ರಾಮನಗರ; ಹಬ್ಬ ಮಾಡೋಣ ಎಂದು ಹೊಲದಲ್ಲಿ ಹೆಂಡತಿಯನ್ನೇ ಕೊಂದು ಹಾಕಿದ ಗಂಡ
ರಾಮನಗರ, ಜನವರಿ 17: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಅರಳೆಕಟ್ಟೆ ದೊಡ್ಡಿಯಲ್ಲಿ ನಡೆದಿದೆ.
Recommended Video
ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ವಿವರ ಗೊತ್ತಾ? | RASHMIKA MANDANNA | IT RAID | FILMIBEAT KANNADA
ತಾಲೂಕಿನ ಗಟ್ಟೀಪುರ ಸಮೀಪದ ಅರಳೆಕಟ್ಟೆ ದೊಡ್ಡಿಯಲ್ಲಿ ಘಟನೆ ನಡೆದಿದ್ದು, ಮಾಗಡಿ ತಾಲೂಕಿನ ಸೋಲೂರಿನ ಪಾರ್ವತಿ (35) ಕೊಲೆಯಾದ ಮಹಿಳೆ. ಸ್ವಾಮಿ ಎಂಬಾತ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಸ್ವಾಮಿ ಮುನಿಯಪ್ಪನ ಹಬ್ಬ ಮಾಡೋಣ ಎಂದು ತಮ್ಮ ಹುಟ್ಟೂರಾದ ಅರಳೆಕಟ್ಟೆದೊಡ್ಡಿಗೆ ಹೆಂಡತಿ ಪಾರ್ವತಿಯನ್ನು ಕರೆದುಕೊಂಡು ಬಂದಿದ್ದ. ಅಂದೇ ಸಂಜೆ ಹೊಲಕ್ಕೆ ಕರೆದೊಯ್ದು ಮಾರಕಾಸ್ತ್ರದಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications