ಕೇಂದ್ರ ಹೇಳಿದಂತೆ ಕೇಳಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಡಿ.ಕೆ.ಸುರೇಶ್

ರಾಮನಗರ, ಏಪ್ರಿಲ್ 20: ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವಂತೆ ಲಾಕ್ ಡೌನ್ ಮುಂದುವರೆಸಬೇಕು. ಲಾಕ್ ಡೌನ್ ತೆರವು ಮಾಡಿದರೆ ಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುವುದರಿಂದ ಕೊರೊನಾ ಸೋಂಕು ಹರಡುವ ಭೀತಿಯಿದೆ. ಹಾಗಾಗಿ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಪಾಲಿಸಬೇಕು ಎಂದು ಸಂಸದ ಡಿ.ಕೆ. ಸುರೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಡದಿಯಲ್ಲಿ ನಿನ್ನೆ ಮಾತನಾಡಿದ ಅವರು, "ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಕೇಂದ್ರ ತಿಳಿಸಿದೆ. ಹೀಗಾಗಿ ಲಾಕ್ ಡೌನ್ ತೆರವುಗೊಳಿಸಬಾರದು" ಎಂದು ಹೇಳಿದರು. ರಾಮನಗರ ಜಿಲ್ಲೆ ಹಾಗೂ ಆನೇಕಲ್ ಸೇರಿದಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 500 ಕೋಟಿಗೂ ಹೆಚ್ಚು ನಷ್ಟವನ್ನ ಹೂವಿನ ಬೆಳೆಗಾರರು ಅನುಭವಿಸಿದ್ದಾರೆ. ಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ವಾಸ್ತವದ ಅರಿವಿಲ್ಲ. ಕೊರೊನಾದಿಂದಾಗಿ ಈ ಪರಿಸ್ಥಿತಿ ಎದುರಾಗಿದೆ" ಎಂದರು.

DK Suresh Forced State Government To Follow Central Government Instruction

"ಈಗ ದೇವಸ್ಥಾನಗಳು ಬಂದ್ ಆಗಿವೆ. ಸಮಾರಂಭಗಳು, ಮದುವೆಗಳು ನಡೆಯುತ್ತಿಲ್ಲ. ಬೆಳೆಯನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತಾಗಿ ನಾವು ಈಗಾಗಲೇ ಸಿಎಂ ಗಮನಕ್ಕೆ ತಂದಿದ್ದೇವೆ. ಕೂಡಲೇ ನಷ್ಟಕ್ಕೊಳಗಾಗಿರುವ ರೈತರ ಬಗ್ಗೆ ಗಮನಹರಿಸಬೇಕು. ನಾನು ರಾಮನಗರ ಜಿಲ್ಲೆ ಹಾಗೂ ಹೊರಭಾಗದ 300 ರೈತರ ತೋಟಗಳಿಗೆ ಭೇಟಿ ಕೊಟ್ಟು ಅವರಿಂದ ಸುಮಾರು 2.500 ಸಾವಿರ ಟನ್ ಗೂ ಹೆಚ್ಚು ತರಕಾರಿ, ಹಣ್ಣು ಖರೀದಿ ಮಾಡಿ ಜಿಲ್ಲೆಯ ಜನರಿಗೆ ಉಚಿತವಾಗಿ ಹಂಚುತ್ತಿದ್ದೇವೆ. ಹಾಗೆಯೇ ಪಕ್ಷದ ಮುಖಂಡರಿಗೂ ಖರೀದಿ ಮಾಡಲು ಮನವಿ ಮಾಡಿದ್ದೇನೆ" ಎಂದು ಡಿ.ಕೆ.ಸುರೇಶ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+