ರಾಮನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಗಾದಿ ಹಿಡಿದ ಡಿ.ಕೆ.ಶಿವಕುಮಾರ್ ಆಪ್ತ

ರಾಮನಗರ, ಅಕ್ಟೋಬರ್ 14: ರಾಮನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯ ನಡುವೆಯೂ ಡಿಕೆಶಿ ಆಪ್ತ ಎಚ್. ಬಸಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Recommended Video

      DK Shivakumar's mother Gowramma to be inquired next | Oneindia Kannada

      ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಬಸಪ್ಪ ಮಾತನಾಡಿ, "ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನನಗೆ ಸಂತಸವಾಗಿಲ್ಲ. ಡಿ.ಕೆ.ಶಿವಕುಮಾರ್ ಅವರು ಸಂಕಷ್ಟದಲ್ಲಿದ್ದಾರೆ. ಅವರು ಇಂದು ಇಲ್ಲಿದ್ದರೆ ಹಬ್ಬದಂತೆ ಸಂಭ್ರಮಾಚರಣೆ ಮಾಡುತ್ತಿದ್ದೆವು" ಎಂದು ಬೇಸರ ವ್ಯಕ್ತಪಡಿಸಿದರು. ಆದರೂ ಡಿಕೆಶಿಯವರು ಈ ಹಿಂದೆಯೇ ಸೂಚಿಸಿದ್ದಂತೆ ಅಧ್ಯಕ್ಷ ಪದವಿ ದಕ್ಕಿದೆ ಎಂದರು.

      ಪ್ರತಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಆಯ್ಕೆಯಲ್ಲಿ ಡಿ.ಕೆ.ಶಿವಕುಮಾರ್ ಅಂತಿಮ ನಿರ್ಣಯವಾಗಿರುತ್ತಿತ್ತು. ಕಳೆದ ಬಾರಿಯ ಅಧ್ಯಕ್ಷರ ಚುನಾವಣೆಯಲ್ಲೇ ಉಳಿದ ಹತ್ತು ತಿಂಗಳ ಅವಧಿಗೆ ಬಸಪ್ಪರವರನ್ನೇ ಅಧ್ಯಕ್ಷರಾಗಿ ಮಾಡುವುದಾಗಿ ಡಿಕೆಶಿ ಸಹೋದರರು ಕೊಟ್ಟ ಭರವಸೆಯಂತೆ ಇಂದು ಬಸಪ್ಪ ಜಿಲ್ಲಾಪಂಚಾಯ್ತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

      DK Shivakumar Close Aid Basappa Elected As Chairman Of District Panchayat

      ಇಂದು ನಿಗದಿಯಾಗಿದ್ದ ಜಿಪಂ ಚುನಾವಣೆಯಲ್ಲಿ ಎಚ್.ಬಸಪ್ಪ ಹೊರತುಪಡಿಸಿ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಬಸಪ್ಪ ಅವರನ್ನು ನೂತನ ಅಧ್ಯಕ್ಷರಾಗಿ ಘೋಷಣೆ ಮಾಡಿದರು. 22 ಸದಸ್ಯ ಬಲವುಳ್ಳ ಜಿ.ಪಂಯಲ್ಲಿ 16 ಕಾಂಗ್ರೆಸ್, 6 ಜೆಡಿಎಸ್ ಸದಸ್ಯರಿದ್ದಾರೆ. ನೂತನ ಅಧ್ಯಕ್ಷ ಎಚ್.ಬಸಪ್ಪ ಹೊಸದುರ್ಗ ಜಿಲ್ಲಾಪಂಚಾಯ್ತಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+