ರಾಯಚೂರು: ಹೆಲಿಕಾಪ್ಟರ್‌ನಲ್ಲಿ ಬರುತ್ತಿದೆ ಯಡಿಯೂರಪ್ಪ ಕನ್ನಡಕ

ರಾಯಚೂರು, ಡಿಸೆಂಬರ್ 13: ಪರಿವರ್ತನಾ ಯಾತ್ರೆಯಲ್ಲಿ ಕನ್ನಡ ಕಳೆದುಕೊಂಡು ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ಯಡಿಯೂರಪ್ಪ ಅವರಿಗೆ ಕನ್ನಡಕವನ್ನು ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ತರಲಾಗುತ್ತಿದೆ.

ರಾಯಚೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ಯಡಿಯೂರಪ್ಪ ಅವರು ತಮ್ಮ ವಿಶೇಷ ಕನ್ನಡಕ ಕಳೆದುಕೊಂಡಿದ್ದಾರೆ. ದೇವಸ್ಥಾನದಲ್ಲಿ ಗದ್ದಲ ಹೆಚ್ಚಾಗಿ ಹೂಮಾಲೆ ಹಾಕಿ ತೆಗೆಯುವಾಗ ಗದ್ದಲದಲ್ಲಿ ಕನ್ನಡಕ ಮಿಸ್ ಆಗಿದೆ.

Yeddyurappa lost his special spectacles in Raichur

ಕನ್ನಡಕ ಇಲ್ಲದ ಕಾರಣ ಕಣ್ಣು ಸಮಸ್ಯೆ ಉಂಟಾಗಿ ಯಡಿಯೂರಪ್ಪ ಅವರು ರಾಯಚೂರಿನ ಖಾಸಗಿ ಹೊಟೆಲ್ ಒಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕನ್ನಡಕ ತರಲು ಯಡಿಯೂರಪ್ಪ ಅವರ ಆಪ್ತ ಸಂತೋಷ್ ಬೆಂಗಳೂರಿಗೆ ತೆರಳಿದ್ದು, ಇಂದು ಹೆಲಿಕಾಪ್ಟರ್ ಮೂಲಕ ಕನ್ನಡವನ್ನು ತರಲಿದ್ದಾರೆ.

ಕನ್ನಡಕವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಯಡಿಯೂರಪ್ಪ ಅವರು ಕನ್ನಡಕ ಕೈಸೇರಿದ ಬಳಿಕ ಮಾಜಿ ಸಚಿವ ಸಿಸಿ ಪಾಟೀಲ್ ಕುಟುಂಬದವರ ಮದುವೆಗೆ ತೆರಳಿದ್ದಾರೆ.

ಯಡಿಯೂರಪ್ಪ ಅವರಿಗೆ ಕಣ್ಣಿನ ಸಮಸ್ಯೆ ಉಂಟಾಗಿದ್ದ ಕಾರಣ ವೈದ್ಯರು ವಿಶೇಷ ಕನ್ನಡಕ ಸೂಚಿಸಿದ್ದರು, ಪರಿವರ್ತನಾ ಯಾತ್ರೆಯಲ್ಲಿ ರಸ್ತೆ ರ್ಯಾಲಿಯ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ಕಪ್ಪು ಬಣ್ಣದ ಕನ್ನಡಕವನ್ನು ಧರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+