ಕನಕಪುರ: KSRTC ಬಸ್‌ ಹಾಗೂ ಕಾರಿನ ನಡುವೆ ಭೀಕರ ಅಪಘಾತ, 6 ಜನ ಸಾವು

ರಾಮನಗರ, ಆಗಸ್ಟ್‌, 28: ಸಾರಿಗೆ (KSRTC) ಬಸ್ ಮತ್ತು ಕ್ವಾಲೀಸ್ ಕಾರ್ ನಡುವೆ ಭೀಕರ ಅಪಘಾತ ಸಂಭವಿಸದ ಘಟನೆ ಕನಕಪುರ ತಾಲೂಕಿನ ಸಾತನೂರು ಬಳಿಯ ಕೆಮ್ಮಾಳೆ ಗೇಟ್‌ ಬಳಿ ನಡೆದಿದೆ.

ಸಾತನೂರು ಕಡೆಯಿಂದ ಮೈಸೂರು ಕಡೆಗೆ ಬರುತ್ತಿದ್ದ KA-42-F-1745 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್‌ ಮತ್ತು KA-01-MF-8055 ನಂಬರ್‌ನ ಕ್ವಾಲೀಸ್ ವಾಹನದ ನಡುವೇ ಬೀಕರ ಅಪಘಾತವಾಗಿದ್ದು, ಈ ವೇಳೆ ಕ್ವಾಲೀಸ್ ವಾಹನದಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಾಗೇಶ್, ಪುಟ್ಟರಾಜು, ಜೋತಿರ್ಲಿಂಗಪ್ಪ (ಕಾರು ಮಾಲೀಕ), ಗೋವಿಂದ, ಕುಮಾರ್, ಮತ್ತೊಬ್ಬರ ಮೃತರ ಹೆಸರು ತಿಳಿದುಬಂದಿಲ್ಲ.ಅಪಘಾತದಲ್ಲಿ ಮೃತರಾದವರನ್ನು ಬೆಂಗಳೂರಿನ ಚಂದಾಪುರ ನಿವಾಸಿಗಳು ಎಂದು ಗುರುತಿಸಲಾಗಿದೆ.

Kanakapura: Horrible accident between KSRTC bus and car, 6 death

ಮತ್ತೊಂದೆಡೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದರೆ, ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. 6 ಜನ ಸ್ನೇಹಿತರು ಟೊಯೋಟೊ ಕ್ವಾಲಿಸ್ ವಾಹನದಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗಿ ದರ್ಶನ ಮುಗಿಸಿ ಸಂಜೆ 05.10 ಗಂಟೆ ಸಮಯದಲ್ಲಿ ವಾಪಾಸ್ ಆಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ಘಟನಾ ಸ್ಥಳಕ್ಕೆ ಸಾತನೂರು ಪೊಲೀಸರರು ದೌಡಾಯಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+