ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಬ್ಬರು ಮಕ್ಕಳಲ್ಲಿ ಯಾರು ಪ್ರಾಮಾಣಿಕ ಎಂದು ನೀವೇ ತೀರ್ಮಾನ ಮಾಡಿ: ಕನಕಪುರ ಜನತೆಗೆ ಎಚ್‌ಡಿಕೆ ಮನವಿ

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ ಡಿಸೆಂಬರ್‌ 20: ಇದೊಂದು ಬಾರಿ ಕಾರ್ಯಕರ್ತರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದೀರಿ‌, ನಿಮ್ಮ ಒತ್ತಡಕ್ಕೆ ಮಣಿದು ನಾನು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ತಡರಾತ್ರಿವರೆಗೂ ನಡೆದ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ನಂತರ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ನಿಮ್ಮೆಲ್ಲರ ಒತ್ತಡ ಮಣಿದು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

Assembly election 2023: ಡಿಸೆಂಬರ್‌ 19ಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿAssembly election 2023: ಡಿಸೆಂಬರ್‌ 19ಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಎಚ್.ಡಿ.ಕುಮಾರಸ್ವಾಮಿ

ನನಗೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಕ್ಷೇತ್ರ. ಕಳೆದ ಬಾರಿ ಚುನಾವಣೆಯಲ್ಲಿ ನಿಮ್ಮ ಒತ್ತಾಯಕ್ಕೆ ಮಣಿದು ರಾಮನಗರ ಹಾಗೂ ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಅಕ್ಕಪಕ್ಕದ ತಾಲೂಕಿನಲ್ಲಿ ಯಾವ ರಾಜಕಾರಣಿ ಸಹ ಇಂತಹ ಎದೆಗಾರಿಕೆಯನ್ನು ತೋರಿಸಲ್ಲ. ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಮಾತ್ರ ಬಂದೆ. ಮತ ಕೇಳಲು ಬರಲಿಲ್ಲ. ಎರಡೂ ಕ್ಷೇತ್ರದ ಜನತೆ, ಕಾರ್ಯಕರ್ತರ ಶ್ರಮದಿಂದ ಎರಡು ಕಡೆ ಜಯಗಳಿಸಿದ್ದು ರಾಜಕೀಯವಾಗಿ ರಾಜ್ಯದಲ್ಲೇ ಇತಿಹಾಸ ಎಂದರು.

ಪ್ರೀತಿ ವಿಶ್ವಾಸ ಇದ್ದರೆ ಮಾತ್ರ ಜನ ಸೇರಿಸಲು ಸಾಧ್ಯ

ಪ್ರೀತಿ ವಿಶ್ವಾಸ ಇದ್ದರೆ ಮಾತ್ರ ಜನ ಸೇರಿಸಲು ಸಾಧ್ಯ

ಚನ್ನಪಟ್ಟಣ ಮತ್ತು ರಾಮನಗರ ನನ್ನ ಎರಡು ಕಣ್ಣುಗಳು. ಬಹಳ ಜನ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದರು. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ್ತೆ ನಿಲ್ಲುತಾರೋ ಅಥವಾ ಇಲ್ಲಿ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುತ್ತಾರೋ ಎಂದು ಪ್ರಚಾರ ಮಾಡಿದ್ದರು. ಕ್ಷೇತ್ರದ ಕೆಲ ಮುಖಂಡರು ಚನ್ನಪಟ್ಟಣ ಜೊತೆಗೆ, ಸುರಕ್ಷಿತ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ಕೂಡ ನೀಡಿದರು. ಚನ್ನಪಟ್ಟಣದಲ್ಲಿ ಕುತಂತ್ರದಿಂದಲೇ ನನ್ನ ಸೋಲಿಸಬಹುದು ಎಂಬ ಮಾತುಗಳು ಕೇಳಿ ಬಂದಿತ್ತು ಎಂದು ಹೇಳಿದ್ದರು.

