ರಾಮನಗರದಲ್ಲಿ ಹೊತ್ತಿ ಉರಿದ ಅಂಗಡಿ, ಲಕ್ಷಾಂತರ ರೂ. ನಷ್ಟ

Posted By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಮಾರ್ಚ್ 10 : ರಾಮನಗರ ಜಿಲ್ಲೆ ಚನ್ನಪಟ್ಟಣದ ಸಾತನೂರು ವೃತ್ತದಲ್ಲಿ ಅಗ್ನಿ ಅವಘಡ ನಡೆದಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ಫ್ಲೈವುಡ್, ಯಂತ್ರ, 8 ಬೈಕ್‌ಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಸುಟ್ಟು ಕರಕಲಾಗಿವೆ.

ಶನಿವಾರ ಮುಂಜಾನೆ 3 ಗಂಟೆ ಸಮಯದಲ್ಲಿ ನವೀದ್ ಎಂಬುವವರ ಫ್ಲೈವುಡ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸಕ್ಯೂರ್ಟ್‌ ಉಂಟಾಗಿ ಈ ಅವಘಡ ನಡೆದಿದೆ. ಬೆಂಕಿ ಹೆಚ್ಚಾಗಿ ಪಕ್ಕದಲ್ಲೇ ಇದ್ದ ಬೈಕ್ ಗ್ಯಾರೇಜ್‌ಗೂ ವ್ಯಾಪಿಸಿದೆ.

ಸಿಗರೇಟಿನಿಂದಾಗಿ ಸುಟ್ಟು ಕರಕಲಾಯಿತು ಬಹುಮಹಡಿ ಕಟ್ಟಡ

ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ, ಬೆಂಕಿಯ ಪ್ರಮಾಣ ಹೆಚ್ಚಾದ ಪರಿಣಾಮ ತಕ್ಷಣ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ. ಆದರೆ, ಅಗ್ನಿಶಾಮಕ ದಳದವರು ಬರುವಷ್ಟರಲ್ಲೇ ಫ್ಲೈವುಡ್‌ ಅಂಗಡಿ ಬಹುತೇಕ ಸುಟ್ಟು ಕರಕಲಾಗಿತ್ತು.

ಬೆಂಕಿ ದುರಂತ ನಂತರ ಚೇತರಿಕೆಯತ್ತ ಕೆ.ಆರ್. ಮಾರ್ಕೆಟ್: ಚಿತ್ರಗಳು

Fire engulfs shop in Ramanagara causes 2 lakh loss

ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ, ಪಕ್ಕದಲ್ಲೇ ಇದ್ದ ಬೈಕ್ ಗ್ಯಾರೇಜ್‌ಗೂ ವ್ಯಾಪಿಸಿದೆ. ನಿಧಾನವಾಗಿ ಗ್ಯಾರೇಜ್‌ನಲ್ಲಿದ್ದ ಸುಮಾರು 8 ಬೈಕ್, ಆಯಿಲ್ ಬಾಕ್ಸ್‌ಗಳು ಹಾಗೂ ಪರಿಕರಗಳೆಲ್ಲ ಬೆಂಕಿಗಾಹುತಿಯಾಗಿದೆ. ಗ್ಯಾರೇಜ್ ಮಾಲೀಕ ಇರ್ಫಾನ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Fire engulfs shop in Ramanagara causes 2 lakh loss

ಶಾರ್ಟ್‌ ಸಕ್ಯೂರ್ಟ್‌ನಿಂದಾಗಿ ಅನಾಹುತ ನಡೆದಿದೆ ಎಂದು ತಿಳಿದುಬಂದಿದೆ. ಆದರೆ, ಈ ಘಟನೆಗೆ ನಿಜವಾದ ಕಾರಣ ಏನು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರದಲಿದೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fire broke out in a shop that sells plywood sheets in Channapatna circle, Ramanagara on March 10, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