ಕಾರು ತಡೆದ ಪಿಎಸ್ ಐಗೆ ಅವಾಜ್ ಹಾಕಿದ ಮಾಜಿ ಶಾಸಕ
ರಾಮನಗರ, ಮೇ 07: ತಮ್ಮ ಕಾರು ತಡೆಹಿಡಿದಿದ್ದ ಕಾರಣಕ್ಕೆ ಕರ್ತವ್ಯ ನಿರತ ಪಿಎಸ್ಐಗೆ ಮಾಜಿ ಶಾಸಕ ಕೆ.ರಾಜು ಏಕವಚನದಲ್ಲಿ ಮಾತನಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸಂಜೆ 7ರ ನಂತರ ವಾಹನ ಸಂಚಾರಕ್ಕೆ ನಿರ್ಬಂಧವಿದ್ದ ಕಾರಣ, ರಾಮನಗರದ ಮಾಗಡಿ ಮುಖ್ಯ ರಸ್ತೆಯಲ್ಲಿ ಪೊಲೀಸರು ರಸ್ತೆಗೆ ಇಳಿದಿದ್ದ ವಾಹನಗಳನ್ನು ತಡೆಯುತ್ತಿದ್ದರು. ಪೊಲೀಸರು ಕೆ.ರಾಜು ಅವರ ಕಾರನ್ನೂ ಅಡ್ಡಗಟ್ಟಿದ್ದರು. ವಾಹನ ತಡೆದ ವಿಚಾರವನ್ನು ಕಾರಿನ ಚಾಲಕ, ಕೆ.ರಾಜು ಅವರಿಗೆ ಕರೆ ಮಾಡಿ ತಿಳಿಸಿದ್ದ. ಫೋನ್ ಲೈನಿನಲ್ಲಿದ್ದ ಮಾಜಿ ಶಾಸಕ ಕೆ.ರಾಜು ಅವರೊಂದಿಗೆ ರಾಮನಗರ ಟೌನ್ ಸಿಪಿಐ ನರಸಿಂಹಮೂರ್ತಿ ಮಾತನಾಡಲಿಲ್ಲ.

ಈ ಕಾರಣಕ್ಕೆ ಸ್ಥಳಕ್ಕೆ ಬಂದ ಮಾಜಿ ಶಾಸಕ ಪಿಎಸ್ ಐ ಮೇಲೆ ಅವಾಜ್ ಹಾಕಿದ್ದಾರೆ. ಏನ್ ಮಾಡಬೇಕು ಅಂತ ನನಗೆ ಗೊತ್ತು, ಮಾಡ್ತೀನಿ ನೋಡು ಎಂದು ಏಕವಚನದಲ್ಲಿ ಮಾತನಾಡಿರುವುದಾಗಿ ತಿಳಿದುಬಂದಿದೆ.












Click it and Unblock the Notifications