ಪ್ರವಾಸಿಗರನ್ನು ಸೆಳೆಯುತ್ತಿರುವ ಜಾನಪದ ಲೋಕದ ದಸರಾ ಗೊಂಬೆಗಳು!
ರಾಮನಗರ, ಅ.04: ಗ್ರಾಮೀಣ ಪ್ರದೇಶದ ಜನರಲ್ಲಿ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾನಪದ ಸಂಸ್ಕೃತಿ ಮತ್ತು ಸೊಗಡನ್ನು ವಿಶ್ವಕ್ಕೆ ಸಾರುವ ಮೂಲಕ ಜನಪದರ ಕಾಶಿ ಎಂದೇ ಪ್ರಖ್ಯಾತವಾಗಿರುವ ರಾಮನಗರದ ಜಾನಪದ ಲೋಕದಲ್ಲಿ ದಸರಾ ಗೊಂಬೆಗಳ ವಿಶೇಷ ಪ್ರದರ್ಶನ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ನಾಡ ಹಬ್ಬ ದಸರಾಗೆ ರೇಷ್ಮೆನಗರಿಯ ಜಾನಪದಲೋಕದಲ್ಲಿ ಜನಪದ ಸೊಗಡಿನ ಸಾಂಪ್ರದಾಯಿಕ ಬೊಂಬೆ ಪ್ರದರ್ಶನ ಕಳೆಕಟ್ಟಿದೆ. ಬೊಂಬೆ ಪ್ರದರ್ಶನದಲ್ಲಿ ಪಟ್ಟದ ಗೊಂಬೆಗಳಿಗೆ ಅಗ್ರಸ್ಥಾನವಿದ್ದು, ಸೆರಾಮಿಕ್, ಮಣ್ಣು, ಪಿಂಗಾಣಿ ಮತ್ತು ಮರದ ಬೊಂಬೆಗಳಿಗೆ ಪ್ರದರ್ಶನದಲ್ಲಿ ಆದ್ಯತೆ ನೀಡಲಾಗಿದೆ. ಪ್ಲಾಸ್ಟಿಕ್ ಆಟಿಕೆಗಳಿಗೆ ನಿಷೇಧ ಹೇರುವ ಮೂಲಕ ಜಾನಪದ ಲೋಕ ದೇಶಿಕಲಾ ಸಾಂಸ್ಕೃತಿಕ ಕೇಂದ್ರವೆಂಬುದನ್ನು ಸಾಕ್ಷೀಕರಿಸಿದೆ.
ಧಾರ್ಮಿಕ, ಸಾಮಾಜಿಕ, ಐತಿಹಾಸಿಕ ಜತೆಗೆ ಸಾಂದರ್ಭಿಕ ಅಂಶಗಳನ್ನು ಬೊಂಬೆಗಳಲ್ಲಿ ವ್ಯಕ್ತಪಡಿಸಲಾಗಿದ್ದು, ಇಡೀ ಕುಟುಂಬವನ್ನು ಮನರಂಜಿಸುವುದರೊಂದಿಗೆ ಮರೆಯಾಗುತ್ತಿರುವ ನೈತಿಕ ಮೌಲ್ಯ ಮತ್ತು ದೇಶ ಪ್ರೇಮವನ್ನು ಪುನಶ್ಚೇತನಗೊಳಿಸುವ ನಿಟ್ಟಿಲ್ಲಿ ದಸರಾ ಗೊಂಬೆ ಹಬ್ಬವನ್ನು ಜಾನಪದ ಲೋಕದಲ್ಲಿ ಏರ್ಪಡಿಸಲಾಗಿದೆ.

