"ಮಿಣಿ ಮಿಣಿ" ಹೇಳಿಕೆಗೆ ನಾನು "ಕೂಲ್ ಕೂಲ್" ಎಂದ ಎಚ್ ಡಿಕೆ
Recommended Video
ರಾಮನಗರ,
ಜನವರಿ 28: ನಿನ್ನೆ ತಮ್ಮ "ಮಿಣಿಮಿಣಿ" ಹೇಳಿಕೆಯನ್ನು ಟ್ರೋಲ್ ಮಾಡಿರುವ ಬಿಜೆಪಿ ಕಾರ್ಯಕರ್ತರದು ವಿಕೃತ ಮನೋಭಾವ ಎಂದು ಸಿಡಿಮಿಡಿಗೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, "ಇಂಥ ವಿಚಾರಗಳನ್ನು ನಾನು ಕೂಲ್ ಆಗಿಯೇ ತೆಗೆದುಕೊಂಡಿದ್ದೇನೆ" ಎಂದು ಇಂದು ರಾಮನಗರದ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. id="toptextpromo"> id='are-slot-1' class='oiad oi-axt oiadv'>ಮಾಧ್ಯಮದವರೊಂದಿಗೆ
ಮಾತನಾಡಿದ ಅವರು, "ಶಾಂತಿಯ ವಾತಾವರಣ ಹಾಳು ಮಾಡಬೇಡಿ, ಸರಿಪಡಿಸಿಕೊಳ್ಳಿ ಎಂದಿದ್ದೇನೆ. ಅದಕ್ಕಾಗಿ ನನ್ನ ವಿರುದ್ಧ ಜಾಲತಾಣಗಳಲ್ಲಿ ಕೀಳುಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ನಾನು ಇಂತಹ ವಿಚಾರಗಳನ್ನ ಕೂಲ್ ಆಗಿಯೇ ತೆಗೆದುಕೊಂಡಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. id='are-slot-2' class='oiad oi-axt oiadv'>
"ನನ್ನಷ್ಟು ತಾಳ್ಮೆಯಿಂದಿರುವವರು ರಾಜಕಾರಣದಲ್ಲಿ ಯಾರೂ ಇಲ್ಲ"
"ನಾನು ಇದನೆಲ್ಲಾ ನೋಡಿದ್ದೇನೆ. ಆಕ್ರೋಶದಲ್ಲಿ ನಾನು ಏನನ್ನೂ ಹೇಳಲ್ಲ. ನನ್ನಷ್ಟು ತಾಳ್ಮೆಯಿಂದ ಇರುವವರು ರಾಜಕಾರಣದಲ್ಲಿ ಯಾರೂ ಇಲ್ಲ ಅನ್ನೋದು ನನ್ನ ಅಭಿಪ್ರಾಯ" ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

"ಅದು ನನ್ನ ಸರ್ಕಾರದಲ್ಲೇ ಕೊಟ್ಟಿದ್ದ ಅನುದಾನ"
ಬಿಜೆಪಿ ಸರ್ಕಾರದಿಂದ ಹೆಚ್ಚು ಅನುದಾನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಅದು ಈ ಸರ್ಕಾರದಲ್ಲಿ ಕೊಟ್ಟಿರೋದಲ್ಲ, ನನ್ನ ಸರ್ಕಾರದಲ್ಲೇ ಕೊಟ್ಟಿರೋದು.
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಾದಾಮಿ ಕ್ಷೇತ್ರಕ್ಕೆ 1200 ಕೋಟಿಗೂ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಜೊತೆಗೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ 19 ಸಾವಿರ ಕೋಟಿ ಹಣ ಕೊಟ್ಟಿದ್ದೇನೆ. ಆದರೆ ಸ್ಥಗಿತವಾಗಿದ್ದನ್ನು ಈ ಸರ್ಕಾರದಲ್ಲಿ ಕ್ಲಿಯರ್ ಮಾಡಿದ್ದಾರೆ ಅಷ್ಟೆ. ಈಗ ಕೆಲವು ಕ್ಷೇತ್ರದಲ್ಲಿ ಕಾಂಗ್ರೆಸ್ - ಜೆಡಿಎಸ್ ಕ್ಷೇತ್ರಗಳ ಅನುದಾನವನ್ನು ಬೇರೆಡೆಗೆ ಶಿಫ್ಟ್ ಮಾಡ್ತಿದ್ದಾರೆ" ಎಂದು ಹೇಳಿದರು.

ಒಳ ಒಪ್ಪಂದವಲ್ಲ, ನೇರವಾಗಿದ್ದರಷ್ಟೆ ಎಂದ ಎಚ್ ಡಿಕೆ
ಕುಮಾರಸ್ವಾಮಿ ಅವರನ್ನು ಹಣಿಯಲು ಸಿದ್ದರಾಮಯ್ಯಗೆ ಬಿಜೆಪಿ ಸರ್ಕಾರ ಮಣೆ ಹಾಕುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ರಾಜಕಾರಣದಲ್ಲಿ ಒಳ ಒಪ್ಪಂದದಿಂದ ಬದುಕುತ್ತೇವೆ ಎಂದರೆ ಹೆಚ್ಚು ದಿನ ಉಳಿಯುವುದಿಲ್ಲ. ಇಲ್ಲಿ ನೇರವಾಗಿರಬೇಕು ಅಷ್ಟೆ" ಎಂದು ಹೇಳೀದರು.

"ಪ್ರತಾಪ್ ಸಿಂಹನಿಗೆ ಯೋಗ್ಯತೆ ಇದ್ದರೆ ಅವರ ಸಿಎಂಗೆ ಹೇಳಲಿ"
ಕೊಡಗು ಪ್ರವಾಹ ಸಂತ್ರಸ್ತರಿಗೆ ಎಚ್ ಡಿಕೆ ಸರ್ಕಾರದಲ್ಲಿ ಪರಿಹಾರ ಘೋಷಣೆಯ್ತು ಅಷ್ಟೇ, ಕೊಟ್ಟಿದ್ದು ಮಾತ್ರ ಬಿಜೆಪಿ ಸರ್ಕಾರದಲ್ಲಿ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, "ಆ ಪ್ರತಾಪ ಸಿಂಹನಿಗೆ ಏನಾದರೂ ತಿಳಿವಳಿಕೆ ಇದ್ದರೆ, ನಾನೇನು ಪರಿಹಾರ ಕೊಟ್ಟಿದ್ದೆ, ಎಷ್ಟು ಹಣ ಕೊಟ್ಟಿದ್ದೆ ಹೋಗಿ ನೋಡಿ ಬರಬೇಕು. ಪ್ರತಾಪ್ ಸಿಂಹನ ಕೈಯಲ್ಲಿ ನಾನು ಹೇಳಿಸಿಕೊಳ್ಳಬೇಕೆ ಕೆಲಸ ಯಾವ ರೀತಿ ಮಾಡಬೇಕು ಅಂತ? ಬರವಣಿಗೆಯಲ್ಲಿ, ಟ್ವೀಟ್ ನಲ್ಲಿ ಕೆಟ್ಟ ಭಾವನೆಗಳನ್ನು ವ್ಯಕ್ತಪಡಿಸುವವನು ನಾನಲ್ಲ. ಪ್ರತಾಪ್ ಸಿಂಹಗೆ ಯೋಗ್ಯತೆ ಇದ್ದರೆ ಅವರ ಸಿಎಂಗೆ, ಪ್ರಧಾನಮಂತ್ರಿಗೆ ಹೇಳಲಿ. ರಾಜ್ಯದಲ್ಲಿರುವ ಜನರ ಸಮಸ್ಯೆಗಳನ್ನು ಬಗೆಹರಿಸಲಿ" ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದರು.












Click it and Unblock the Notifications