ಸಿಂಧನೂರು ಬಳಿ ಅಪಘಾತ; ಗರ್ಭಿಣಿ ಸೇರಿ ಮೂವರ ಸಾವು

ರಾಯಚೂರು, ಏಪ್ರಿಲ್ 24: ರಾಯಚೂರು ಜಿಲ್ಲೆಯ ಸಿಂಧನೂರಿನ ಉಮಲೂಟಿ ಸಮೀಪ ನಡೆದ ಅಪಘಾತದಲ್ಲಿ ಚಿಕ್ಕ ಮಗು ಮತ್ತು ಗರ್ಭಿಣಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಚಿಕ್ಕಬೇರ್ಗಿಯ ಪರಸಣ್ಣ, ಕನಕಮ್ಮ ದಂಪತಿ ಹಾಗೂ ಅವರ ಮಗಳು ನಾಗಮ್ಮ ಎಂಬುವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗರ್ಭಿಣಿಯ ಆರೋಗ್ಯ ಪರಿಶೀಲನೆಗಾಗಿ ಚಿಕ್ಕಬೇರ್ಗಿ ಗ್ರಾಮದಿಂದ ಮೊಪೆಡ್ ‍ನಲ್ಲಿ ಬಾಗಲಕೋಟೆಯ ಇಳಕಲ್ ಗೆ ಹೊರಟಿದ್ದ ಸಂದರ್ಭ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

Three People Including Pregnant Died In Accident Near Sindhanuru

ಪರಸಣ್ಣ ಹಾಗೂ ಮಗಳು ನಾಗಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗರ್ಭಿಣಿ ಕನಕಮ್ಮ ಸಿಂಧನೂರು ತಾಲೂಕು ಆಸ್ಪತ್ರೆ ರವಾನಿಸುವಾಗ ಸಾವನ್ನಪ್ಪಿದ್ದಾರೆ. ಇಳಕಲ್ ಹತ್ತಿರವಾಗುತ್ತದೆ ಎಂದು ಮೊಪೆಡ್ ನಲ್ಲೇ ಪತ್ನಿಯನ್ನು ಆಸ್ಪತ್ರೆಗೆ ಪರಸಣ್ಣ ಕರೆದೊಯ್ಯುತ್ತಿದ್ದ ವೇಳೆ ಅಪಘಾತವಾಗಿದೆ. ಘಟನೆ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+