Chennapatna By Election: ಚನ್ನಪಟ್ಟಣ ಅಖಾಡದಲ್ಲಿ ಸರ್ಕಾರಕ್ಕೇ ದೊಡ್ಡಗೌಡ್ರು ಸವಾಲ್!
ರಾಮನಗರ ನವೆಂಬರ್ 10: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಈ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಆಂತರಿಕ ಸಮೀಕ್ಷೆಯನ್ನು ನಡೆಸಿದೆ. ಸದ್ಯ ಅದರ ವರದಿ ಕಾಂಗ್ರೆಸ್ ಪಕ್ಷದ ಕೈ ಸೇರಿದೆ. ಈ ವರದಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಲ ಬೆಚ್ಚಿಬೀಳಿಸುವಂತಹ ವಿಚಾರಗಳು ಗೊತ್ತಾಗಿದೆ. ವರದಿ ಪ್ರಕಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವು ಸುಲಭವಿಲ್ಲ. ಹಾಗಾದರೆ ವರದಿಯಲ್ಲಿ ಏನಿದೆ?
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರದಲ್ಲಿ ಪ್ರಬಲ ಪಕ್ಷಗಳು ಮತಬೇಟೆ ಆರಂಭಿಸಿವೆ. ಉನ್ನತ ನಾಯಕರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಪರಸ್ಪರ ವಾಗ್ದಾಳಿ, ಆರೋಪ ಪ್ರತ್ಯಾರೋಪಗಳು ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ನಡೆಸಿದ ಸಮೀಕ್ಷೆ ವರದಿಯಲ್ಲಿ ಕೆಲ ಆಂತರಿಕ ವಿಚಾರಗಳು ಗೊತ್ತಾಗಿದೆ.

ಚನ್ನಪಟ್ಟಣದಲ್ಲಿ ನೆಕ್ ಟು ನೆಕ್ ಫೈಟ್
ಹೌದು.. ಕಾಂಗ್ರೆಸ್ ಮಾಡಿದ ಎರಡು ಆಂತರಿಕ ಸಮೀಕ್ಷೆಗಳು ನಾಯಕರನ್ನು ಅಲರ್ಟ್ ಮಾಡಿವೆ. ಚನ್ನಪಟ್ಟಣದಲ್ಲಿ ನೆಕ್ ಟು ನೆಕ್ ಫೈಟ್ ನಡೆಯುತ್ತಿದೆ. ವರದಿ ಪ್ರಕಾರ ಕಾಂಗ್ರೆಸ್ ಚನ್ನಪಟ್ಟಣ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದು ಸುಲಭವೆಂಬಂತೆ ಕಾಣಿಸುತ್ತಿಲ್ಲ. ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಎಂಟ್ರಿಯಿಂದಾಗಿ ಚನ್ನಪಟ್ಟಣ ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ.
ದೇವೇಗೌಡರ ಭರ್ಜರಿ ಪ್ರಚಾರ.. ಕೈಗೆ ಆತಂಕ
ದೇವೇಗೌಡರು ಇಳಿವಯಸ್ಸಿನಲ್ಲಿ ಚನ್ನಪಟ್ಟಣ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು ಕಾಂಗ್ರೆಸ್‌ಗೆ ಆತಂಕ ಹೆಚ್ಚಾಗಿದೆ. ಕಳೆದೆರೆಡು ದಿನಗಳಿಂದ ದೇವೇಗೌಡರು ಪ್ರಚಾರದಲ್ಲಿ ತೊಡಗಿದ್ದು, ಹಿಂದುಳಿದ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ. ದೇವೇಗೌಡರ ಪ್ರಚಾರದಿಂದ ಕಾಂಗ್ರೆಸ್‌ಗೆ ಮತಗಳು ಕೈತಪ್ಪುವ ಆತಂಕ ಎದುರಾಗಿದೆ. ಅಲ್ಲದೆ ದೇವೇಗೌಡರ ಎಂಟ್ರಿಯಿಂದಾಗಿ ಒಕ್ಕಲಿಗ ಮತಗಳು ಹರಿದು ಹಂಚಿಹೋಗುವ ಭೀತಿ ಇದೆ. ಇದಲ್ಲದೆ ದೇವೇಗೌಡರು ಮುಸ್ಲಿಂ ಮತಗಳನ್ನು ಸೆಳೆಯುವ ತಂತ್ರದಲ್ಲಿ ಕೈ ಹಾಕಿದ್ದಾರೆ.
ಸರ್ಕಾರಕ್ಕೇ ದೊಡ್ಡಗೌಡ್ರು ಸವಾಲ್
ಹೌದು.. ಚನ್ನಪಟ್ಟಣ ಅಖಾಡಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಎಂಟ್ರಿಯಿಂದಾಗಿ ಕಾಂಗ್ರೆಸ್ ಗೆಲುವು ಕೊಂಚ ಅನುಮಾನ ಸೃಷ್ಟಿಸಿದೆ. ದಳಪತಿಗಳ ಭದ್ರಕೋಟೆಯಾದ ಚನ್ನಪಟ್ಟಣದಲ್ಲಿ ಕೈ ಆಟ ನಡೆಯುವುದು ಸುಲಭವಿಲ್ಲ. ಹೀಗಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಅಲರ್ಟ್ ಆಗಿದೆ. ಕೊನೆ ದಿನಗಳಲ್ಲಿ ತನ್ನ ಗೇಮ್ ಪ್ಲ್ಯಾನ್ ಚೇಂಜ್ ಮಾಡುವ ಕಸರತ್ತಿಗೆ ಕಾಂಗ್ರೆಸ್ ಇಳಿಯಲಿದೆ.

ಪ್ರಚಾರದಲ್ಲಿ ಡಿಕೆ ಬ್ರದರ್ಸ್ ವೇಗಕೊಟ್ಟರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆದ್ದೇ ಗೆಲ್ತಾರೆ ಅಂತ ಆಂತರಿಗೆ ಸಮೀಕ್ಷೆಗಳು ಹೇಳಿವೆ. ಹೀಗಾಗಿ ಡಿಕೆ ಬ್ರದರ್ಸ್ ಚನ್ನಪಟ್ಟಣದ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ. ಜೊತೆಗೆ ಚನ್ನಪಟ್ಟಣ ಪ್ರಚಾರ ಬಿರುಸು ಪಡೆದುಕೊಳ್ಳುವ ಲಕ್ಷಣಗಳು ಇವೆ.
ಸಮೀಕ್ಷಾ ವರದಿಗಳಿಂದ ಅಲರ್ಟ್ ಆಗಿರುವ ಕೈ ನಾಯಕರು ಕೊನೆ ಗಳಿಗೆಯಲ್ಲಿ ತಮ್ಮದೇ ಸ್ಟ್ಯಾಟರ್ಜಿ ಯ್ಯೂಸ್ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳನ್ನು ಆಯಾ ಪಕ್ಷಗಳೇ ಉಳಿಸಿಕೊಳ್ತಾವಾ? ಯಾರಿಗೆ ಪ್ಲಸ್ ಯಾರಿಗೆ ಮೈನಸ್ ಅನ್ನೋ ಸಸ್ಪೆನ್ಸ್ ಇನ್ನಷ್ಟು ಕೆರಳಿಸಿದೆ.












Click it and Unblock the Notifications