ರಾಮನಗರದಲ್ಲಿ ಹೆಚ್.ಡಿ ಕುಮಾರಸ್ವಾಮಿಗೆ ಹಿನ್ನೆಡೆ
ರಾಮನಗರ ಮತ್ತು ಚೆನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿರುವ ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿಗೆ ರಾಮನಗರದಲ್ಲಿ ಹಿನ್ನೆಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ 180 ಮತಗಳ ಮುನ್ನಡೆಯನ್ನ ಕಾಯ್ದುಕೊಂಡಿದ್ದು, ಹೆಚ್.ಡಿ.ಕೆಗೆ ಅಲ್ಪ ಹಿನ್ನೆಡೆಯಾಗಿದೆ.
ಮತ ಎಣಿಕೆಯ ಆರಂಭದಿಂದಲೂ ಎರಡು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದ ಕುಮಾರಸ್ವಾಮಿ ಈಗ (ಸಮಯ- 10.50 ರ ವೇಳೆಗೆ) ರಾಮನಗರದಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ.
ಆದ್ರೆ, ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ ರೇವಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಅವರನ್ನ ಹಿಂದಿಕ್ಕುವ ಮೂಲಕ ಗೆಲುವಿನತ್ತ ಸಾಗಿದ್ದಾರೆ.

ಸದ್ಯದ ಮಾಹಿತಿಯ ಪ್ರಕಾರ ಜೆಡಿಎಸ್ ಪಕ್ಷ ಸುಮಾರು 39-42 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.












Click it and Unblock the Notifications