ರಾಮನಗರದಲ್ಲಿ ದರ್ಶನ್ ನೋಡಲು ಜನವೋ ಜನ, ಲಾಠಿ ರುಚಿ ಕಂಡ ಅಭಿಮಾನಿಗಳು
ರಾಮನಗರ, ಆಗಸ್ಟ್.15: ರೇಷ್ಮೆನಗರಿ ರಾಮನಗರದಲ್ಲಿ ಇಂದು ಬುಧವಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಎಂಎಸ್ ಗೋಲ್ಡ್ ಅಂಡ್ ಡೈಮಂಡ್ಸ್ ನೂತನ ಆಭರಣ ಮಳಿಗೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನೆಚ್ಚಿನ ನಟನನ್ನು ನೋಡಲು ಜಿಲ್ಲೆಯ ಹಲವೆಡೆಗಳಿಂದ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಇದೇ ವೇಳೆ ಹೆದ್ದಾರಿಗೆ ನುಗ್ಗಿದ ಅಭಿಮಾನಿಗಳನ್ನು ತಡೆಯಲು ಹರಸಾಹಸ ಪಟ್ಟ ಪೊಲೀಸರು ಕಡೆಗೆ ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ಆಭರಣ ಮಳಿಗೆ ಉದ್ಘಾಟನೆ ಕೆಲವೇ ಕ್ಷಣಗಳಲ್ಲಿ ಮಗಿಸಿದ ದರ್ಶನ್ ಅಲ್ಲಿಂದ ತೆರಳಿದ ಬಳಿಕ ಕೂಪನ್ ಹಾಕಿದ್ದ ಸಾರ್ವಜನಿಕರಿಗೆ ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಯಿತು.

ವಿಜೇತರಾದ ಮೂರು ಜನರಿಗೆ ಡೈಮಂಡ್ ನೆಕ್ಲೇಸ್, ಐಫೋನ್ ಹಾಗೂ ಚಿನ್ನದ ನಾಣ್ಯವನ್ನು ನೀಡಲಾಯಿತು. ಇದೇ ವೇಳೆ ಮಾತನಾಡಿದ ಆಭರಣ ಮಳಿಗೆಯ ವ್ಯವಸ್ಥಾಪಕ ನಿರ್ದೇಶಕ ಮುನೀರ್, ರಾಮನಗರದಲ್ಲಿ ದರ್ಶನ್ ಅಭಿಮಾನಿಗಳು ಹೆಚ್ಚಿರುವ ಕಾರಣ ಅವರನ್ನು ಆಹ್ವಾನ ಮಾಡಿದೆವು.

ಇನ್ನೂ ಒಂದು ತಿಂಗಳ ಕಾಲ ಹಲವು ವಿಶೇಷ ಆಫರ್ ಗಳನ್ನು ಗ್ರಾಹಕರಿಗೆ ನೀಡಲಾಗುವುದು ಎಂದು ತಿಳಿಸಿದರು.












Click it and Unblock the Notifications