ದೆಹಲಿಯಲ್ಲಿ ಯಡಿಯೂರಪ್ಪ ಭೇಟಿಯಾದ ಬಿ.ವಿ.ನಾಯಕ್!

Recommended Video

      ದೆಹಲಿಯಲ್ಲಿ ಯಡಿಯೂರಪ್ಪರನ್ನ ಭೇಟಿ ಮಾಡಿದ ರಾಯಚೂರು ಕಾಂಗ್ರೆಸ್ ಎಂಪಿ | Oneindia kannada

      ರಾಯಚೂರು, ಜನವರಿ 04 : ರಾಯಚೂರು ಸಂಸದ, ಕಾಂಗ್ರೆಸ್ ನಾಯಕ ಬಿ.ವಿ.ನಾಯಕ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ನವದೆಹಲಿಯಲ್ಲಿ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.

      2014ರ ಚುನಾವಣೆಯಲ್ಲಿ ಬಿ.ವಿ.ನಾಯಕ್ ಅವರು 443659 ಮತಗಳನ್ನು ಪಡೆದು ರಾಯಚೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಿದೆ. ಆದ್ದರಿಂದ, ಅವರು ಪಕ್ಷ ತೊರೆಯಲು ಮುಂದಾಗಿದ್ದಾರೆ.

      ಬಿ.ವಿ.ನಾಯಕ್ ಅವರು ಡಿಸೆಂಬರ್ 28ರಂದು ನವದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಪಕ್ಷ ಸೇರ್ಪಡೆ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭೆ ಚುನಾವಣೆ ಹತ್ತಿರವಾಗುವಾಗ ಪಕ್ಷ ಬಿಡುವ ಸಾಧ್ಯತೆ ಇದೆ.

      ಬಿಜೆಪಿ ಸೇರಿದರೆ 2019ರ ಲೋಕಸಭಾ ಚುನಾವಣೆ ಟಿಕೆಟ್ ನೀಡಬೇಕು ಎಂದು ಬಿ.ವಿ.ನಾಯಕ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಯಡಿಯೂರಪ್ಪ ಅವರು ಈ ಕುರಿತು ಇದುವರೆಗೂ ಅಂತಿಮ ತೀರ್ಮಾನವನ್ನು ಕೈಗೊಂಡಿಲ್ಲ.

      ನಾಯಕರ ವಿರುದ್ಧ ಅಸಮಾಧಾನ

      ನಾಯಕರ ವಿರುದ್ಧ ಅಸಮಾಧಾನ

      ರಾಯಚೂರು ಸಂಸದ ಬಿ.ವಿ.ನಾಯಕ್ ಅವರ ಜಿಲ್ಲಾ ಕಾಂಗ್ರೆಸ್‌ ನಾಯಕರ ವರ್ತನೆಗೆ ಅಸಮಾಧಾನಗೊಂಡಿದ್ದಾರೆ. ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳಿವೆ. ಆದ್ದರಿಂದ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ದೆಹಲಿಯಲ್ಲಿ ಭೇಟಿ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

      ಎನ್.ಎಸ್.ಬೋಸರಾಜು ಒಪ್ಪಿಗೆ

      ಎನ್.ಎಸ್.ಬೋಸರಾಜು ಒಪ್ಪಿಗೆ

      ರಾಯಚೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಎನ್.ಎಸ್.ಬೋಸರಾಜು ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಡುವ ಮೂಲಕ ನನ್ನ ರಾಜಕೀಯ ಜೀವನ ಹಾಳು ಮಾಡುತ್ತಿದ್ದಾರೆ ಎಂಬುದು ಬಿ.ವಿ.ನಾಯಕ್ ಆರೋಪ. ಇಬ್ಬರು ನಮ್ಮ ನಡುವೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳುತ್ತಿದ್ದಾರೆ.

      ಗಂಗಾಧರ್ ನಾಯಕ್ ಆಕಾಂಕ್ಷಿ

      ಗಂಗಾಧರ್ ನಾಯಕ್ ಆಕಾಂಕ್ಷಿ

      ಗಂಗಾಧರ್ ನಾಯಕ್ ಅವರು ರಾಯಚೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. 'ಯಡಿಯೂರಪ್ಪ ಮತ್ತು ಬಿ.ವಿ.ನಾಯಕ್ ದೆಹಲಿಯಲ್ಲಿ ಭೇಟಿ ಮಾಡಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಂಡು ಅವರಿಗೆ ಟಿಕೆಟ್ ನೀಡಿದರೆ, ಗೆಲುವಿಗಾಗಿ ನಾನು ಕೆಲಸ ಮಾಡುವುದಿಲ್ಲ' ಎಂದು ಗಂಗಾಧರ್ ಸ್ಪಷ್ಟಪಡಿಸಿದ್ದಾರೆ.

      ಕಾಂಗ್ರೆಸ್ ಬಿಡುವುದಿಲ್ಲ

      ಕಾಂಗ್ರೆಸ್ ಬಿಡುವುದಿಲ್ಲ

      ಕಾಂಗ್ರೆಸ್ ಹಿರಿಯ ನಾಯಕ ಎನ್.ಎಸ್.ಬೋಸರಾಜು ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಬಿ.ವಿ.ನಾಯಕ್ ನಮ್ಮ ನಾಯಕರು ಅವರು ಪಕ್ಷ ತೊರೆಯುವುದಿಲ್ಲ. ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಸುಳ್ಳು. ಕಾಂಗ್ರಸ್ ಟಕೆಟ್‌ನಿಂದಲೇ ಅವರು ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

      ಒಮ್ಮತದ ಅಭ್ಯರ್ಥಿ ಯಾರು?

      ಒಮ್ಮತದ ಅಭ್ಯರ್ಥಿ ಯಾರು?

      2014ರ ಚುನಾವಣೆಯಲ್ಲಿ ಡಿ.ಬಿ.ನಾಯಕ್ ಅವರು ಜೆಡಿಎಸ್‌ನಿಂದ ಅಭ್ಯರ್ಥಿಯಾಗಿದ್ದರು. 21706 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಅಭ್ಯರ್ಥಿ ಯಾರು? ಎಂಬ ಪ್ರಶ್ನೆ ಎದ್ದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+