ದೇಶದ ವಿವಿಧ ಬುಡಕಟ್ಟುಗಳ ಮಾದರಿಗಳನ್ನು ಕಣ್ಣು ತುಂಬಿಕೊಳ್ಳಿ!
ಗೊಂಬೆ ಪ್ರದರ್ಶನದಲ್ಲಿ ಮೈಸೂರು ಅರಮನೆ, ಕೀಲುಕುದುರೆ, ಹಾವಾಡಿಗ, ದಸರಾ ಗೊಂಬೆಗಳು, ಮದುವೆ, ವಧುವರ, ದಶಾವತಾರ, ರಾಮಾಯಣದ ವಿವಿಧ ದೃಶ್ಯಾವಳಿ, ಸಂಗೀತ ಕಛೇರಿ, ಮಧುಮಕ್ಕಳ ಮೆರವಣಿಗೆ, ಬ್ಯಾಂಡ್ಸೆಟ್, ದೇಶದ ವಿವಿಧ ಬುಡಕಟ್ಟುಗಳ ಮಾದರಿ, ದೇವಾಲಯ, ಲವಕುಶ, ರಾಮಲಕ್ಷ್ಮಣ, ವಿಶ್ವಾಮಿತ್ರ, ಅಹಲ್ಯಾ ಶಾಪ ವಿಮೋಚನೆ, ಆಶ್ರಮದಲ್ಲಿ ಸೀತಾದೇವಿ, ಗೋವರ್ಧನಗಿರಿ ಎತ್ತಿದ ಕೃಷ್ಣ ಮತ್ತು ಪರಿವಾರ, ರಾಮನ ಪಟ್ಟಾಭಿಷೇಕ, ಕರಗ, ನವಿಲಿನ ಮೇಲೆ ಸವಾರಿ ಮಾಡುತ್ತಿರುವ ಷಣ್ಮುಗ, ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳು, ಹಣ್ಣು ತರಕಾರಿ, ಮಂತ್ರಾಲಯದ ಗುರುಗಳು ಹೀಗೆ ನಾನಾ ಬಗೆಯ ಗೊಂಬೆಗಳು ಪ್ರವಾಸಿಗರನ್ನು ವಿಶ್ವ ಪ್ರಸಿದ್ಧ ಜಾನಪದ ಲೋಕದತ್ತ ಸೆಳೆಯುತ್ತಿವೆ.

ಒಂದು ತಿಂಗಳ ಕಾಲ ಜಾನಪದ ಲೋಕದಲ್ಲಿ ಗೊಂಬೆಗಳ ಪ್ರದರ್ಶನ
ವಿಶೇಷವಾಗಿ ಬೊಂಬೆ ಪ್ರದರ್ಶನದಲ್ಲಿ ಪ್ರಸ್ತುತ ಪಡಿಸಿರುವ ಬೊಂಬೆಗಳೆಲ್ಲವೂ ನಮ್ಮ ಪೂರ್ವಿಕರು ಬಳಸಿದ್ದ ಬೊಂಬೆಗಳು. ಸಾರ್ವಜನಿಕರ ದೇಣಿಗೆ ರೂಪದಲ್ಲಿ ಬಂದಿರುವ ಅಪರೂಪದ ಕೊಡುಗೆಗಳಾಗಿವೆ. ನಮ್ಮ ಪೂರ್ವಿಕರ ಬದುಕಿನ ಜಾನಪದ ಸಂಸ್ಕ್ರತಿ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಗೊಂಬೆಗಳ ಪ್ರದರ್ಶನ ಯಶಸ್ವಿಯಾಗಿ ನಡೆಯುತ್ತಿದೆ.
ಪ್ರವಾಸಿಗರು ಜಾನಪದ ಲೋಕಕ್ಕೆ ಭೇಟಿ ನೀಡಿ, ಬೊಂಬೆ ಪ್ರದರ್ಶನ ವೈಭವವನ್ನು ಇನ್ನೂ ಒಂದು ತಿಂಗಳ ಕಾಲ ಕಣ್ಣತುಂಬಿಕೊಳ್ಳಬಹುದು.

