ಕಾಮುಕ, ಸೈಕೋ ಕಿಲ್ಲರ್ ಕಪ್ಪಲ್ ದೊರೆ ಬಂಧನ

ರಾಮನಗರ, ಮೇ 30 : ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕಾಮುಕ ಸೈಕೋ ಕಿಲ್ಲರ್ ರಾಮನಗರದಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ, ಮಾಡಿ ಈತ ಪರಾರಿಯಾಗುತ್ತಿದ್ದ.

ತಮಿಳುನಾಡು ಮೂಲದ ದೊರೆ ಅಲಿಯಾಸ್ ಕಪ್ಪಲ್ ದೊರೆ ಬಂಧಿತ ಸೈಕೋ ಕಿಲ್ಲರ್. ಕಾಮತೃಷೆ ತೀರಿಸಿಕೊಳ್ಳಲು ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಕರೆತರುತ್ತಿದ್ದ ಈಗ, ಬಳಿಕ ಅತ್ಯಾಚಾರ ನಡೆಸಿ, ಕೊಲೆ ಮಾಡುತ್ತಿದ್ದ.

ಮೇ 21ರಂದು ಬೆಂಗಳೂರು ದಕ್ಷಿಣ ತಾಲೂಕಿನ ರಾಘವೇಂದ್ರನಗರದಲ್ಲಿ ಮಹಿಳೆ ಕೊಲೆ ನಡೆದಿತ್ತು. ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದ ಮಹಿಳೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೊಲೆ ಮಾಡಲಾಗಿತ್ತು. ತನಿಖೆ ಆರಂಭಿಸಿದ್ದ ಬ್ಯಾಡರಹಳ್ಳಿ ಪೊಲೀಸರು ಅತ್ತಿಬೆಲೆ ಚೆಕ್‌ಪೋಸ್ಟ್ ಬಳಿ ಕಪ್ಪಲ್ ದೊರೆಯನ್ನು ಬಂಧಿಸಿದ್ದಾರೆ.

dore

ತಮಿಳುನಾಡಿನ ಕಪ್ಪಲ್ 20 ವರ್ಷಗಳ ಹಿಂದೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿನ ಆಂಧ್ರಹಳ್ಳಿಗೆ ಬಂದು ನೆಲೆಸಿದ್ದ. ಗಾರೆ ಕೆಲಸ ಮಾಡುತ್ತಿದ್ದ ಈತ, ತಮಿಳುನಾಡಿನ ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ಸುಶೀಲಾಳನ್ನು ಕಾಡಿನೊಳಗೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

2002 ರಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ಮಹಿಳೆ ಕೊಲೆ ಯತ್ನಕ್ಕೆ ಯತ್ನಿಸಿ 3 ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ್ದ. 2010 ರಿಂದ 2018 ರ ಅವಧಿಯಲ್ಲಿಯೇ 8 ಮಹಿಳೆಯರನ್ನು ಕೊಲೆ ಮಾಡಿದ ಆರೋಪ ಈತನ ಮೇಲಿದೆ.

ದಿನವೊಂದಕ್ಕೆ 3 ರಿಂದ 4 ಬಾರಿಗಿಂತಲೂ ಹೆಚ್ಚು ವೇಶ್ಯಾವಾಟಿಕೆ ಅಡ್ಡೆಗೆ ಹೋಗಿ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ವೇಶ್ಯಾವಾಟಿಕೆಯಲ್ಲಿ ತೊಡಗಿದ ಮಹಿಳೆಯರನ್ನು ಹಣದ ಆಮಿಷವೊಡ್ಡಿ ಕರೆತರುತ್ತಿದ್ದ ಈಗ ಅತ್ಯಾಚಾರ ನಡೆಸಿ, ಕೊಲೆ ಮಾಡುತ್ತಿದ್ದ.

ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ವಿ.ವಿ.ಪುರಂ ಅಲ್ಲದೇ ಬೇರೆ ಕಡೆಯಿಂದ ಮಹಿಳೆಯರನ್ನು ಮಾಗಡಿ ರಸ್ತೆಗೆ ಕರೆತಂದು ಅತ್ಯಾಚಾರ ನಡೆಸಿ, ದೈಹಿಕ ಹಿಂಸೆ ನೀಡಿ ನಂತರ ಕೊಲೆ ಮಾಡುತ್ತಿದ್ದ. ಬ್ಯಾಡರಹಳ್ಳಿಯಲ್ಲಿ 3, ಪೀಣ್ಯ, ಯಶವಂತಪುರ ಪೊಲೀಸ್ ಠಾಣೆಯಲ್ಲಿ 3 ಅತ್ಯಾಚಾರ, ಕೊಲೆ ಪ್ರಕರಣ ಈತನ ವಿರುದ್ಧ ದಾಖಲಾಗಿದೆ.

ಪ್ರಾಥಾಮಿಕ ವಿಚಾರಣೆಯಲ್ಲಿ 8 ಅತ್ಯಾಚಾರ, ಕೊಲೆ ಮಾಡಿರುವುದಾಗಿ ಕಪ್ಪಲ್ ದೊರೆ ತಪ್ಪೊಪ್ಪಿಕೊಂಡಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+