Lok Sabha Election 2024 Result: ರಾಯಚೂರಿನಲ್ಲಿ ಬಿಜೆಪಿ ಮುನ್ನಡೆ
ರಾಯಚೂರು ಜೂನ್ 04: ರಾಯಚೂರು ಎಸ್.ಟಿ.ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಿಧಾನವಾಗಿ ಸಾಗಿದೆ.
ಮೊದಲನೇ ಸುತ್ತಿನಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ಕುಮಾರ ನಾಯಕ 3844 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ 3429 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 415 ಮತಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು.

ಎರಡನೇ ಸುತ್ತಿನಲ್ಲೂ ಕಾಂಗ್ರೆಸ್‌ನ ಜಿ.ಕುಮಾರ ನಾಯಕ 17,854 ಮತಗಳನ್ನು ಪಡೆಯುವ ಮೂಲಕ ಹಿನ್ನೆಡೆ ಸಾಧಿಸಿದ್ದು, ಬಿಜೆಪಿಯ ರಾಜಾ ಅಮರೇಶ್ವರ ನಾಯಕ 19,008 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ 1154 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.
ಇನ್ನೂ ಮೂರನೇ ಸುತ್ತಲ್ಲಿ ಕಾಂಗ್ರೆಸ್ನ ಜಿ.ಕುಮಾರ ನಾಯಕ 22,669 ಮತಗಳಿಂದ ಹಿನ್ನಡೆ ಸಾಧಿಸಿದ್ದು ಬಿಜೆಪಿಯ ರಾಜಾ ಅಮರೇಶ್ವರ ನಾಯಕ 22,794 ಮತಗಳನ್ನು ಪಡೆಯುವ ಮೂಲಕ ಮುನ್ನಡೆ ಸಾಧಿಸಿದ್ದಾರೆ. ಅಂದರೆ ಬಿಜೆಪಿ 1125 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.
ಆರಂಭದಲ್ಲಿ ಖರ್ಚಿ ಕೊರತೆಯಿಂದಾಗಿ ರಾಯಚೂರಿನಲ್ಲಿ ಮತ ಎಣಿಕೆ ವಿಳಂಬವಾಯಿಯಿತು. ಮತಗಟ್ಟೆಗೆ ಆಗಮಿಸಿದ ಸಿಬ್ಬಂದಿಗಳಿಗೆ ಖುರ್ಚಿ ಕೊರತೆ ಕಾರಣ ಮತ ಎಣಿಕೆ ಕಾರ್ಯ ತಡವಾಗಿ ಆರಂಭವಾಯಿತು.
ರಾಯಚೂರು ಲೋಕಸಭಾ ಚುನಾವಣೆ ಹಾದಿ:
ರಾಯಚೂರು ಲೋಕಸಭಾ ಚುನಾವಣೆ 1957 ಹಾಗೂ 1962 ಕಾಂಗ್ರೆಸ್ ಜಯ ಸಾಧಿಸಿತ್ತು. 1967ರಲ್ಲಿ ಸ್ವತಂತ್ರ ಪಕ್ಷ ಅಧಿಕಾರಕ್ಕೆ ಬಂದರೆ, 1971, 1977, 1980, 1984, 1986, 1989, 1091ರಲ್ಲಿ ಸತತ ಏಳು ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬಂತು.
1996ರಲ್ಲಿ ಜನತಾ ದಳ, 1998, 1999, 2004ರಲ್ಲಿ ಕಾಂಗ್ರೆಸ್, 2009ರಲ್ಲಿ ಬಿಜೆಪಿ, 2014ರಲ್ಲಿ ಕಾಂಗ್ರೆಸ್, 2019ರಲ್ಲಿ ಬಿಜೆಪಿ ಅಧಿಕಾರ ಪಡೆದುಕೊಂಡಿತು.
ಕಾಂಗ್ರೆಸ್ ಭದ್ರಕೋಟೆ:
ರಾಯಚೂರು ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮಾಜಿ ಸಂಸದ ಎ.ವೆಂಕಟೇಶ ನಾಯಕ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ ಏಕೈಕ ಸಂಸದರಾಗಿದ್ದರು. ವೆಂಕಟೇಶ ನಾಯಕ ಅವರ ಪುತ್ರ ಬಿ.ವಿ.ನಾಯಕ 2014ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು. ಹಾಗಾಗಿ ಈ ಕ್ಷೇತ್ರದಲ್ಲಿ ತಂದೆಯ ಬಳಿಕ ಪುತ್ರನೂ ಸಂಸದರಾಗಿರುವುದನ್ನು ಗಮನಿಸಬಹುದು.












Click it and Unblock the Notifications