ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಗಮನ ಸೆಳೆದಿರುವ ಕುಮಾರಣ್ಣ ಸ್ಪರ್ಧಿಸಿರುವ ರಾಮನಗರ ರಣಾಂಗಣ

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವ ರಾಮನಗರ ಕ್ಷೇತ್ರ ರಣಾಂಗಣ | Oneindia Kannada

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೈ ವೊಲ್ಟೇಜ್ ಸ್ಪರ್ಧೆ ನಿರೀಕ್ಷಿಸುವಂಥ ಹಾಗೂ ಭಾರೀ ಸುದ್ದಿಯಲ್ಲಿ ಇರುವಂಥ ಕ್ಷೇತ್ರ ರಾಮನಗರ. ರೇಷ್ಮೆನಾಡು ಅಂತಲೇ ಖ್ಯಾತಿ ಪದೆದಿರುವ ಜಿಲ್ಲೆ ರಾಮನಗರ. ರಾಜ್ಯಕ್ಕೆ ಮೂವರು‌ ಮುಖ್ಯಮಂತ್ರಿಗಳನ್ನು ನೀಡಿದ ಕ್ಷೇತ್ರ ಇದು. ಈ ಕ್ಷೇತ್ರದಿಂದ ಗೆದ್ದಿದ್ದ ಕೆಂಗಲ್ ಹನುಮಂತಯ್ಯ, ಎಚ್.ಡಿ‌.ದೇವೇಗೌಡ , ಎಚ್.ಡಿ‌.ಕುಮಾರಸ್ವಾಮಿಯಂಥ ಪ್ರಮುಖ ನಾಯಕರಿಗೆ ರಾಜಕೀಯ ಜನ್ಮ ನೀಡಿದ ಶಕ್ತಿಕೇಂದ್ರ.

2007ರ ಆಗಸ್ಟ್‌ ನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಿಲ್ಲಾಕೇಂದ್ರವಾಗಿ ಘೋಷಣೆ ಮಾಡಿದರು. ಜೆಡಿಎಸ್ ನ ಭದ್ರಕೋಟೆ ಆಗಿರುವ ರಾಮನಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿದ ಎಂ.ಮರಿದೇವರು 58 ಸಾವಿರ ಮತ ಪಡೆದು ಕುಮಾರಸ್ವಾಮಿ ಅವರಿಗೆ ಪೈಪೋಟಿ ನೀಡಿದರು.

ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರ ಕ್ಷೇತ್ರದ ಅಂತರಂಗಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರ ಕ್ಷೇತ್ರದ ಅಂತರಂಗ

ಮರಿದೇವರು ಅವರ ನಿಧನದ ನಂತರ ಕಾಂಗ್ರೆಸ್ ಗೆ ಇಲ್ಲಿ ಅಭ್ಯರ್ಥಿಗಳ ಕೊರತೆ ಉಂಟಾಗಿದೆ. ಇಲ್ಲಿಂದ ಮಾಜಿ ಸಂಸದೆ ತೇಜಸ್ವಿನಿ ಗೌಡ ಅವರು ಬಿಜೆಪಿ ಟಿಕೆಟ್ ಪಡೆದು, ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತಿದೆ. ಹಾಗೊಂದು ವೇಳೆ ಆದರೆ ಮಾತ್ರ ಕೇಸರಿ ಪಕ್ಷದ ಬಾವುಟ ಪಟಪಟಿಸುತ್ತದೆ. ಇಲ್ಲದಿದ್ದರೆ ಬಿಜೆಪಿಯು ಆಟಕ್ಕುಂಟು, ಲೆಕ್ಕಕ್ಕೆ ಇಲ್ಲದಂತಾಗುತ್ತದೆ.

