• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪತ್ರ ಬರೆದಿಟ್ಟು ಅಭಿಮಾನಿ ಆತ್ಮಹತ್ಯೆ; ಅಂತ್ಯ ಸಂಸ್ಕಾರಕ್ಕೆ ಬಂದ ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|

ರಾಮನಗರ, ಜನವರಿ 17: "ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನನ್ನ ಅಂತ್ಯಕ್ರಿಯೆಗೆ ಬರಬೇಕು" ಎಂದು ಡೆತ್ ನೋಟ್ ಬರೆದಿಟ್ಟು ಕುಮಾರಸ್ವಾಮಿ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಲ್ಲದೇ ಅದೇ ಪತ್ರದಲ್ಲಿ ತನ್ನ ಸಾಕು ನಾಯಿಗೆ ಅಂತಿಮ ನಮಸ್ಕಾರ ಹೇಳಿದ್ದು, ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅನಾರೋಗ್ಯಕ್ಕೆ ತುತ್ತಾಗಿದ್ದ ಆಟೋ ಚಾಲಕ ಹಾಗೂ ಕಲಾವಿದ ಜಯರಾಮು ತಾನು ಸಾಯುವ ಮುನ್ನ ನೆಚ್ಚಿನ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರು ನನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪತ್ರ ಬರೆದಿಟ್ಟಿದ್ದಾನೆ.

ಅಮಿತ್ ಶಾ ಬಳಿ ಸ್ಪಷ್ಟನೆ ಕೇಳಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್!

ಕಳೆದ ಕೆಲವು ರ್ಷಗಳಿಂದ ಕಾಲಿನ ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದ ಜಯರಾಮು ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಜಯರಾಮು ಬರೆದಿಟ್ಟ ಪತ್ರವೀಗ ಬಹಿರಂಗಗೊಂಡಿದೆ. ಎಚ್. ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಜಯರಾಮು ಅಂತಿಮ ದರ್ಶನ ಪಡೆದರು.

ಕುಮಾರಸ್ವಾಮಿ V/S ಯೋಗೇಶ್ವರ ಮಾತಿನ ಮಲ್ಲಯುದ್ಧ!

ಭಾನುವಾರ ಮೃತನ ಸ್ವಗ್ರಾಮ ಬೊಮ್ಮಚನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ಮೃತನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದರು. ಮುಂದಿನ ದಿನಗಳಲ್ಲಿ ಮೃತನ ಕುಟುಂಬದ ಜೀವನಾಧಾರಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಎಂಎಲ್ಸಿ ಯೋಗೇಶ್ವರ್‌ಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ

ಪತ್ರ ಬರೆದಿಟ್ಟಿದ್ದ ಜಯರಾಮು

ಪತ್ರ ಬರೆದಿಟ್ಟಿದ್ದ ಜಯರಾಮು

ಡೆತ್ ನೋಟ್‌ನಲ್ಲಿ ಜಯರಾಮು ಅವರು, "ಶಂಕರ್ ನಾಗ್ ಆಪೇ ಆಟೋ ಚಾಲಕರು ಮತ್ತು ಕಲಾವಿದರಿಗೆ ನನ್ನ ಅಂತಿಮ ನಮಸ್ಕಾರಗಳು, ನನಗೆ ಬುದ್ಧಿ ಬಂದಾಗಿನಿಂದ ಜೆಡಿಎಸ್ ಪಕ್ಷಕ್ಕೆ ಮತ ಚಲಾಯಿಸಿದ್ದೇನೆ" ಎಂದು ಬರೆದಿದ್ದಾರೆ.

ಮುಂದಿನ ಜನ್ಮದಲ್ಲಿ ತೀರಿಸುವೆ

ಮುಂದಿನ ಜನ್ಮದಲ್ಲಿ ತೀರಿಸುವೆ

"ನನ್ನ ಅಂತಿಮ ಯಾತ್ರೆಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬರಬೇಕು ಹಾಗೂ ನನ್ನ ಬುದ್ಧಿಮಾಂಧ್ಯ ಮಗನಿಗೆ ಅರ್ಥಿಕ ಸಹಾಯ ಮಾಡಿ, ನಿಮ್ಮ ಸಹಾಯವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ" ಎಂದು ಬರೆದಿದ್ದಾರೆ.

ಸಾಕು ನಾಯಿಗೂ ನಮನ

ಸಾಕು ನಾಯಿಗೂ ನಮನ

ದಯವಿಟ್ಟು ನನ್ನ ಮಗನಿಗೆ ಒಂದು ದಾರಿ ಮಾಡಲೇಬೇಕು ಅಣ್ಣಾ ಎಂದು ಜಯರಾಮು ಪತ್ರದಲ್ಲಿ ವಿನಂತಿ ಮಾಡಿಕೊಂಡಿದ್ದಾರೆ. ನನ್ನ ಪ್ರೀತಿಯ ಸಾಕುಪ್ರಾಣಿ ರಾಮುಗೆ ನನ್ನ ಕೊನೆಯ ನಮಸ್ಕಾರಗಳು ಎಂದು ಭಾವನಾತ್ಮಕ ವಾಗಿ ಪತ್ರ ಬರೆದಿಟ್ಟಿದ್ದಾರೆ.

ಅಂತಿಮ ದರ್ಶನ ಪಡೆದರು

ಅಂತಿಮ ದರ್ಶನ ಪಡೆದರು

ತನ್ನ ಅಭಿಮಾನಿಯ ಕೊನೆಯ ಆಸೆಯಂತೆ ಮೃತ ಜಯರಾಮು ಅಂತಿಮ ಸಂಸ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಮೃತನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದರು. ಮುಂದಿನ ದಿನಗಳಲ್ಲಿ ಮೃತನ ಕುಟುಂಬದ ಜೀವನಾಧಾರಕ್ಕೆ ಸಹಾಯ ಮಾಡುವ ಭರವಸೆಯನ್ನು ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಎಚ್. ಡಿ. ಕುಮಾರಸ್ವಾಮಿ ಭೇಟಿ

ರಾಮನಗರ ಜಿಲ್ಲೆಯ ಬೊಮ್ಮಚನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತಿಮ ದರ್ಶನ ಪಡೆದರು.

English summary
Former chief minister H. D. Kumaraswamy fan committed suicide in Ramanagara. In a death note he request Kumarasway to participate in the funeral. On Sunday Kumaraswamy attend the funeral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X