ಜಿಲ್ಲೆಯಲ್ಲಿ ನಡೆದ ಐದು ದಿನಗಳ ಪಂಚರತ್ನ ರಥಯಾತ್ರೆಗೆ ಸಿಕ್ಕ ಅಭೂತಪೂರ್ವ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಕೊನೆಯ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಜರುಗುತ್ತಿದೆ. ಒಂದು ತಾಲೂಕು ಕೇಂದ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಲು ಸಾಧ್ಯವಿಲ್ಲ. ಪ್ರೀತಿ ವಿಶ್ವಾಸ ಇದ್ದರೆ ಮಾತ್ರ ಈ ರೀತಿಯ ಜನ ಸೇರಿಸಲು ಸಾಧ್ಯ.

ರಾಮನಗರದಲ್ಲಿ ನಿಖಿಲ್ ನಿಲ್ಲಿಸಲು ನಾನು ಒಪ್ಪಿರಲಿಲ್ಲ

ರಾಮನಗರದಲ್ಲಿ ನಿಖಿಲ್ ನಿಲ್ಲಿಸಲು ನಾನು ಒಪ್ಪಿರಲಿಲ್ಲ

ಕಳೆದ ಎರಡು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ವರದಿ ನೋಡಿದ್ದೆ, ರಾಜ್ಯದಲ್ಲಿ 57% ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂಬ ಸುದ್ದಿ. ಇದೊಂದು ಉದಾಹರಣೆ ಸಾಕು ನಮ್ಮ ಕನಸಿನ ಪಂಚರತ್ನ ಯೋಜನೆ ಶಿಕ್ಷಣ ಕ್ಷೇತ್ರಕ್ಕೆ ಅವಶ್ಯಕತೆ ಎಷ್ಟಿದೆ ಎಂದು ಮನವರೆಕೆಯಾಗುತ್ತದೆ. ನಮ್ಮ ಪಂಚರತ್ನ ಯೋಜನೆ ರಾಜ್ಯ‌ದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

‌‌‌ರೇಷ್ಮೆನಗರಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ರಾಮನಗರದಲ್ಲಿ ನಿಲ್ಲಿಸಲು ನಾನು ಒಪ್ಪಿರಲಿಲ್ಲ. ಅಲ್ಲಿ ಸ್ಥಳೀಯ ಅಭ್ಯರ್ಥಿ ಇಲ್ಲದ ಪರಿಣಾಮ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆ ಅನಿವಾರ್ಯವಾಗಿತ್ತು. ಹಾಗಾಗಿ ಅನಿತಾ ಕುಮಾರಸ್ವಾಮಿ, ನಿಖಿಲ್ ಸ್ಪರ್ಧೆಮಾಡುವುದಾಗಿ ಘೋಷಣೆ ಮಾಡಿದರು ಎಂದು ಸ್ಪಷ್ಟಪಡಿಸಿದರು.

ಕನಕಪುರದಲ್ಲಿ ಕಾರ್ಯಕರ್ತರ ನಿಂತರೂ 60 ಸಾವಿರ ಮತ ಬರುತ್ತದೆ

ಕನಕಪುರದಲ್ಲಿ ಕಾರ್ಯಕರ್ತರ ನಿಂತರೂ 60 ಸಾವಿರ ಮತ ಬರುತ್ತದೆ

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ‌ ಮಾಡಿ ಬಂದಾಗ ಇಲ್ಲಿ ನನಗೆ ಸ್ವಾಗತ ಮಾಡಿದ್ದು ಇತಿಹಾಸ. 2023ರ ಚುನಾವಣೆ ನಾನು ಸಿಎಂ ಆಗಬೇಕು ಎನ್ನುವುದು ದೈವ ಇಚ್ಛೆ ಹಾಗೂ ನಿಮ್ಮ ಆಶೀರ್ವಾದ. ರಾಜ್ಯದಲ್ಲಿ ಹಣಕ್ಕೆ ತೊಂದರೆಯಿಲ್ಲ, ಭಾಗ್ಯಲಕ್ಷ್ಮೀ ತುಂಬಿದ್ದಾಳೆ ಅದರೆ ನಮ್ಮನ್ನು ಆಳುವವರಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ರಾಜ್ಯ ಸರ್ಕಾರ ವಿರುದ್ಧ ಕಿಡಿಕಾರಿದರು.

