ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೈಲ ಬೆಲೆ ಹೆಚ್ಚಿಸಿ ಜನರ ಕಣ್ಣಿಗೆ ಬೂದಿ- ಡಿ.ಕೆ.ಸುರೇಶ್ ಆಕ್ರೋಶ

|
Google Oneindia Kannada News

ರಾಮನಗರ: ಮೇ 6: ಕೇಂದ್ರ ಸರ್ಕಾರ ಏಕಾಎಕಿ ಪೆಟ್ರೋಲ್ ಮತ್ತು ಡಿಸೇಲ್ ದರ ಎಚ್ಚಿಸುವ ಮೂಲಕ ಜನ‌ ಸಾಮಾನ್ಯರ ಕಣ್ಣಿಗೆ ಬೂದಿ‌ ಎರಚುವ ಕೆಲಸ ಮಾಡಿರುವುದು ನನಗೆ ಆಶ್ಚರ್ಯ ತಂದಿದೆ‌ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿರುವ ಅವರು ''ಕಚ್ಚಾ ತೈಲ ಬೆಲೆ ಕಳೆದ ಮೂವತ್ತು ವರ್ಷಗಳಲ್ಲಿ ಅತ್ಯಂತ ಕನಿಷ್ಟ ಮಟ್ಟಕ್ಕೆ ಇಳಿದಿದೆ. ಆದರೆ, ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ 10 ರೂಪಾಯಿ ಮತ್ತು ಡಿಸೇಲ್ ಬೆಲೆ 13 ರೂಪಾಯಿ ಹೆಚ್ಚಳ ಮಾಡಿದೆ.'' ಎಂದು ಅಸಮಾದಾನ ಹೊರಹಾಕಿದ್ದಾರೆ.

ಶಾಕಿಂಗ್ ಸುದ್ದಿ: ಪೆಟ್ರೋಲ್ ದರದಲ್ಲಿ 10, ಡೀಸೆಲ್ 13 ರೂಪಾಯಿ ಏರಿಕೆ! ಶಾಕಿಂಗ್ ಸುದ್ದಿ: ಪೆಟ್ರೋಲ್ ದರದಲ್ಲಿ 10, ಡೀಸೆಲ್ 13 ರೂಪಾಯಿ ಏರಿಕೆ!

ಈಗಾಗಲೇ ಕೊರೋನಾ ಅಟ್ಟಹಾಸಕ್ಕೆ ಸಿಕ್ಕು ನರಳುತ್ತಿರುವ ಜನ ಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ನೇರವಾಗಿ ದೌರ್ಜನ್ಯ ದಬ್ಬಾಳಿಕೆ ಮಾಡಿದೆ. ಕೋವಿಡ್ -19‌ ತಂದಿರುವ ಸಂಕಷ್ಟದಿಂದ ಜನರು ಆರ್ಥಿಕ ಕುಸಿತ ಕಂಡಿದ್ದಾರೆ ಎಂದು ಹೇಳಿದ್ದಾರೆ.

DK Suresh Reaction About Diesel And Petrol Price Hike

ಅಲ್ಲದೇ, ಲಾಕ್‌ಡೌನ್ ಸಮಯದಲ್ಲಿ ಅನೇಕರು ಉದ್ಯೋಗ ಕಳೆದುಕೊಂಡು ಮನೆಯಲ್ಲಿ ಕುಳಿತಿದ್ದಾರೆ. ಇಂತಹವರ ನೆರವಿಗೆ ದಾವಿಸಬೇಕಾದ ಕೇಂದ್ರ ಸರ್ಕಾರ ಪ್ರತಿಹಂತದಲ್ಲೂ ತೆರಿಗೆಗಳನ್ನು ಹೆಚ್ಚಿಸಿ ಮತ್ತಷ್ಟು ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದಿದ್ದಾರೆ.

ಹೀಗಾಗಿ, ಕೇಂದ್ರ ಸರ್ಕಾರದ ವಿರುದ್ಧ ದ್ವನಿ ಎತ್ತುವಂತೆ ಸಂಸದರಿಗೆ ಡಿ.ಕೆ.ಸುರೇಶ್ ಕರೆ ನೀಡಿದ್ದಾರೆ.

English summary
MP DK Suresh reaction about Diesel and Petrol price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X