ಗೌಡರ ಕುಟುಂಬದ ಜನಪ್ರಿಯತೆಗೆ ಸಿದ್ರಾಮಯ್ಯಗೆ ಭಯ: ಅನಿತಾ ಕುಮಾರಸ್ವಾಮಿ

ರಾಯಚೂರು, ಮಾರ್ಚ್ 22 : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಹಾಗೂ ರೇವಣ್ಣ ಇಬ್ಬರು ಮಾತ್ರ ಸ್ಪರ್ಧೆ ಮಾಡುತ್ತಾರೆ. ನಮ್ಮ ಕುಟುಂಬದಿಂದ ಆಕಾಂಕ್ಷಿಗಳು ಇದ್ದೇವೆ. ಆದರೆ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂದು ಅನಿತಾ ಕುಮಾರಸ್ವಾಮಿ ಅವರು ಸಿಂಧನೂರಿನಲ್ಲಿ ಗುರುವಾರ ಹೇಳಿದ್ದಾರೆ.

ಇಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದರಿಂದ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಹಾಗೆ ನೋಡಿದರೆ ನಮ್ಮ ಕುಟುಂಬದಿಂದ ಆಕಾಂಕ್ಷಿಗಳು ಇದ್ದೇವೆ. ಆದರೆ ಅಂತಿಮವಾಗಿ ಇಬ್ಬರೇ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಹಾಗೂ ಮಂಜೇಗೌಡ ಮಧ್ಯದ ಫೋನ್ ಸಂಭಾಷಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೊಳೆನರಸೀಪುರದಲ್ಲಿ ದೇವೇಗೌಡರ ಕುಟುಂಬಕ್ಕಿರುವ ಜನಪ್ರೀತಿಯ ಬಗ್ಗೆ ಭಯ ಇದೆ. ಹೀಗಾಗಿಯೇ ದೇವೇಗೌಡರ ಕುಟುಂಬವನ್ನು ಸೋಲಿಸಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.

Siddaramaiah afraid of Deve Gowdas family: Anitha Kumaraswamy

ಈಗ ರಾಜ್ಯದಲ್ಲಿ ಮಹಿಳೆಯರಿಗೆ ಟಿಕೆಟ್ ಕಡಿಮೆ ಸಂಖ್ಯೆಯಲ್ಲಿ ನೀಡಲಾಗುತ್ತಿದೆ. ಶೇಕಡಾ 33ರಷ್ಟು ಮಹಿಳಾ ಮೀಸಲಾತಿ ಬಂದರೆ ಹೆಚ್ಚಿನ ಸ್ಥಾನ ಮಹಿಳೆಯರಿಗೆ ಸಿಗಲಿದೆ. ಈಗ ಯಾವ ಪಕ್ಷವೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ. ಗೆಲ್ಲುವುದೇ ಎಲ್ಲ ಪಕ್ಷಗಳಿಗೆ ಆದ್ಯತೆ ಆಗಿದೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

ಇನ್ನು ಜೆಡಿಎಸ್ ನ ಮಹಿಳಾ ಸಮಾವೇಶಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಕುಳಿತುಕೊಳ್ಳಲು ಕುರ್ಚಿಗಳಿಲ್ಲದೆ ಪರದಾಟವಾಗಿದೆ. ವೇದಿಕೆ ಮುಂಭಾಗದ ನೆಲದ ಮೇಲೆ ಮಹಿಳೆಯರು ಕುಳಿತುಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+