ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ; ಜಾನಪದ ಲೋಕದ ಮಣ್ಣಿನ ಹಣತೆಗೆ ಬಹು ಬೇಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 31; ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಜನರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಹಣತೆಗಳಿಗೆ ಭಾರೀ ಬೇಡಿಕೆ ಇರುತ್ತದೆ. ಆಕರ್ಷಕ ಪಿಂಗಾಣಿ, ಸ್ಟೀಲ್ ಮತ್ತು ಮೇಳದ ದೀಪಗಳು ಮಾರುಕಟ್ಟೆಯಲ್ಲಿವೆ.

ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಹಣತೆಗಳಿಗೆ ಹೆಚ್ಚು ಬೇಡಿಕೆ. ರಾಮನಗರ ಜಿಲ್ಲೆಯಲ್ಲಿರುವ ಜಾನಪದ ಲೋಕದ ಮಣ್ಣಿನ ಹಣತೆಗೆ ಬಹು ಬೇಡಿಕೆ ಇದೆ. ದೀಪಾವಳಿ ಹಬ್ಬಕ್ಕಾಗಿಯೇ ಜಾನಪದ ಲೋಕದಲ್ಲಿ ತಯಾರುಗುತ್ತಿವೆ ಹಲವು ಬಗೆಯ ವಿಶೇಷ ಮಣ್ಣಿನ ದೀಪಗಳು.

ಕರ್ನಾಟಕದಲ್ಲಿ ದೀಪಾವಳಿ ಆಚರಣೆಗೆ ಸರ್ಕಾರದ ಕೊವಿಡ್-19 ಮಾರ್ಗಸೂಚಿ ಕರ್ನಾಟಕದಲ್ಲಿ ದೀಪಾವಳಿ ಆಚರಣೆಗೆ ಸರ್ಕಾರದ ಕೊವಿಡ್-19 ಮಾರ್ಗಸೂಚಿ

ಮನಸ್ಸಿನ ಕತ್ತಲೆಯನ್ನು ಕಳೆದು ಅರಿವಿನ ಬೆಳಕನ್ನು ಹೊತ್ತಿಸುವ ವಿಶೇಷ ಹಬ್ಬವಾದ ದೀಪಾವಳಿ. ಪ್ರತಿ ಮನೆ-ಮನಗಳಲ್ಲಿ ಬೆಳಕು ಚೆಲ್ಲುವ ಸಾಂಪ್ರದಾಯಿಕ ಹಣತೆಗಳನ್ನು ತಲೆತಲಾಂತರದಿಂದ ತಯಾರಿಸುತ್ತಿದ್ದಾರೆ. ದೀಪಾವಳಿ ಹಬ್ಬಕ್ಕೆಂದೇ ಜಾನಪದ ಲೋಕದಲ್ಲಿ ಮಣ್ಣಿನ ಹಣತೆ ತಯಾರಾಗುತ್ತದೆ.

ದೀಪಾವಳಿ; ಕೆಎಸ್ಆರ್‌ಟಿಸಿಯಿಂದ 1000 ಹೆಚ್ಚುವರಿ ಬಸ್ ದೀಪಾವಳಿ; ಕೆಎಸ್ಆರ್‌ಟಿಸಿಯಿಂದ 1000 ಹೆಚ್ಚುವರಿ ಬಸ್

Deepavali Festival Demand For Janapada Loka Soil Lamps

ಜನಪದರ ಸಂಸ್ಕೃತಿಯನ್ನು ನಾಡಿಗೆ ಸಾರುತ್ತಿರುವ ಜಾನಪದ ಲೋಕದಲ್ಲಿ ಅನುಸೂಯಮ್ಮ ತಯಾರು ಮಾಡುವ ಮಣ್ಣಿನ ದೀಪಗಳಿಗೆ ದೀಪಾವಳಿ ಬಂದರೆ ಎಲ್ಲಿಲ್ಲದ ಬೇಡಿಕೆ ಶುರುವಾಗುತ್ತದೆ. ಇವರು ಬಗೆ ಬಗೆಯ ಮಣ್ಣಿನ ಹಣತೆಗಳನ್ನು ಸುಲಲಿತವಾಗಿ ತಯಾರು ಮಾಡುತ್ತಾರೆ.

ದೀಪಾವಳಿ; ದೀಪ ಸಂಜೀವಿನಿ ಮಾರಾಟ ಮೇಳ ಆರಂಭ ದೀಪಾವಳಿ; ದೀಪ ಸಂಜೀವಿನಿ ಮಾರಾಟ ಮೇಳ ಆರಂಭ

ಪೂರ್ವಿಕರ ಕಲಾದಿಂದಲೂ ಈ ಕಲೆ ಅವರಿಗೆ ಬಳುವಳಿವಾಗಿ ಬಂದಿದೆ. ಈ ಕುಂಬಾರಿಕೆ ಕಲೆಯನ್ನು ಅನುಸೂಯಮ್ಮ 42 ವರ್ಷಗಳಿಂದಲೂ‌ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಇಲ್ಲಿ ತಯಾರಾದ ನಯ ನಜೂಕಿನಿಂದ ಕೂಡಿದ ಮಣ್ಣಿನ ಹಣತೆಗಳು ಹಲವು ಮನೆಗಳನ್ನು ಬೆಳಗುತ್ತವೆ.