ಮಕ್ಕಳಿಗೆ ಜನಪದ ಸಂಸ್ಕ್ರತಿಯ ಪರಿಚಯ ಇಲ್ಲಿ ಸಿಗಲಿದೆ
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ 56 ಕಿಮಿ. ರಾಮನಗರದಿಂದ ಕೇವಲ 6 ಕಿಮೀ ಹಾಗೆಯೆ ಬೊಂಬೆನಾಡು ಚನ್ನಪಟ್ಟಣದಿಂದ 6 ಕಿಮೀ ಸನಿಹದಲ್ಲಿದೆ ಜಾನಪದ ಲೋಕ. 1996 ರಲ್ಲಿ ಪ್ರಾರಂಭವಾದ ಗೊಂಬೆ ಪ್ರದರ್ಶನ ನವರಾತ್ರಿಯ ಮೊದಲ ದಿನ ಪ್ರಾರಂಭವಾಗಿ ಒಂದು ತಿಂಗಳು ಇರುತ್ತದೆ. ಮೈಸೂರು ದಸರಾಗೆ ತೆರಳುವ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಜಾನಪದ ಲೋಕಕ್ಕೆ ಭೇಟಿ ನೀಡಿದರೆ ತಮ್ಮ ಪ್ರವಾಸ ಅವಿಸ್ಮರಣೀಯ ವಾಗುತ್ತದೆ.
ಜಾನಪದ ಲೋಕಕ್ಕೆ ಕಾಲಿಟ್ಟರೆ ಲೋಕ ಪರಿಸರ ಪ್ರವಾಸಿಗರ ಮನಸ್ಸು ಶಾಂತಗೊಳಿಸಿ ಎಲ್ಲಾ ಒತ್ತಡಗಳನ್ನು ದೂರ ಮಾಡುತ್ತದೆ . ಇನ್ನೂ ತಮ್ಮ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಕೂಡ ಆಗುತ್ತದೆ. ಗ್ರಾಮೀಣ ಬದುಕಿನ ಸೂಗಡು, ಆಚಾರ, ವಿಚಾರ, ಜನಪದ ಸಂಸ್ಕ್ರತಿಯ ಪರಿಚಯವನ್ನು ಮಕ್ಕಳಿಗೆ ತಿಳಿಸುವ ಜಾನಪದ ಲೋಕದ ಪ್ರವಾಸ ವ್ಯರ್ಥವಾಗುವುದಿಲ್ಲ.

ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದೆ ಈ ಜಾನಪದ ಲೋಕ
'ಜಾನಪದ ಲೋಕವು ದಿನೇ ದಿನೇ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಂಡು, ಜಾನಪದ ಕ್ಷೇತ್ರಕ್ಕೆ ಗಣನೀಯ ಕೊಡುಗೆಗಳನ್ನು ನೀಡುತ್ತಾ ಸಾಗುತ್ತಿದೆ. ಜಾಗತಿಕ ಪ್ರಪಂಚದಲ್ಲಿ ಮರೆಯಾಗುತ್ತಿರುವ ದೇಶಿಕಲೆ ಮತ್ತು ಸಂಸ್ಕೃತಿಯನ್ನು ದಸರಾ ಹಬ್ಬದ ಅಂಗವಾಗಿ ಪುನಶ್ಚೇತನಗೊಳಿಸಲು ಗೊಂಬೆ ಹಬ್ಬ ಪೂರಕವಾಗಿದೆ. ಅಲ್ಲದೇ ಹೊಸ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಗೊಂಬೆ ಪ್ರದರ್ಶನ ಸಹಕಾರಿಯಾಗಲಿದೆ' ಎಂದು ಜಾನಪದ ಲೋಕದ ಅಧ್ಯಕ್ಷರಾದ ಹಿ.ಸಿ.ರಾಮಚಂದ್ರ ಅಭಿಪ್ರಾಯಪಟ್ಟಿದ್ದಾರೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ












Click it and Unblock the Notifications