ವೇದಿಕೆಯಲ್ಲೇ ಹೃದಯಾಘಾತ: ಮೃತಪಟ್ಟ ಬಿಜೆಪಿ ಕಾರ್ಯಕರ್ತ

ರಾಮನಗರ, ಡಿಸೆಂಬರ್ 10: ವೇದಿಕೆಯ ಮೇಲಿದ್ದ ಬಿಜೆಪಿ ಕಾರ್ಯಕರ್ತ ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ರಾಮನಗರದ ಮಾಗಡಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಡೆದಿದೆ.

ಗುರುವಾರ ಮಾಗಡಿಯಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಸಚಿವ ಡಾ.ಅಶ್ವಥ್ ನಾರಾಯಣ ನೇತೃತ್ವದಲ್ಲಿ, ಜೆಡಿಎಸ್ ಮುಖಂಡ ಎಚ್.ಎಂ.ಕೃಷ್ಣಮೂರ್ತಿ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ವೇದಿಕೆಯ ಮೇಲೆ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದಾನೆ.

ಬಿಜೆಪಿಯ ಸಕ್ರಿಯ‌ ಸದಸ್ಯ ಹೆಬ್ಬೆಳಲು ಗ್ರಾಮದ ಶಿವರಾಜು (50) ಮೃತ ವ್ಯಕ್ತಿಯಾಗಿದ್ದು, ಇವರು ಬಿಜೆಪಿಯ ತಿಪ್ಪಸಂದ್ರ ಹೋಬಳಿಯ ಘಟಕದ ಕಾರ್ಯದರ್ಶಿಯಾಗಿದ್ದರು ಎನ್ನಲಾಗಿದೆ. ಈ ಹಿಂದೆ ಮೃತ ಶಿವರಾಜು ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಯಾಗಿತ್ತು ಎನ್ನಲಾಗಿದೆ.

Ramanagara: BJP Activist Who Died Of A Heart Attack On Stage

ಡಿಸಿಎಂ ಡಾ.ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಇತರ ಪಕ್ಷಗಳಿಂದ ಬಿಜೆಪಿಗೆ ನೂತನ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮ ಪೂರ್ಣಗೊಳ್ಳುವ ಸಮಯದಲ್ಲಿ ಕಾರ್ಯಕರ್ತ ಶಿವರಾಜುಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಶಿವರಾಜು ಅವರನ್ನು ಅಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದರೂ, ಆದರೆ ಅಷ್ಟರಲ್ಲೇ ಬಿಜೆಪಿ ಕಾರ್ಯಕರ್ತ ಶಿವರಾಜು ಮೃತಪಟ್ಟಿದ್ದಾನೆ.

ಸ್ಕೈ ವಿಲ್ಲಾ ಮಾದರಿ ನಿಮ್ಮ ಕನಸಿನ ಅಪಾರ್ಟ್ಮೆಂಟ್ ಇಲ್ಲಿದೆ. ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ

Recommended Video

      Shimoga: ಗ್ರಾಮದಲ್ಲಿ ಪತ್ತೆಯಾಯ್ತು 8 ಅಡಿ ಉದ್ದದ ಕಾಳಿಂಗ ಸರ್ಪ! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+