ಬೆಳಕಿನ ಹಬ್ಬ ದೀಪಾವಳಿ ಬಂದಾಗ ಇಲ್ಲಿನ ನೈಸರ್ಗಿಕ ಮಣ್ಣಿನ ಹಣತೆಗಳಿಗೆ ಭಾರಿ ಬೇಡಿಕೆ ಬರುತ್ತದೆ. ರಾಜ್ಯದ ವಿವಿಧ ಕಡೆಯಿಂದ ಜಾನಪದ ಲೋಕಕ್ಕೆ ಬರುವ ಪ್ರವಾಸಿಗರು ಅನುಸೂಯಮ್ಮ ತಯಾರು ಮಾಡುವ ಹಣತೆಗಳನ್ನು ಕೊಂಡುಕೊಳ್ಳುತ್ತಾರೆ.

ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರು ಕೊಂಡುಕೊಂಡ ಹಣತೆಗಳು ಮನೆಯಲ್ಲಿ ಇಂದಿಗೂ ಉರಿಯುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ.

ಅನುಸೂಯಮ್ಮ ಕೈಯಲ್ಲಿ ಅರಳುವ ಮ್ಯಾಜಿಕ್ ದೀಪಾ, ಅಂಬಾರಿ ದೀಪಾ, ನವಿಲು ದೀಪ, ಗಣೇಶ ದೀಪ, ಆನೆ ದೀಪ, ನವ ದೀಪ, ಮಡಿಲು ದೀಪ, ಲಕ್ಷ್ಮೀ ದೀಪ ಹೀಗೆ ಹಲವಾರು ಬಗೆ ಬಗೆಯ ಹಣತೆಗಳು ಪ್ರವಾಸಿಗರ ಮನಸೂರೆಗೊಳ್ಳುತ್ತವೆ, ಅಲ್ಲದೇ ಅವರ ಮನೆ ಬೆಳಗುತ್ತವೆ.

ಇತ್ತೀಚಿನ ದಿನಗಳಲ್ಲಿ ಜಾಗತಿಕರಣಕ್ಕೆ ಸಿಲುಕಿ ಮಣ್ಣಿನ ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಪಿಂಗಾಣಿ, ಸ್ಟೀಲ್, ಮೇಣದಬತ್ತಿ, ವಿವಿಧ ಮಾದರಿ ವಿದ್ಯುತ್ ದೀಪಗಳು, ಮಾರುಕಟ್ಟೆಗೆ ಪ್ರವೇಶ ಮಾಡಿವೆ.

ಮಣ್ಣಿನ‌ ಸಾಂಪ್ರದಾಯಿಕ ಹಣತೆಗಳಿಗೆ ಬೇಡಿಕೆ ಕಸಿದಿದೆ. ಕೋವಿಡ್ ಪರಿಸ್ಥಿತಿ ಬಳಿಕ ಹಣತೆಯನ್ನು ಕೇಳುವವರೆ ಇಲ್ಲದಾಗಿದೆ. ಈ ನಡುವೆ ಅನುಸೂಯಮ್ಮ ತಯಾರು ಮಾಡುವ ವಿವಿಧ ಮಣ್ಣಿನ ದೀಪಗಳು ಪ್ರವಾಸಿಗರನ್ನು ಕೈ ಬೀಸಿ‌ ಕರೆಯುತ್ತಿವೆ.

ಒಟ್ಟಾರೆ ನಾಡಿಗೆ ಜಾನಪದ ಸಂಸ್ಕೃತಿ ಸಾರುತ್ತಿರುವ ಜಾನಪದ ಲೋಕ ದೇಶೀ ವಸ್ತುಗಳ ಬಳಕೆಗೆ ಪ್ರೋತ್ಸಾಹಿಸುತ್ತಿದೆ. ಸ್ಥಳೀಯ ಕಲಾವಿದೆ ಅನುಸೂಯಮ್ಮ ಮಣ್ಣಿನಿಂದ ತಯಾರು ಮಾಡಿದ ದೇಶೀ ಹಣತೆಗಳನ್ನು ಕೊಂಡುಕೊಂಡು ಪ್ರತಿ ಮನೆಯಲ್ಲೂ ದೀಪಾವಳಿ ಹಬ್ಬವನ್ನು ಆಚರಿಸೋಣ ಎನ್ನುತ್ತಾರೆ ಹಣತೆ ಖರೀದಿಸಿದ ಪ್ರವಾಸಿಗರು.

ಮಾರ್ಗಸೂಚಿ ಪ್ರಕಟ; ಕರ್ನಾಟಕ ಸರ್ಕಾರ ದೀಪಾವಳಿ ಹಬ್ಬದ ಆಚರಣೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಅನುಮತಿ ನೀಡಿರುವ ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡತಕ್ಕದ್ದಲ್ಲ, ಹಚ್ಚಬಾರದು ಎಂದು ಮಾರ್ಗಸೂಚಿ ಪ್ರಕಟಿಸಲಾಗಿದೆ.

ಸಂಬಂಧಪಟ್ಟ ಇಲಾಖೆ/ ಪ್ರಾಧಿಕಾರದಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾಡತಕ್ಕದ್ದು. ಮಾರಾಟ ಮಳಿಗೆಗಳನ್ನು 1/11/2021 ರಿಂದ 10/11/2020ರ ತನಕ ಮಾತ್ರ ತೆರೆದಿರಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ.

English summary
Heavy demand for the soil lamps at Ramanagara Janapada Loka ahead of the Deepavali festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X