ್ಲಿ ಶಂಖ ಚಕ್ರ, ಗದಾ ಹಸ್ತೆ, ಸರ್ಪ ಶಾರ್ದೂಲ, ಕಮಂಡಲ, ಅಂಕುಶ, ಖಡ್ಗ, ಪರಶು, ಧನಸ್ಸು ಹೀಗೆ ಹದಿನೆಂಟು ಬಗೆಯ ಆಯುಧಗಳನ್ನು ಕೈಯಲ್ಲಿ ಹಿಡಿದು ಸಿಂಹದ ಜೊತೆಯಲ್ಲಿ ಸೌಮ್ಯ ರೂಪಿಯಾಗಿ ನಿಂತಿರುವ ಭಂಗಿಯಲ್ಲಿರುವ ನಾಡ ದೇವತೆ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ದಿನ ದೇಶದ ನಾನಾ ಮೂಲೆಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ ಪ್ರತಿಮೆಯನ್ನು ಕಣ್ಣತುಂಬಿಕೊಳ್ಳುತ್ತಿದ್ದಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications