ಬಿಎಸ್‌ವೈ ಕ್ಷೇತ್ರ ತ್ಯಾಗ ಕೇವಲ ಪ್ರಚಾರ ಎಂದ ಎಚ್‌ಡಿಕೆ

ರಾಮನಗರ ಜುಲೈ 24: ಬಿಜೆಪಿಯಲ್ಲಿ 75ವರ್ಷವಾದವರು ನಿರ್ಗಮಿಸಬೇಕು ಎಂಬ ನಿಯಮವಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರಗೆ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಟ್ಟಿರುವುದು ಕೇವಲ ಪ್ರಚಾರದ ಭಾಗವೇ ಆಗಿದೆ ಹೊರತು ಅದೊಂದು ರಾಜಕೀಯ ಬೆಳವಣಿಗೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಮನಗರದಲ್ಲಿ ಭಾನುವಾರ ವಿವಿಧ ವಿಚಾರಗಳ ಕುರಿತು ಸುದ್ದಿಗಾರರಿಗೆ ಉತ್ತರಿಸಿದ ಎಚ್‌.ಡಿ.ಕುಮಾರಸ್ವಾಮಿ, ವಿಜಯೇಂದ್ರನಿಗಾಗಿ ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟರು ಎಂಬ ವಿಚಾರಕ್ಕೆ ಅಷ್ಟೇನು ಮಹತ್ವ ಕೊಡುವ ಅಗತ್ಯವಿಲ್ಲ. ಅದು ರಾಜಕೀಯ ಹೊಸ ಬೆಳವಣಿಗೆಯೂ ಅಲ್ಲ. ವಿಜಯೇಂದ್ರ ಅಭ್ಯರ್ಥಿ ಆಗುತ್ತಿದ್ದಾರೆ ಎಂದು ಪ್ರಚಾರ ಕೊಡುತ್ತಿದ್ದಾರೆ ಅಷ್ಟೇ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿ ಪಕ್ಷ ಯಾವತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಅಧಿಕಾರ ಹಿಡಿದಿದೇ?. ಪ್ರಚಾರ ಪಡೆದು ಅಧಿಕಾರಕ್ಕೆ ಬರುವುದೇ ಬಿಜೆಪಿ ನಾಯಕರ ಹವ್ಯಾಸ ಆಗಿದೆ. ಕ್ಷೇತ್ರ ತ್ಯಾಗ ಸಹ ಇದು ಒಂದು ರೀತಿಯ ಪ್ರಚಾರವೇ ಆಗಿದೆ. ಅಲ್ಲದೇ ಬಿಜೆಪಿ ಪಕ್ಷದಲ್ಲಿ 75 ವರ್ಷ ಆಗಿರುವವರು ನಿರ್ಗಮಿಸಬೇಕು ಎಂಬ ನಿಯಮ ಇದೆ. ಹೀಗಾಗಿ ಯಡಿಯೂರಪ್ಪ ನಿರ್ಗಮಿಸಿದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಮಗೆ ಜೆಡಿಎಸ್ ಗೆಲುವು ಮುಖ್ಯ

ನಮಗೆ ಜೆಡಿಎಸ್ ಗೆಲುವು ಮುಖ್ಯ

ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನಗರದಲ್ಲಿ ಅನಿತಾ ನಿಖಿಲ್ ನಿಲ್ಲಬೇಕು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ನಾನಾಗಲಿ, ನಿಖಿಲ್ ಆಗಲಿ ಶಾಸಕನಾಗುವುದು ಮುಖ್ಯವಲ್ಲ. ಬದಲಾಗಿ ನಿಖಿಲ್ ಅವರೇ ತಾವು ಅಭ್ಯರ್ಥಿಗಳನ್ನು ಗೆಲ್ಲಿಸಿ ಬರುತ್ತೇನೆ ಎನ್ನುತ್ತಿದ್ದಾರೆ. ಜೆಡಿಎಸ್‌ನಲ್ಲಿ ಕನಿಷ್ಠ 30ರಿಂದ 40 ಸ್ಥಾನ ಗೆಲ್ಲಿಸಿಕೊಂಡು ಬರುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಿಖಿಲ್‌ ಗೆ ಗೊತ್ತಾಗಿದೆ. ಪಕ್ಷ ಇದ್ದರೆ ನಾವು ಎಂದು ಹೀಗಾಗಿ ಅವರು ಪಕ್ಷ ಸಂಘಟನೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಿದರು.

ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ನನ್ನನ್ನು ಸೋಲಿಸುತ್ತೇನೆ ಎಂದು ಹೇಳುವ ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ವಿರುದ್ಧ ಎರಡು ಭಾರಿ ಸೋತಿದ್ದರು ಎಂದು ತಿರುಗೇಟು ನೀಡಿದರು. ಆಗ ಡಿ.ಕೆ. ಶಿವಕುಮಾರ್ ಸೋತಾಗ ರಾಜಕೀಯ ಅಂಬೆಗಾಲು ಇಡುತ್ತಿದ್ದೆ. ಅವರು ಚುನಾವಣೆಯಲ್ಲೂ ಗೆದ್ದ ಇತಿಹಾಸದ ಬಗ್ಗೆ ನಮಗೂ ಗೊತ್ತಿದೆ ಎಂದು ಡಿಕೆಶಿ ಅವರ ಚುನಾವಣೆ ಗೆಲುವಿನ ಹಿಂದಿನ ಮರ್ಮ ಬಗ್ಗೆ ಪುಸ್ತಕ ಬರೆಯಬಹುದು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಸಹ ಅಕ್ರಮ ನಡೆದಿವೆ.

ಸಿದ್ದರಾಮಯ್ಯ ಅವಧಿಯಲ್ಲಿ ಸಹ ಅಕ್ರಮ ನಡೆದಿವೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸಿದ್ದರಾಮ್ಯಯ ಮುಖ್ಯಮಂತ್ರಿ ಆಗಿದ್ದಾಗ ಮರಳು ದಂಧೆಗಳು ಅವ್ಯಾಹತವಾಗಿ ನಡೆದಿವೆ. ಸಬ್ಇನ್ಸ್ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮಗಳಾಗಿವೆ. ಆಗ ಕಾಂಗ್ರೆಸ್‌ ಯಾರ ಮೇಲೆ ಕ್ರಮ ಕೈಗೊಂಡಿದೆ. ಇನ್ನು ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಯಿತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ ವಿತರಣೆಯಲ್ಲು ಭ್ರಷ್ಟಾಚಾರ ನಡೆಯಿತು ಎಂದರು. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ನಡೆದರೂ ಸಹ ಜೆಡಿಎಸ್‌ ಗೆ 20ಕ್ಕೂ ಅಧಿಕ ಸ್ಥಾನ ಧಕ್ಕಲಿವೆ. ಯಾರೇ ಸ್ಪರ್ಧೆಗಿಳಿದರು ರಾಮನಗರದ್ಲಲೇ ಚುನಾವಣೆ ಎದುರಿಸುತ್ತೇವೆ ಎಂದು ರಾಮನಗರದಲ್ಲಿ ಡಿಕೆ ಸುರೇಶ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಉತ್ತರಿಸಿದರು.

ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಲಿ ಬಿಡಿ

ಒಕ್ಕಲಿಗ ಟ್ರಂಪ್ ಕಾರ್ಡ್ ಬಳಸಲಿ ಬಿಡಿ

ಡಿ.ಕೆ. ಶಿವಕುಮಾರ್ ಒಕ್ಳಲಿಗ ಅಥವಾ ಇನ್ನಯಾವುದೇ ಟ್ರಂಪ್‌ಕಾರ್ಡ್ ಬೇಕಾದರೂ ಬಳಸಲಿ. ಜನರದ್ದೇ ಅಂತಿಮ ತೀರ್ಮಾನ ಎಂಬುದನ್ನು ನೆನಪಿನಲ್ಲಿಡಬೇಕು. ಸುಮ್ಮನೆ ನಾನು ಸಿಎಂ, ತಾನು ಸಿಎಂ ಎಂದರೆ ಸಾಲದು ಎಂದು ಕಾಂಗ್ರೆಸ್‌ನಲ್ಲಿನ ಸಿಎಂ ಸ್ಥಾನ ಕುರಿತು ಪರೋಕ್ಷವಾಗಿ ಕುಟುಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+