ಕನಕಪುರ ಕ್ಷೇತ್ರದ ಮಹಾ ಜನತೆ ಅಲ್ಲಿ ಸಾಮಾನ್ಯ ಕಾರ್ಯಕರ್ತನ್ನು ಚುನಾವಣೆಗೆ ನಿಲ್ಲಿಸಿದರೂ ಸುಮಾರು 60 ರಿಂದ 70 ಸಾವಿರ ಮತ ನೀಡುತ್ತಾರೆ. ಪಂಚರತ್ನ ರಥಯಾತ್ರೆ ಕನಕಪುರದ ಸಾತನೂರಿಗೆ ಪ್ರವೇಶ ಮಾಡಿದಾಗ ಮಧ್ಯರಾತ್ರಿ 1:45 ಗಂಟೆ. ಅರ್ಧರಾತ್ರಿಯಲ್ಲೂ ಸಾವಿರಾರು ಜನ ನಮ್ಮನ್ನು ಸ್ವಾಗತ ಮಾಡಿರುವುದು ನೋಡಿದರೆ ಕ್ಷೇತ್ರದ ಜನ ನಮ್ಮ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸ ತಿಳಿಯುತ್ತದೆ.

ಡಿ.ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಅಸಮಾಧಾನ

ಡಿ.ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಅಸಮಾಧಾನ

ನಿನ್ನೆ ಕನಕಪುರದಲ್ಲಿ ಒಂದು ಮಾತು ಹೇಳಿದ್ದೆ. ಈ ಜಿಲ್ಲೆಯ ಜನರು ರಾಜಕೀಯವಾಗಿ ಇಬ್ಬರು ಮಕ್ಕಳನ್ನು ಬೆಳೆಸಿದ್ದೀರಿ.

ಒಂದು ಡಿ.ಕೆ ಶಿವಕುಮಾರ್ ಮತ್ತೆ ನಾನು. ಶಿವಕುಮಾರ್ ಸಹ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ನಾನು ಈಗಾಗಲೇ ಎರಡು ಬಾರಿ ಸಿಎಂ ಆಗಿದ್ದೇನೆ ಅದರೆ ನಾನು ಯಾವ ರೀತಿ ನಡೆದುಕೊಳ್ಳುತ್ತೀನಿ. ಡಿ.ಕೆ ಶಿವಕುಮಾರ್ ಹೇಗೆ ನಡೆದುಕೊಳ್ತಾರೆ..? ನೀವೇ ಬೆಳೆಸಿರುವ ಇಬ್ಬರು ಮಕ್ಕಳಲ್ಲಿ ಯಾರು ಪ್ರಾಮಾಣಿಕ ಎಂದು ನೀವೇ ತೀರ್ಮಾನ ಮಾಡಿ ಎಂದು ಕನಕಪುರ ಜನರಿಗೆ ಮನವಿ ಮಾಡಿದರು.

ಅಧಿಕಾರಿಗಳನ್ನು ಕಣ್ವಾ ರಸ್ತೆ ಕಾಮಗಾರಿ ವಿಳಂಬ ವಿಚಾರವಾಗಿ ಮನೆಗೆ ಕರೆಸಿ ಎಚ್ಚರಿಕೆ ಕೊಟ್ಟೆ, ಕಳಪೆ ಕಾಮಗಾರಿ ಆದರೆ ಬ್ಲ್ಯಾಕ್ ಲಿಸ್ಟ್‌ನಲ್ಲಿ ಹಾಕಿಸುತ್ತೇನೆ ಎಂದು ಹೇಳಿದ್ದೇನೆ. ಇಲ್ಲಿನ ಭಗೀರಥ ಅಂತ ಕಟೌಟ್ ಹಾಕಿಸಿಕೊಳ್ಳುವನು ನನ್ನ ಬಗ್ಗೆ ಮಾತನಾಡುತ್ತಾನೆ. ಕ್ಷೇತ್ರದಲ್ಲಿ ಕಳೆದ 6 ತಿಂಗಳಲ್ಲಿ ಮೂರು ಜನ ತಹಶಿಲ್ದಾರ್ ಬದಲಾಗಿದ್ದಾರೆ ಎನ್ನುವ ವಿಚಾರ ಪ್ರಸ್ತಾಪಿಸಿ ಪರೀಕ್ಷವಾಗಿ ಸಿ.ಪಿ.ಯೋಗೇಶ್ವರ್ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ ಎಂದರು.

English summary
HD kumaraswamy Lashes out at C. P Yogeshwar and D.K Shivakumar. and his reaction about Kanakapura, channapatna pancharatna yatre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X