ಡಿಕೆ ಶಿವಕುಮಾರ್ ಭದ್ರಕೋಟೆ ಕನಕಪುರ ಕ್ಷೇತ್ರದ ಅಂತರಂಗ
ಇಲ್ಲಿನ ಬಹುತೇಕ ಜನರಿಗೆ ಮರೆತು ಹೋಗಿರಲಿಕ್ಕೆ ಸಾಕು, ಅಂದಿನ ಹೆಸರು ಕಾಂಕನಳ್ಳಿ. ಅದೇ ಸ್ವಾಮಿ, ಇಂದಿನ ಕನಕಪುರ. ಈಗ ಕನಕಪುರ ಎಂದರೆ ನೆನಪಾಗುವುದು ಗ್ರಾನೈಟ್ ಕಲ್ಲು. ಇಲ್ಲಿ ಸಿಗುವ ಕರಿಕಲ್ಲಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೇಡಿಕೆ. ಈ ಭಾಗದ ಶಿಕ್ಷಣ ಕ್ರಾಂತಿಯ ಹರಿಕಾರರಾದ ಕನಕಪುರದ ಗಾಂಧಿಯೆಂದೇ ಪ್ರಸಿದ್ಧವಾಗಿದ್ದ ಕರಿಯಪ್ಪನವರು ಜನಿಸಿದ ಭೂಮಿ.
ಆದರೆ, ಈಗ ರಾಜ್ಯ ರಾಜಕಾರಣದಲ್ಲಿ ಪವರ್ ಫುಲ್ ಸಚಿವ ಅಂತಲೇ ಗುರುತಿಸಿಕೊಂಡಿರುವ ಡಿ.ಕೆ.ಶಿವಕುಮಾರ್ ಅವರು ಸತತ ಪ್ರತಿನಿಧಿಸುತ್ತಿರುವ ವಿಧಾನಸಭೆ ಕ್ಷೇತ್ರ ಇದು. ಒಂದು ಕಾಲದಲ್ಲಿ ಪ್ರಭಾವಿ ನಾಯಕರೆಂದು ಹೆಸರು ಮಾಡಿದ್ದ ಪಿ.ಜಿ.ಆರ್.ಸಿಂಧ್ಯಾ ಅವರನ್ನು ಮಣಿಸಿ, ರಾಜಕೀಯ ಜೀವನ ಆರಂಭಿಸಿದ ಡಿ.ಕೆ.ಶಿವಕುಮಾರ್ ಮತ್ತೆ ಹಿಂತಿರುಗಿ ನೋಡಿಲ್ಲ.
2008ರಲ್ಲಿ ಸಾತನೂರು ವಿಧಾನ ಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದ ಶಿವಕುಮಾರ್ ಕ್ಷೇತ್ರ ಪುರ್ನವಿಂಗಡಣೆ ಆದಾಗ ಕನಕಪುರ ಸೇರಿತ್ತು. ಕನಕಪುರದಲ್ಲಿ ಸಿಂಧ್ಯ ಕಟ್ಟಿದ ಕೋಟೆಯನ್ನು ಛಿದ್ರಪಡಿಸಿ ಇದೀಗ ಶಿವಕುಮಾರ್ ಪಾರುಪತ್ಯೆ ಮಾಡುತ್ತಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಲವತ್ತು ಸಾವಿರ ಮತಗಳಿಂದ ಜಯ ಗಳಿಸಿದ ಶಿವಕುಮಾರ್ ಎದುರಿಗೆ ಪ್ರಬಲ ಎದುರಾಳಿಗಳ ಕೊರತೆ ಇದೆ.
ಕ್ಷೇತ್ರ ದಲ್ಲಿ ಬಿಜೆಪಿಗೆ ನೆಲೆಯಿಲ್ಲ. ಆದರೆ ಜೆಡಿಎಸ್ ನಿಂದ ಡಿ.ಕೆ.ಶಿವಕುಮಾರ್ ನಾಗಾಲೋಟಕ್ಕೆ ಅಡ್ಡ ಹಾಕುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.

ಈ ಹಿಂದೆ ಗೆದ್ದವರು ಡಿ.ಕೆ.ಶಿವಕುಮಾರ್
ಕನಕಪುರ
2013: ಡಿ.ಕೆ ಶಿವಕುಮಾರ್(ಕಾಂಗ್ರೆಸ್)
ಪಡೆದ ಮತ- 1,00,007
-----------
ಈ ಹಿಂದೆ ಸೋತವರು
ಪಿ.ಜಿ.ಆರ್ ಸಿಂಧ್ಯಾ
ಪಡೆದ ಮತ- 68,583
------------
ಗೆಲುವಿನ ಅಂತರ:
31,424ಮತ (2013)

ಕ್ಷೇತ್ರದ ಮತದಾರರು(2013)
ಪುರುಷರು : 1,10,951
ಮಹಿಳೆಯರು : 1,06,967
ಒಟ್ಟು ಮತದಾರರು : 2,17,918
ಒಕ್ಕಲಿಗರ ಪ್ರಾಬಲ್ಯ
ಜಾತಿವಾರು ಮತಗಳ ಮಾಹಿತಿ
ಒಕ್ಕಲಿಗರು : 98,567
ದಲಿತರು : 44,344
ಮುಸ್ಲಿಮರು : 22,500
ಲಿಂಗಾಯತರು:18,500
ಕುರುಬರು :5600
ತಿಗಳರು :10500
ಕ್ರೈಸ್ತ :2507
ಬೆಸ್ತರು :6000
ಇತರೆ 9400

2018ರ ಜನ ಸಂಖ್ಯೆ ಮಾಹಿತಿ
ಪುರುಷರು: 1,09,876
ಮಹಿಳೆಯರು: 1,10,504
ತೃತೀಯ ಲಿಂಗಿಗಳು: 11
ಒಟ್ಟು ಮತದಾರರು: 2,20,391

2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳು
ಜೆಡಿಎಸ್: ಡಿ.ಎಂ.ವಿಶ್ವನಾಥ್ (ಸಂಭಾವ್ಯ ಅಭ್ಯರ್ಥಿ)
ಕಾಂಗ್ರೆಸ್: ಡಿ.ಕೆ.ಶಿವಕುಮಾರ್
ಬಿಜೆಪಿ: ನಂದಿನಿಗೌಡ (ಸಂಭಾವ್ಯ ಅಭ್ಯರ್ಥಿ)

ಡಿ.ಕೆ.ಶಿವಕುಮಾರ್ ಪ್ಲಸ್-ಮೈನಸ್
ಪ್ಲಸ್
* ಪ್ರಬಲ ಎದುರಾಳಿಗಳೇ ಇಲ್ಲ
* ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು
ಮೈನಸ್
* ಅಕ್ರಮ ಗಣಿಗಾರಿಕೆ ಆರೋಪ ಮತ್ತು ಆದಾಯ ತೆರಿಗೆ ಇಲಾಖೆಯ ದಾಳಿ
* ರಿಪಬ್ಲಿಕ್ ಮಾದರಿ ಆಡಳಿತ ಹಾಗೂ ಸರ್ವಾಧಿಕಾರಿ ವರ್ತನೆ












Click it and Unblock the Notifications