2013ರ ವಿಧಾನಸಭೆ ಚುನಾವಣೆಯ ಫಲಿತಾಂಶ

2013ರ ವಿಧಾನಸಭೆ ಚುನಾವಣೆಯ ಫಲಿತಾಂಶ

ಈ ಹಿಂದೆ ಗೆದ್ದವರು ಎಚ್.ಡಿ ಕುಮಾರಸ್ವಾಮಿ

ಪಕ್ಷ: ಜೆಡಿಎಸ್

ಪಡೆದ ಮತ: 83,447


ಸೋತವರು: ದಿ. ಮರಿದೇವರು

ಪಕ್ಷ: ಕಾಂಗ್ರೆಸ್

ಪಡೆದ ಮತ: 58,049

ಗೆಲುವಿನ ಅಂತರ: 25,398ಮತ

2013ರಲ್ಲಿ ಕ್ಷೇತ್ರದ ಮತದಾರರ ವಿವರ

2013ರಲ್ಲಿ ಕ್ಷೇತ್ರದ ಮತದಾರರ ವಿವರ

ಪುರುಷರು :1,01,109

ಮಹಿಳೆಯರು :1,00,223

ಒಟ್ಟು ಮತದಾರರು : 2,01,332


ಜಾತಿವಾರು ಮತಗಳು

ಒಕ್ಕಲಿಗರು : 96,060

ದಲಿತರು : 44,300

ಮುಸ್ಲಿಮರು : 35,700

ಲಿಂಗಾಯತರು:11,000

ಕುರುಬರು :4,300

ತಿಗಳರು :5,400

ಬಲಿಜರು :2,000

ಕ್ರಿಶ್ಚಿಯನ್ ‌ :1,400

ಇತರೆ :2,828

2018ರ ಮತದಾರರ ಸಂಖ್ಯೆ

2018ರ ಮತದಾರರ ಸಂಖ್ಯೆ

ಪುರುಷರು: 1,02,011

ಮಹಿಳೆಯರು: 1,02,978

ತೃತೀಯ ಲಿಂಗಿಗಳು: 25

ಒಟ್ಟು ಮತದಾರರು: 2,05,014


ಈ ಬಾರಿಯ ವಿವಿಧ ಪಕ್ಷದ ಸ್ಪರ್ಧಿಗಳು

ಜೆಡಿಎಸ್: ಎಚ್.ಡಿ‌. ಕುಮಾರಸ್ವಾಮಿ

ಕಾಂಗ್ರೆಸ್: ಇಕ್ಬಾಲ್ ಹುಸೇನ್

ಬಿಜೆಪಿ: ಎಸ್‌.ಆರ್ ನಾಗರಾಜ್ / ಜಗದೀಶ್ ಗೌಡ (ಸಂಭಾವ್ಯ ಅಭ್ಯರ್ಥಿಗಳು)

ಕಣದಲ್ಲಿರುವ ಅಭ್ಯರ್ಥಿಗಳ ಪ್ಲಸ್-ಮೈನಸ್

ಕಣದಲ್ಲಿರುವ ಅಭ್ಯರ್ಥಿಗಳ ಪ್ಲಸ್-ಮೈನಸ್

ಎಚ್.ಡಿ.ಕುಮಾರಸ್ವಾಮಿ

ಪ್ಲಸ್

ತಾಲ್ಲೂಕು ಕೇಂದ್ರವನ್ನು ಜಿಲ್ಲಾಕೇಂದ್ರವಾಗಿ ಮಾಡಿದ್ದು

ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಯೋಜನೆಗಳು


ಮೈನಸ್

ಕ್ಷೇತ್ರಕ್ಕೆ ಅಪರೂಪಕ್ಕೆ ಬೇಟಿ ನೀಡುತ್ತಾರೆ ಎನ್ನುವ ಆರೋಪ

ಮತದಾರರಿಗೆ ಸ್ಥಳೀಯ ಜೆಡಿಎಸ್ ಮುಖಂಡರ ಮೇಲಿನ ಸಿಟ್ಟು


ಇಕ್ಬಾಲ್ ಹುಸೇನ್

ಮುಸ್ಲಿಂ ಮತದಾರರು ಕೈಹಿಡಿಯುತ್ತಾರೆ ಎಂಬ ನಂಬಿಕೆ

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹೋದರರ ಆಶೀರ್ವಾದ


ಮೈನಸ್

ಈ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖ

ಅಕ್ರಮ ಕಲ್ಲುಗಣಿಗಾರಿಕೆಯ ಆರೋಪ

English summary
Karnataka Assembly Elections 2018: JDS is very strong in Ramanagara assembly constituency, Ramanagara. Former chief minister HD Kumaraswamy is very strong in this constituency. He is contesting for Karnataka assembly elections 2018 as JDS candidate. Ikbal from Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X