ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರಕ್ಕೆ ಬಿಗ್ ರಿಲೀಫ್: ಜೈಲು ಸಿಬ್ಬಂದಿ ಸೇಫ್

|
Google Oneindia Kannada News

ರಾಮನಗರ, ಮೇ 6: ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ, ಪಾದರಾಯನಪುರ ಗಲಭೆಯ ಆರೋಪಿಗಳ ಮೇಲೆ ನಿಗಾವಹಿಸಿದ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕೊರೊನಾ ತಪಾಸಣೆ ಫಲಿತಾಂಶ ಬಂದಿದ್ದು, ಎಲ್ಲರಿಗೂ ನೆಗಿಟಿವ್ ಆಗಿದೆ.

Recommended Video

ಕೊವಿಡ್ ಪರಿಹಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ | Siddaramaiah | Oneindia Kannada

ಈ ಮೂಲಕ ರಾಮನಗರ ಜಿಲ್ಲೆ ಪಾದರಾಯನಪುರ ಕಂಟಕದಿಂದ ತಪ್ಪಿಸಿಕೊಂಡಿದ್ದು, ಹಸಿರು ಜಿಲ್ಲೆಯಾಗಿ ಉಳಿದುಕೊಂಡಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.

ಆರೋಪಿಗಳನ್ನು ರಾಮನಗರಕ್ಕೆ ತಂದದ್ದು ಸರ್ಕಾರದ ಸಣ್ಣತನ: ಎಚ್ಡಿಕೆಆರೋಪಿಗಳನ್ನು ರಾಮನಗರಕ್ಕೆ ತಂದದ್ದು ಸರ್ಕಾರದ ಸಣ್ಣತನ: ಎಚ್ಡಿಕೆ

''ರಾಮನಗರದ ಜಿಲ್ಲಾ ಕಾರಾಗೃಹದಲ್ಲಿ, ಪಾದರಾಯನಪುರ ಗಲಭೆಯ ಆರೋಪಿಗಳ ನಿಗಾವಹಿಸಿದ ವಿವಿಧ ಇಲಾಖೆಗಳ ಸಿಬ್ಬಂದಿಗಳು ಸೇರಿ ಒಟ್ಟು 68 ಮಂದಿಯ ಎರಡನೇ ಬಾರಿಯ ಕೊರೊನಾ ತಪಾಸಣೆ ಫಲಿತಾಂಶಗಳು ಕೂಡಾ ನೆಗೆಟಿವ್ ಬಂದಿವೆ. ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುತ್ತಾ, ರಾಮನಗರ ಜಿಲ್ಲೆ ಗ್ರೀನ್ ಜೋನ್ ಅಲ್ಲೇ ಉಳಿದಿದೆ ಎಂದು ಹೇಳಬಯಸುತ್ತೇನೆ'' ಎಂದಿದ್ದಾರೆ.

ಬೆಂಗಳೂರಿನ 135ನೇ ವಾರ್ಡ್‌ ಪಾದರಾಯನಪುರ ಕೊರೊನಾ ಹಾಟ್‌ಸ್ಪಾಟ್‌ ಆಗಿತ್ತು. ಪೊಲೀಸರ ಮೇಲೆ, ವೈದ್ಯಕೀಯ ಸಿಬ್ಬಂದಿ ಮೇಲೆ ಇಲ್ಲಿನ ಜನರು ಹಲ್ಲೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ಅವರನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿತ್ತು.

Dcm Ashwath Narayana Declares Ramanagara Now Green Zone

ಬಂಧಿಸಿದ ಆರೋಪಿಗಳಲ್ಲಿ 5 ಜನರಿಗೆ ಕೊರೊನಾ ಸೋಂಕು ತಗುಲಿರುವುದು ಜೈಲಿನಲ್ಲಿ ಪರೀಕ್ಷೆ ಮಾಡುವ ವೇಳೆ ತಿಳಿದು ಬಂದಿತ್ತು. ಇದು ರಾಮನಗರ ಜನರ ಆತಂಕಕ್ಕೆ ಕಾರಣವಾಗಿತ್ತು.

ಕೊರೊನಾ ಸೋಂಕಿಲ್ಲದೆ ಹಸಿರು ಜಿಲ್ಲೆಯಾಗಿದ್ದ ರಾಮನಗರಕ್ಕೆ ಪಾದರಾಯನಪುರ ಕೈದಿಗಳನ್ನು ಕರೆತಂದು ಸೋಂಕು ಅಂಟಿಸಿದ್ದೀರಾ ಎಂದು ಸರ್ಕಾರ ವಿರುದ್ಧ ವಿರೋಧ ಪಕ್ಷಗಳು ಗುಡುಗಿದವು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಗೃಹ ಇಲಾಖೆಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಆರೋಪಿಗಳ ಸ್ಥಳಾಂತರ: ರಾಮನಗರ ಜೈಲು ಖಾಲಿ ಖಾಲಿಆರೋಪಿಗಳ ಸ್ಥಳಾಂತರ: ರಾಮನಗರ ಜೈಲು ಖಾಲಿ ಖಾಲಿ

ತೀವ್ರ ವಿರೋಧ ವ್ಯಕ್ತವಾದ ನಂತರ ರಾಮನಗರ ಜಿಲ್ಲಾ ಕಾರಾಗೃಹದಿಂದ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಸ್ಥಳಾಂತರಿಸಲಾಯಿತು. ತದನಂತರ ಮುನ್ನೆಚ್ಚರಿಕೆ ಕ್ರಮದಿಂದ ಕೈದಿಗಳ ಮೇಲೆ ನಿಗಾವಹಿಸಿದ್ದ ಅಧಿಕಾರಿಗಳನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಇದೀಗ, ಎಲ್ಲ ಸಿಬ್ಬಂದಿಗಳ ವರದಿ ನೆಗಿಟಿವ್ ಬಂದಿದ್ದು, ರಾಮನಗರಕ್ಕೆ ದೊಡ್ಡ ಅಪಾಯದಿಂದ ತಪ್ಪಿಸಿಕೊಂಡಿದೆ.

English summary
Dcm Ashwath Narayana Declares Ramanagara district as a green zone, after result of ramanagara jail staff come negative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X